ಕಲಬುರಗಿ, ಮಾರ್ಚ್ 24: ಅಕ್ರಮ ಮರಳು (sand) ಗಾರಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದು, 7.50 ಲಕ್ಷ ರೂ. ಮೌಲ್ಯದ ಮರಳು ಜಪ್ತಿ ಮಾಡಲಾಗಿದೆ. ಜಿಲ್ಲೆಯ ಅಫಜಲಪುರ ಠಾಣೆಯ ಪೊಲೀಸರ ಕಾರ್ಯಾಚರಣೆ ನಡೆಸಿ ದೇಸಾಯಿ ಕಲ್ಲೂರ, ಗುಡ್ಡೆವಾಡಿ, ಘತ್ತರಗ ಗ್ರಾಮದ ಅಡ್ಡೆ ಮೇಲೆ ದಾಳಿ ಮಾಡಲಾಗಿದೆ. 380 ಲೋಡ್ನಷ್ಟು ಅಕ್ರಮ ಮರಳು ಜಪ್ತಿ ಮಾಡಲಾಗಿದೆ. ಭೀಮಾ ನದಿಯಿಂದ ಅಕ್ರಮವಾಗಿ ಮರಳನ್ನು ತಂದು ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಮರಳು ಅಡ್ಡೆ ಮೇಲೆ ದಾಳಿ ಮಾಡಿ ಜಪ್ತಿ ಮಾಡಲಾಗಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಅನ್ನೊದು ಓಪನ್ ಸೀಕ್ರೆಟ್ ಆಗಿದೆ. ಅಕ್ರಮ ಮರಳುಗಾರಿಕೆಯವರ ಪುಂಡಾಟಕ್ಕೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರ ಚುನಾವಣಾ ಫಂಡ್ ಗಾಗಿ ಮಾಫಿಯಾ ನಡೆಸುತ್ತಿದ್ದಾರೆ ಅಂತಾ ಬಿಜೆಪಿ ಶಾಸಕ ಒಬ್ಬರು ಬಾಂಬ್ ಹಾಕಿದ್ದರು.
ಇದನ್ನೂ ಓದಿ: ಮೂಡಾ ಕಮಿಷನರ್ ಲೋಕಾಯುಕ್ತ ಬಲೆಗೆ ವಿಚಾರ: ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್ ಹೇಳಿದ್ದಿಷ್ಟು
ಪ್ರತಿನಿತ್ಯ ನೂರಾರು ಲೋಡ್ ಮರಳನ್ನು ರಾತ್ರೋರಾತ್ರಿ ಸಾಗಾಟ ಮಾಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ. ಮರಳು ಮಾಫಿಯಾದಿಂದ ಮಂತ್ಲೀ ಮಾಮೂಲಿ ಪಡೆದುಕೊಂಡು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕೆಲ ಅಧಿಕಾರಿಗಳು ಅಕ್ರಮಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಇನ್ನು ಮಾಫಿಯಾದ ಪುಂಡಾಟ ಹೇಗಿದೆ ಅಂದರೆ ಅತೀ ವೇಗವಾಗಿ ಮರಳುನ್ನು ಸಾಗಿರುವ ಬರದಲ್ಲಿ ಬೇಕಾಬಿಟ್ಟಿ ಚಾಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ: ವಿಜಯೇಂದ್ರ ಕ್ಷೇತ್ರದಲ್ಲಿ ಗುಡುಗಿದ ಕೆಎಸ್ ಈಶ್ವರಪ್ಪ
ನಂಬರ್ ಪ್ಲೇಟ್ಗೆ ಗ್ರೀಸ್ ಮತ್ತು ಮಣ್ಣನ್ನು ಮೆತ್ತಿಕೊಂಡು ವೇಗವಾಗಿ ಮನಸೋಯಿಚ್ಚೆ ಚಲಾಯಿಸುತ್ತಿದ್ದಾರೆ. ಇನ್ನು ಬಿ.ಸಿ.ರೋಡ್ ಟೋಲ್ನ ಕ್ಯಾಮೆರಾ ಕಣ್ತಪ್ಪಿಸಲು ಓನ್ ವೇ ನಲ್ಲಿ ಲಾರಿಗಳನ್ನು ಚಲಾಯಿಸಿಕೊಂಡು ಹೋಗಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಇನ್ನು ಜನರು ಈ ಬಗ್ಗೆ ಜಿಲ್ಲಾಢಿಳಿತ ಮತ್ತು ಪೊಲೀಸ್ ಇಲಾಖೆ ಗಮನಕ್ಕೆ ಎಷ್ಟು ಬಾರೀ ತಂದ್ರು ಕೂಡ ಕ್ಯಾರೆ ಅಂದಿಲ್ಲ. ಇನ್ನು ಕೆಲವರು ಮರಳು ತೆಗೆಯುವ ಲೈವ್ ವೀಡಿಯೋ ಮಾಡಿ ಅಧಿಕಾರಿಗಳಿಗೂ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.