Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಡಾ ಕಮಿಷನರ್ ಲೋಕಾಯುಕ್ತ ಬಲೆಗೆ ವಿಚಾರ: ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್ ಹೇಳಿದ್ದಿಷ್ಟು

ನಗರದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೂಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಕಾಂಗ್ರೆಸ್ ಸರ್ಕಾರ ಹಣ ಪಡೆದು ಅಧಿಕಾರಿಗಳ ವರ್ಗಾವಣೆ ನಡೆಸಿದೆ ಎಂಬ ಆರೋಪವಿತ್ತು. ಮನ್ಸೂರ್ ಅಲಿ ಮೂಡಾ ಕಮೀಷನರ್ ಆಗಿ ನೇಮಕವಾಗಿ ಬಂದಾಗ ಈ ರೀತಿಯ ಗುಸುಗುಸು ಇತ್ತು ಎಂದು ಹೇಳಿದ್ದಾರೆ.

ಮೂಡಾ ಕಮಿಷನರ್ ಲೋಕಾಯುಕ್ತ ಬಲೆಗೆ ವಿಚಾರ: ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್ ಹೇಳಿದ್ದಿಷ್ಟು
ಆಯುಕ್ತ ಮನ್ಸೂರ್​ ಅಲಿ, ರವಿಶಂಕರ್ ಮಿಜಾರ್
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Mar 24, 2024 | 6:20 PM

ಮಂಗಳೂರು, ಮಾರ್ಚ್​ 24: ಕಾಂಗ್ರೆಸ್ ಸರ್ಕಾರ ಹಣ ಪಡೆದು ಅಧಿಕಾರಿಗಳ ವರ್ಗಾವಣೆ ನಡೆಸಿದೆ ಎಂಬ ಆರೋಪವಿತ್ತು. ಮನ್ಸೂರ್ ಅಲಿ ಮೂಡಾ (MUDA) ಕಮೀಷನರ್ ಆಗಿ ನೇಮಕವಾಗಿ ಬಂದಾಗ ಈ ರೀತಿಯ ಗುಸುಗುಸು ಇತ್ತು ಎಂದು ಮೂಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್ ಹೇಳಿದ್ದಾರೆ. ನಗರದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹಣ ಸಂಗ್ರಹಿಸಲಾಗುತ್ತಿದೆ. ಕಾಂಗ್ರೆಸ್​​ಗೆ ಕರ್ನಾಟಕ ಸರ್ಕಾರ ಎಟಿಎಂ ಆಗಿದೆ ಎಂಬ ಆರೋಪವಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳು ಹಣ ಪಡೆದು ಸರ್ಕಾರಕ್ಕೆ ನೀಡುತ್ತಿರುವ ಅನುಮಾನವಿದೆ. ನಮ್ಮ ಅವಧಿಯಲ್ಲಿ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಆಗಿತ್ತು. ಈ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ಸರಿಯಾದ ತನಿಖೆ ನಡೆಸಲಿ ಎಂದಿದ್ದಾರೆ.

ಇದನ್ನೂ ಓದಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್

ನಿನ್ನೆ 25 ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದಿದ್ದಾರೆ. ಟಿಡಿಆರ್​ ಕ್ಲಿಯರೆನ್ಸ್ ಮಾಡಲು 25 ಲಕ್ಷ ರೂ. ಲಂಚಕ್ಕೆ ಅಧಿಕಾರಿ ಬೇಡಿಕೆ ಇಟ್ಟಿದ್ದರು. ಸದ್ಯ ಮೂಡಾ ಕಮಿಷನರ್ ಮನ್ಸೂರ್ ಅಲಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಆಯುಕ್ತ ಮನ್ಸೂರ್​ ಅಲಿ ಜೊತೆ ಬ್ರೋಕರ್ ಸಲೀಂ ಎಂಬುವವರನ್ನು ಕೂಡ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ವಶಕ್ಕೆ ಪಡೆದುಕೊಂಡಿದ್ದರು.

ಲಂಚ ಸ್ವೀಕರಿಸುವಾಗ ಬಲೆಗೆಬಿದ್ದ ಗ್ರಾಮ ಆಡಳಿತಾಧಿಕಾರಿ

ದಾವಣಗೆರೆ: ವಿಕಲಚೇತನರಿಂದ ಲಂಚ ಸ್ವೀಕರಿಸುವಾಗ ಗ್ರಾಮ ಆಡಳಿತಾಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ನ್ಯಾಮತಿಯ ಗ್ರಾಮ ಆಡಳಿತಾಧಿಕಾರಿ ಗಣೇಶ್ ಕೆಜಿ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ. ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದ ನರಸಿಂಹ ಸ್ವಾಮೀ‌ ದೇವಸ್ಥಾನದಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಕಾಸರಗೋಡಿನ ಮನೆಯಲ್ಲಿ ಸಿಕ್ತು 2000 ಮುಖಬೆಲೆಯ ಬರೋಬ್ಬರಿ 7 ಕೋಟಿ ರೂ. ನಗದು!

ಕುಂಕುವಾ ಗ್ರಾಮದ ವೀರೇಶ್ ಅವರ ಸಹೋದರ ಹರ್ಷ ಎಂಬುವರಿಗೆ ಅಂಗವಿಕ ಪ್ರಮಾಣ ಪತ್ರ ನೀಡಲು ಆರು ಸಾವಿರ ರೂ. ಬೇಡಿಕೆ ಇಟ್ಟಿದ್ದ ಅಧಿಕಾರಿ ಗಣೇಶ್. ಐದು ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪೂರೆ ನೇತ್ರತ್ವದಲ್ಲಿ ಡಿಎಸ್ಪಿ ಕೆ. ಕಲಾವತಿ, ಇನ್ಸ್ ಪೇಕ್ಟರ್​​ಗಳಾದ ಎಚ್ ಎಸ್ ರಾಷ್ಟ್ರಪತಿ, ಮುಧುಮೂದನ್ ದಾಳಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.