ಮಾಸ್ಕ್ ಧರಿಸದವರನ್ನು ತರಾಟೆಗೆ ತೆಗೆದುಕೊಂಡ ಕಲಬುರಗಿ ಟ್ರಾಫಿಕ್ ಪಿಎಸ್ಐ
ಬೈಕ್ ಸವಾರ ರಮೇಶ್ ನಾನು ದಂಡವನ್ನು ಕಟ್ಟುವುದಿಲ್ಲ. ಬೈಕ್ನ ತೆಗೆದುಕೊಂಡು ಹೋಗುವುದಕ್ಕೂ ಬಿಡುವುದಿಲ್ಲ ಎಂದು ಪಟ್ಟು ಬಿದ್ದರು. ದಂ ನೀಡಲೇ ಬೇಕು ಎಂದು ಪಿಎಸ್ಐ ಭಾರತಿಬಾಯಿ ಸೂಚನೆ ನೀಡಿದರು. ಸುಮಾರು ಅರ್ಧ ಗಂಟೆ ವಾಗ್ವಾದ ನಂತರ 500 ರೂಪಾಯಿ ದಂಡ ಕಟ್ಟಿ ಬೈಕ್ ಸವಾರ ತೆರಳಿದರು.
ಕಲಬುರಗಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಜನರು ಮಾತ್ರ ತೀರ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗೆ ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ಜಿಲ್ಲೆಯಲ್ಲಿ ಟ್ರಾಫಿಕ್ ಪಿಎಸ್ಐ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಸ್ಕ್ ವಿಚಾರವಾಗಿ ಪೊಲೀಸರ ಜೊತೆ ಸಾರ್ವಜನಿಕರ ವಾಗ್ವಾದ ನಡೆದಿದೆ. ಈ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಿನ್ನೆ ಸಂಜೆ (ಏಪ್ರಿಲ್ 18) ನಡೆದಿದೆ. ಪರಿಪೂರ್ಣ ಮಾಸ್ಕ್ ಧರಿಸದೇ ಮತ್ತು ಹೆಲ್ಮೆಟ್ ಧರಿಸದೇ ಬೈಕ್ ಸವಾರ ರಮೇಶ್ ಬರುತ್ತಿದ್ದರು. ಈ ವೇಳೆ ಸರ್ಕಾರದ ಆದೇಶದಂತೆ ದಂಡ ಕಟ್ಟುವಂತೆ ಪಿಎಸ್ಐ ಹೇಳಿದರು. ಇದರಿಂದ ಕೆರಳಿ ಪಿಎಸ್ಐ ಜೊತೆ ಬೈಕ್ ಸವಾರ ರಮೇಶ್ ವಾಗ್ವಾದಕ್ಕಿಳಿದ್ದರು.
ಬೈಕ್ ಸವಾರ ರಮೇಶ್ ನಾನು ದಂಡವನ್ನು ಕಟ್ಟುವುದಿಲ್ಲ. ಬೈಕ್ನ ತೆಗೆದುಕೊಂಡು ಹೋಗುವುದಕ್ಕೂ ಬಿಡುವುದಿಲ್ಲ ಎಂದು ಪಟ್ಟು ಬಿದ್ದರು. ದಂಡ ನೀಡಲೇಬೇಕೆಂದು ಪಿಎಸ್ಐ ಭಾರತಿಬಾಯಿ ಸೂಚನೆ ನೀಡಿದರು. ಸುಮಾರು ಅರ್ಧ ಗಂಟೆ ವಾಗ್ವಾದ ನಂತರ 500 ರೂಪಾಯಿ ದಂಡ ಕಟ್ಟಿ ಬೈಕ್ ಸವಾರ ತೆರಳಿದರು.
ಮಾಸ್ಕ್ ಧರಿಸದವರಿಗೆ 250 ರೂಪಾಯಿ ದಂಡ ಶಿವಮೊಗ್ಗ: ಕೊರೊನಾ ಎರಡನೇ ಅಲೆ ಸ್ಪೋಟ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ಪೊಲೀಸ್ ತಂಡ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸುತ್ತಿದೆ. ಹೆಚ್ಚುವರಿ ಎಸ್ಪಿ ಎಚ್. ಟಿ. ಶೇಖರ್ ನೇತೃತ್ವದಲ್ಲಿ ಮಾಸ್ಕ್ ಧರಿಸದವರಿಗೆ 250 ರೂಪಾಯಿ ದಂಡ ಹಾಕುತ್ತಿದ್ದು, ಬಸ್ ನಿಲ್ದಾಣ, ಆಟೋ ನಿಲ್ದಾಣ, ರೇಲ್ವೆ ನಿಲ್ದಾಣದಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.
ಮಾಸ್ಕ್ ಹಾಕಿಕೊಳ್ಳದೇ ಇರುವವರಿಗೆ ದಂಡ ಕಾರವಾರದ ನಗರಸಭೆ ಸಿಬ್ಬಂದಿಗಳು ಪ್ರಯೋಗ ನೀಡಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಿಂತು ನಗರಸಭೆ ಸಿಬ್ಬಂದಿಗಳು ದಂಡ ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲೂ ಮಾಸ್ಕ್ ವಿಚಾರಕ್ಕೆ ಪೊಲೀಸರು ಮತ್ತು ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಈ ಘಟನೆ ನಿನ್ನೆ ನಡೆದಿದ್ದು, ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕರು ಮಾಸ್ಕ್ ಹಾಕಿಲ್ಲವೆಂದು ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ
ಚಾಮರಾಜನಗರ ಜಿಲ್ಲಾಡಳಿತದಿಂದ ಕೊವಿಡ್ ತಡೆಗೆ ವಿನೂತನ ಪ್ರಯೋಗ; ಕೊರೊನಾ ಸುರಕ್ಷಾ ಪಡೆಗೆ ಚಾಲನೆ
ವಾಟ್ಸ್ಆ್ಯಪ್ ಪಿಂಕ್ ಲಿಂಕ್ ನಿಮ್ಮ ಮೊಬೈಲ್ಗೂ ಬರಬಹುದು ಎಚ್ಚರ..; ಹಾಗೊಮ್ಮೆ ಲಿಂಕ್ ಬಂದರೆ ನೀವೇನು ಮಾಡ್ಬೇಕು? (Kalaburagi traffic psi fined for not wearing mask)
Published On - 12:51 pm, Mon, 19 April 21