ಕಾಡು ಪ್ರಾಣಿಗಳನ್ನ ಕೊಂದು ಟಿಕ್ ಟಾಕ್ ಮಾಡಿದ್ದ ಆರೋಪಿಗಳು ಅಂದರ್​

ಕಲಬುರಗಿ: ಇತ್ತೀಚೆಗೆ ಚೀನಾದ ಟಿಕ್ ಟಾಕ್ ಎಲ್ಲಡೆ ತನ್ನ ಸದ್ದನ್ನು ಜೋರಾಗಿ ಮಾಡ್ತಿದೆ. ಅನೇಕರು ತಮಗಿಷ್ಟವಾದ ವಿಡಿಯೋಗಳನ್ನು ಮಾಡಿ, ಟಿಕ್ ಟಾಕ್​ನಲ್ಲಿ ಹಾಕಿ, ಲೈಕ್, ಕಮೆಂಟ್​ಗಳನ್ನು ನೋಡಿ ಆನಂದ ಪಡ್ತಿದ್ದಾರೆ. ಇದು ಇದಕ್ಕಷ್ಟೇ ಸೀಮಿತವಾಗಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲ. ಆದ್ರೆ ಕಲಬುರಗಿಯಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ಕೊಂದು ಟಿಕ್ ಟಾಕ್ ವಿಡಿಯೋ ಮಾಡುತ್ತಿರುವವರ ಹಾವಾಳಿ ಹೆಚ್ಚಾಗಿದೆ. ಇದು ಅರಣ್ಯ ಇಲಾಖೆಯ ನಿದ್ದೆಗೆಡಿಸುತ್ತಿದೆ. ಇಬ್ಬರು ಆರೋಪಿಗಳ ಬಂಧನ: ಕಲಬುರಗಿ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ದಿನದ ಹಿಂದೆ […]

ಕಾಡು ಪ್ರಾಣಿಗಳನ್ನ ಕೊಂದು ಟಿಕ್ ಟಾಕ್ ಮಾಡಿದ್ದ ಆರೋಪಿಗಳು ಅಂದರ್​
Follow us
ಸಾಧು ಶ್ರೀನಾಥ್​
| Updated By:

Updated on: May 24, 2020 | 2:37 PM

ಕಲಬುರಗಿ: ಇತ್ತೀಚೆಗೆ ಚೀನಾದ ಟಿಕ್ ಟಾಕ್ ಎಲ್ಲಡೆ ತನ್ನ ಸದ್ದನ್ನು ಜೋರಾಗಿ ಮಾಡ್ತಿದೆ. ಅನೇಕರು ತಮಗಿಷ್ಟವಾದ ವಿಡಿಯೋಗಳನ್ನು ಮಾಡಿ, ಟಿಕ್ ಟಾಕ್​ನಲ್ಲಿ ಹಾಕಿ, ಲೈಕ್, ಕಮೆಂಟ್​ಗಳನ್ನು ನೋಡಿ ಆನಂದ ಪಡ್ತಿದ್ದಾರೆ. ಇದು ಇದಕ್ಕಷ್ಟೇ ಸೀಮಿತವಾಗಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲ. ಆದ್ರೆ ಕಲಬುರಗಿಯಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ಕೊಂದು ಟಿಕ್ ಟಾಕ್ ವಿಡಿಯೋ ಮಾಡುತ್ತಿರುವವರ ಹಾವಾಳಿ ಹೆಚ್ಚಾಗಿದೆ. ಇದು ಅರಣ್ಯ ಇಲಾಖೆಯ ನಿದ್ದೆಗೆಡಿಸುತ್ತಿದೆ.

ಇಬ್ಬರು ಆರೋಪಿಗಳ ಬಂಧನ: ಕಲಬುರಗಿ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ದಿನದ ಹಿಂದೆ ಮುಳ್ಳು ಹಂದಿಯನ್ನು ಕೊಂದು ಟಿಕ್ ಟಾಕ್ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ. ತಾಲೂಕಿನ ಬೋಳೆವಾಡ ಗ್ರಾಮದ ಅಂಬರೀಶ್ ಮತ್ತು ನಾಗೇಶ್ ಅನ್ನೋ ಇಬ್ಬರು ಯುವಕರನ್ನು ಬಂಧಿಸಿ, ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ. ಬೋಳೆವಾಡ ಗ್ರಾಮದ ಹೊರವಲಯದಲ್ಲಿ ಮುಳ್ಳು ಹಂದಿಯನ್ನು ಭೇಟಿಯಾಡಿದ್ದ ಇವರು, ನಂತರ ಅದರ ಬಗ್ಗೆ ವಿಡಿಯೋಗಳನ್ನು ಮಾಡಿ, ಟಿಕ್ ಟಾಕ್​ನಲ್ಲಿ ಹರಿಬಿಟ್ಟಿದ್ದರು.

ಇದು ಕಲಬುರಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮುಟ್ಟಿತ್ತು. ಟಿಕ್ ಟಾಕ್ ಐಡಿಯನ್ನು ಪತ್ತೆಮಾಡಿ, ಅದರ ಬೆನ್ನುಬಿದ್ದಾಗ, ವಿಡಿಯೋ ಮಾಡಿ ಹರಿಬಿಟ್ಟವರು ಬೋಳೆವಾಡದ ಇಬ್ಬರು ಅನ್ನೋದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದರು. ಕೊನೆಗೆ ಇಬ್ಬರನ್ನು ಬಂಧಿಸಿದ್ದಾರೆ. ಇದು ಎರಡು ದಿನದ ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ಟಿಕ್ ಟಾಕ್ ಶೋಕಿಗಾಗಿ ಕಾಡು ಪ್ರಾಣಿಗಳನ್ನು ಕೊಂದು, ಇದೀಗ ಕಂಬಿ ಹಿಂದೆ ಹೋದವರ ಕಥೆ. ಇಂತಹ ಅನೇಕ ಘಟನೆಗಳು ಕಲಬುರಗಿ ಜಿಲ್ಲೆಯಲ್ಲಿ ನಡೆಯುತ್ತಿವೆ. ಇದು ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.