545 ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪರೀಕ್ಷಾ ಅಕ್ರಮದ ಬಗ್ಗೆ ಚಾರ್ಜ್​​ಶೀಟ್​ ಸಲ್ಲಿಸಿರುವ ಸಿಐಡಿ

ಸಿಐಡಿ ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ವಿವಿಧ ಹಂತದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. 545 OMR ಶೀಟ್​ ಪೈಕಿ 234 OMR ಶೀಟ್​​ನಲ್ಲಿ ವ್ಯತ್ಯಾಸ ಪತ್ತೆಯಾಗಿದೆ.

545 ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪರೀಕ್ಷಾ ಅಕ್ರಮದ ಬಗ್ಗೆ ಚಾರ್ಜ್​​ಶೀಟ್​ ಸಲ್ಲಿಸಿರುವ ಸಿಐಡಿ
ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 11, 2022 | 3:13 PM

ಕಲಬುರಗಿ: 545 ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ (PSI Recruitment Scam) ಹಿನ್ನೆಲೆ ಪರೀಕ್ಷಾ ಅಕ್ರಮದ ಬಗ್ಗೆ ಸಿಐಡಿ ಚಾರ್ಜ್​​ಶೀಟ್​ ಸಲ್ಲಿಸಿದೆ. ನಗರದ ಜ್ಞಾನಜೋತಿ ಇಂಗ್ಲಿಷ್ ಶಾಲೆಯಲ್ಲಿನ ಅಕ್ರಮಕ್ಕೆ ಸಂಬಂಧ 34 ಆರೋಪಿಗಳ ವಿರುದ್ಧ 5 ದಿನದ ಹಿಂದೆ ಕಲಬುರಗಿ 3ನೇ JMFC ಕೋರ್ಟ್​​ಗೆ ಚಾರ್ಜ್​​ಶೀಟ್ ಸಲ್ಲಿಕೆ ಮಾಡಲಾಗಿದೆ. ಚಾರ್ಜ್​ಶೀಟ್​​ನಲ್ಲಿ ಅನೇಕ ಶಾಕಿಂಗ್​ ಸಂಗತಿಗಳು ಉಲ್ಲೇಖಿಸಲಾಗಿದ್ದು, ಶಾಸಕ ವೈ.ಎಂ.ಪಾಟೀಲ್​​ ಪುತ್ರ ಅರುಣ್​ ಕುಮಾರ್, ಶಾಸಕರ‌ ಸಹೋದರ ಎಸ್.ವೈ.ಪಾಟೀಲ್ ಹೆಸರನ್ನು ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಪ್ರಸ್ತಾಪ ಮಾಡಿದರು. ಶಾಸಕರ ಗನ್​ಮ್ಯಾನ್ ಹಯ್ಯಾಳಿ ದೇಸಾಯಿ ಪರ ಡೀಲ್ ಮಾಡಿದ್ದು, ಅರುಣ್ ಕುಮಾರ್ ಪಾಟೀಲ್​​ ತನಗೆ ಕರೆ ಮಾಡಿದ್ದರು. ದೇಸಾಯಿಗೆ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಹೇಳಿದರು. ಎಸ್​.ವೈ.ಪಾಟೀಲ್ ಜೊತೆ ಮಾತನಾಡಿ 30 ಲಕ್ಷಕ್ಕೆ ಡೀಲ್ ಮಾಡಲಾಗಿದೆ ಎಂದು ಜಾರ್ಜ್​​ಶೀಟ್​ನಲ್ಲಿನ ಸ್ವಖುಷಿ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷಾ ಅಕ್ರಮ: ಕಿಂಗ್ ಪಿನ್ ದಿವ್ಯಾಗೆ ಆಶ್ರಯ ನೀಡಿದ್ದ ಸುರೇಶ್ ಕಾಟೆಗಾಂವ್ಗೆ ಜಾಮೀನು ಮಂಜೂರು

545 OMR ಶೀಟ್​ ಪೈಕಿ 234 OMR ಶೀಟ್​​ನಲ್ಲಿ ವ್ಯತ್ಯಾಸ:

ಸಿಐಡಿ ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ವಿವಿಧ ಹಂತದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. 545 OMR ಶೀಟ್​ ಪೈಕಿ 234 OMR ಶೀಟ್​​ನಲ್ಲಿ ವ್ಯತ್ಯಾಸ ಪತ್ತೆಯಾಗಿದೆ. ವಿವಿಧ ಹಂತದಲ್ಲಿ 234 OMR ಶೀಟ್​ ತಿದ್ದಿರುವುದು ಪತ್ತೆಯಾಗಿದ್ದು, 545ರ ಪೈಕಿ 540 OMR ಶೀಟ್​​ FSLಗೆ ಸಿಐಡಿ ಕಳಿಸಿದ್ದು, OMR ಶೀಟ್​ ಪರಿಶೀಲಿಸಿ ಎಫ್​ಎಸ್​ಎಲ್​ ವರದಿ ನೀಡಿದೆ.

ಇದನ್ನೂ ಓದಿ: ಪಿಎಸ್ಐ ಅಕ್ರಮ ಪ್ರಕರಣ: ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು ಮೊದಲ ರ್ಯಾಂಕ್ ಪಡೆದಿದ್ದ ಭೂಪ ಅರೆಸ್ಟ್

ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್​ನಿಂದ​ ಸ್ಫೋಟಕ ಹೇಳಿಕೆ:

ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್​ನಿಂದ​ ಸ್ಫೋಟಕ ಹೇಳಿಕೆ ನೀಡಿದ್ದು, ಅಕ್ರಮವಾಗಿ ಪಿಎಸ್​ಐ ನೇಮಕಾತಿ ಮಾಡಿಸುವಂತೆ ಜಿಲ್ಲೆಯ ಅಫಜಲಪುರ ಶಾಸಕರ ಪುತ್ರ ಅರುಣ್​​ ಕುಮಾರ್​ರಿಂದ ದೂರವಾಣಿ ಕರೆ ಬಂದಿತ್ತು. ಗನ್​​ಮ್ಯಾನ್​​​ ಹಯ್ಯಾಳಿ ದೇಸಾಯಿಗೆ ನೇಮಕಾತಿ ಮಾಡಿಸಲು ತಿಳಿಸಿದ್ದರು. ಆನಂತರ ಮಂಜುನಾಥ ಮೇಳಕುಂದಿ ಸಂಪರ್ಕ ಆಗಿದೆ. ನಂತರ ನಾನು, ಮಂಜುನಾಥ ಮೇಳಕುಂದಿ ಮಾತನಾಡಿದ್ದೆವು. ಅರುಣ್ ಚಿಕ್ಕಪ್ಪ Y.S.ಪಾಟೀಲ್ ಮೂಲಕ ಹಣ ಸಂದಾಯ ಮಾಡಿದ್ದು, 40 ಲಕ್ಷಕ್ಕೆ ಮಾತನಾಡಿ ಕೊನೆಗೆ 30 ಲಕ್ಷ ನಗದು ಕೊಟ್ಟೆವು ಎಂದು ಹೇಳಿದ್ದಾನೆ. 14 ಜನರ ನೇಮಕಾತಿ ಮಾಡಿಸಿಲ್ಲ ಎಂದು ಹೇಳಿಕೆ ನೀಡಿದ್ದು, ಬದಲಾಗಿ ನಾಲ್ವರಿಂದ ಹಣ ಪಡೆದಿದ್ದಾಗಿ ರುದ್ರಗೌಡ ಮಾಹಿತಿ ನೀಡಿದ್ದಾನೆ. ಎನ್.ವಿ.ಸುನಿಲ್ ಕುಮಾರ್​ ಬಳಿ 30 ಲಕ್ಷ ಪಡೆದಿದ್ದೇವೆ. ವಿಶಾಲ್ ಶಿರೂರ್​ ಬಳಿ 42 ಲಕ್ಷ ರೂ. ಪಡೆದಿದ್ದೇವೆ. ಪ್ರಭು, ಇಸ್ಮಾಯಿಲ್ ಬಳಿ ತಲಾ 50 ಲಕ್ಷ ಪಡೆದಿದ್ದಾಗಿ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್​ನಿಂದ​ ಸ್ಫೋಟಕ ಹೇಳಿಕೆ ನೀಡಲಾಗಿದೆ.