ಪಿಎಸ್ಐ ಪರೀಕ್ಷಾ ಅಕ್ರಮ: ಕಿಂಗ್ ಪಿನ್ ದಿವ್ಯಾಗೆ ಆಶ್ರಯ ನೀಡಿದ್ದ ಸುರೇಶ್ ಕಾಟೆಗಾಂವ್ಗೆ ಜಾಮೀನು ಮಂಜೂರು
ಸುರೇಶ್ ಕಾಟೆಂಗಾವ್, ರಾಜೇಶ್ ಹಾಗರಗಿ ಕಲಬುರಗಿ ಹೈ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಪಿಎಸ್ಐ ಪರೀಕ್ಷಾ ಅಕ್ರಮ ಕಿಂಗ್ ಪಿನ್ ದಿವ್ಯಾ ಪತಿ ರಾಜೇಶ್ ಹಾಗರಗಿ ಜಾಮೀನು ಅರ್ಜಿ ವಜಾಗೊಂಡಿದೆ.
ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ(PSI Recruitment Scam) ಪ್ರಕರಣಕ್ಕೆ ಸಂಬಂಧಿಸಿ ಅಕ್ರಮದಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಗೆ ಜಾಮೀನು ಮಂಜೂರಾಗಿದ್ದು ಮತ್ತೋರ್ವ ಆರೋಪಿಯ ಅರ್ಜಿ ವಜಾ ಆಗಿದೆ. ಆರೋಪಿ ಸುರೇಶ್ ಕಾಟೆಗಾಂವ್ ಜಾಮೀನು ಮಂಜೂರು ಮಾಡಿ ಕಲಬುರಗಿ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಹಾಗೂ ಆರೋಪಿ ರಾಜೇಶ್ ಹಾಗರಗಿಯ ಜಾಮೀನು ಅರ್ಜಿ ವಜಾ ಗೊಂಡಿದೆ.
ಸುರೇಶ್ ಕಾಟೆಂಗಾವ್, ರಾಜೇಶ್ ಹಾಗರಗಿ ಕಲಬುರಗಿ ಹೈ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಪಿಎಸ್ಐ ಪರೀಕ್ಷಾ ಅಕ್ರಮ ಕಿಂಗ್ ಪಿನ್ ದಿವ್ಯಾ ಪತಿ ರಾಜೇಶ್ ಹಾಗರಗಿ ಜಾಮೀನು ಅರ್ಜಿ ವಜಾಗೊಂಡಿದೆ. ಹಾಗೂ ಕಿಂಗ್ ಪಿನ್ ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಸುರೇಶ್ ಕಾಟೇಗಾಂವ್ರನ್ನು ಸಿಐಡಿ ಬಂಧಿಸಿತ್ತು. ಸದ್ಯ ಸುರೇಶ್ಗೆ ಜಾಮೀನು ಮಂಜೂರಾಗಿದೆ. ಇದು ಈ ಪ್ರಕರಣದಲ್ಲಿ ಮಂಜೂರಾದ ಮೊದಲ ಜಾಮೀನು. ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಚಿತ್ರದಲ್ಲಿ 10 ನಾಯಕಿಯರು..!
ಬಂಧಿತ ಶಾಂತಿಬಾಯಿ ದಂಪತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕಲಬುರಗಿ ನ್ಯಾಯಾಲಯ 545 ಪಿಎಸ್ಐ (PSI Recruitment Scam) ಹುದ್ದೆಗಳಿಗೆ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಾವಾಗಿದ್ದ ಶಾಂತಿಬಾಯಿ, ಪತಿ ಬಸ್ಯಾನಾಯಕ್ ಅವರ ಜಾಮೀನು ಅರ್ಜಿಯನ್ನು ಕಲಬುರಗಿ (Kalburagi) 3ನೇ JMFC ನ್ಯಾಯಾಲಯ ವಜಾ ಮಾಡಿದೆ. ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಶಾಂತಿಬಾಯಿ ಪರೀಕ್ಷೆ ಬರೆದು ಪಾಸಾಗಿದ್ದಳು. ಪರೀಕ್ಷಾ ಅಕ್ರಮ ಶಾಂತಿಬಾಯಿ, ಪತಿ ಬಸ್ಯಾನಾಯಕ್, ಮಕ್ಕಳ ಜತೆ ಹೊರಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದಳು. ನಂತರ ಸಿಐಡಿ (CID) ಅಧಿಕಾರಿಗಳು ಮೇ 31ರಂದು ಹೈದರಾಬಾದ್ನಲ್ಲಿ ಶಾಂತಿಬಾಯಿಯನ್ನು ಬಂಧಿಸಿದ್ದರು. ಪಿಎಸ್ಐ ಅಕ್ರಮದಲ್ಲಿ ಬಂಧಿಸಿದ ಯಾರೊಬ್ಬರಿಗೂ ಕೂಡ ಜಾಮೀನು ಸಿಕ್ಕಿಲ್ಲ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ಕಲಬುರಗಿ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ