ಕಲಬುರಗಿ: ಪ್ಲಾಟ್ ಫಾರ್ಮ್‌ನಲ್ಲಿ ನಿಂತಿದ್ದ ರೈಲ್ವೆ ಬೋಗಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ವ್ಯಕ್ತಿಯೋರ್ವ, ರೈಲ್ವೇ ನಿಲ್ದಾನದ ಪ್ಲಾಟ್ ಫಾರ್ಮ್‌ನಲ್ಲಿ ನಿಂತಿದ್ದ ರೈಲ್ವೆ ಬೋಗಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲ್ವೆ ಜಂಕ್ಷನ್‌ನಲ್ಲಿ ನಡೆದಿದೆ‌‌.

ಕಲಬುರಗಿ: ಪ್ಲಾಟ್ ಫಾರ್ಮ್‌ನಲ್ಲಿ ನಿಂತಿದ್ದ ರೈಲ್ವೆ ಬೋಗಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
Edited By:

Updated on: Nov 13, 2023 | 1:02 PM

ಕಲಬುರಗಿ, (ನವೆಂಬರ್ 13): ವ್ಯಕ್ತಿಯೋರ್ವ, ರೈಲ್ವೇ ನಿಲ್ದಾನದ ಪ್ಲಾಟ್ ಫಾರ್ಮ್‌ನಲ್ಲಿ ನಿಂತಿದ್ದ ರೈಲ್ವೆ ಬೋಗಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ. ಈ ಘಟನೆ ಕಲಬುರಗಿ(Kalaburagi) ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲ್ವೆ ಜಂಕ್ಷನ್‌ನಲ್ಲಿ (wadi Railway junction) ನಡೆದಿದೆ‌‌. ವಾಡಿ ರೈಲ್ವೆ ಜಂಕ್ಷನ್‌ನಲ್ಲಿ ನಿಲ್ಲಿಸಲಾಗಿದ್ದ ಕರ್ಮಚಾರಿ ರೈಲ್ವೆ ಬೋಗಿಗೆ ಸೋಲಾಪುರ ನಿವಾಸಿ 38 ವರ್ಷದ ಸಿದ್ದಪ್ಪ ದೋಶಟ್ಟಿ ಎಂಬಾತ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಸಿದ್ದಪ್ಪ ವಾಡಿ ರೈಲ್ವೆಯ ಎಸ್‌ ಎನ್‌ ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಇನ್ನೂ ಕೆಲ ದಿನಗಳಿಂದ ಕರ್ತವ್ಯಕ್ಕೆ ಗೈರಾಗಿದ್ದ ಸಿದ್ದಪ್ಪಣ ಅಕ್ಟೋಬರ್ 17 ರಂದು ನಾಪತ್ತೆಯಾಗಿದ್ದ.ಬಳಿಕ ಪೊಲೀಸರು ಸಿದ್ದಪ್ಪನನ್ನ ಪತ್ತೆ ಮಾಡಿ ವಾಡಿಯಲ್ಲಿದ್ದ ಪೋಷಕರಿಗೆ ಒಪ್ಪಿಸಿದ್ದರು. ಆದರೆ ನಿನ್ನೆ(ನವೆಂಬರ್ 13) ವಾಡಿ ರೈಲ್ವೆ ಪ್ಲಾಟ್ ಫಾರ್ಮ್ 1 ರಲ್ಲಿ ಕರ್ಮಚಾರಿ ರೈಲು ಬೋಗಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ