Kalaburagi News: ಬಂಧಿಸಲು ಹೋದಾಗ PSI ಪಿಸ್ತೂಲ್ ಕಸಿದುಕೊಂಡು ಪರಾರಿಯಾದ ಕುಖ್ಯಾತ ಕಳ್ಳ
ಕಳ್ಳನೋರ್ವ ಪಿಎಸ್ಐ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಡೆದಿದೆ.
ಕಲಬುರಗಿ: ಕುಖ್ಯಾತ ಕಳ್ಳನೋರ್ವ ಪಿಎಸ್ಐ ಸರ್ವಿಸ್ ರಿವಾಲ್ವರ್ (revolver) ಕಸಿದುಕೊಂಡು ಪರಾರಿಯಾದ ಘಟನೆ ನಿನ್ನೆ ರಾತ್ರಿ (ಜುಲೈ 16) ಕಲಬುರಗಿ(Kalaburagi) ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಡೆದಿದೆ. ಅಫಜಲಪುರ ತಾಲೂಕಿನ ಬಳ್ಳೂರಗಿ ಮೂಲದ ಖಾಜಪ್ಪ ಎನ್ನುವ ಕುಖ್ಯಾತ ಕಳ್ಳ ಅಫಜಲಪುರ PSI ಭೀಮರಾಯ್ ಬಂಕಲಿ ಅವರ ರಿವಾಲ್ವರ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಸಿಸಿಬಿ ಪೊಲೀಸರು ಖಾಜಪ್ಪ ಎಂಬಾತನನ್ನ ಬಂಧಿಸಲು ಬೆಂಗಳೂರಿನಿಂದ ಅಫಜಲಪುರಕ್ಕೆ ಬಂದಿದ್ದರು. ಈ ವೇಳೆ ಪಿಎಸ್‌ಐ ಭೀಮರಾಯ್ ಅವರ ಸರ್ವಿಸ್ ರಿವಾಲ್ವರ್ ತಗೆದುಕೊಂಡ ಎಸ್ಕೇಪ್ ಆಗಿದ್ದಾನೆ.
ಖಾಜಪ್ಪ ವಿರುದ್ಧ ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಬಳಿ ಡಸ್ಟರ್ ವಾಹನದಲ್ಲಿ ಕೂತಿದ್ದ ಖಾಜಪ್ಪನನ್ನು ಪೊಲೀಸ್ ತಂಡ ಹಿಡಿಯಲು ಹೋಗಿದ್ದರು. ಈ ವೇಳೆ ಪಿಎಸ್ಐ ತನ್ನ ಸರ್ವಿಸ್ ಪಿಸ್ತೂಲ್ ನಿಂದ ಕಾರಿನ ಗ್ಲಾಸ್ ಒಡೆಯಲು ಮುಂದಾಗಿದ್ದರು. ಈ ಸಮಯದಲ್ಲಿ ಖಾಜಪ್ಪ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಿದ್ದಾನೆ.
ಬಳಿಕ ಕಳೆದ ರಾತ್ರಿ ಇಡೀ ಪೊಲೀಸರ ತಂಡ ಕಾರ್ಯಚರಣೆ ನಡೆಸಿದರೂ ಖಾಜಪ್ಪ ಸಿಕ್ಕಿಲ್ಲ. ಪುಲ್ ಲೋಡೆಡ್ ಸರ್ವಿಸ್ ಪಿಸ್ತೂಲ್ ಸಮೇತ ಪರಾರಿಯಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ. ಇನ್ನು ಇನ್ನು ಅಫಜಲಪುರ ಠಾಣೆಗೆ ಕಲಬುರಗಿ ಎಸ್ಪಿ ಇಶಾ ಪಂತ್ ಭೇಟಿ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನಷ್ಟು ಕಲಬುರಗಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ