ಹುಬ್ಬಳಿ ಗಲಭೆ ಪ್ರಕರಣ: ಕೇಂದ್ರ ಕಾರಾಗೃಹದಲ್ಲಿರೋ ಆರೋಪಿಗಳಿಗೆ ಇಫ್ತಾರ್‌ ಕೂಟ ನೀಡಲು ಬಂದಿದ್ದ ಎಂಐಎಂ ಪಕ್ಷದ ಶಾಸಕ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 26, 2022 | 7:28 PM

ಇಫ್ತಿಯಾರ ಕೂಟ ನೀಡೋದಕ್ಕೆ ಜೈಲು ಸಿಬ್ಬಂಧಿಗಳು ಅವಕಾಶ ನೀಡಿಲ್ಲ. ಹೊರಗಡೆಯೇ ಜೈಲು ಸಿಬ್ಬಂಧಿಗಳಿಗೆ ಊಟ ಕೊಟ್ಟು ಶಾಸಕ ಕೌಸರ್ ಮೋಹಿನೋದ್ದಿನ್ ಹೋಗಿದ್ದಾರೆ. 

ಹುಬ್ಬಳಿ ಗಲಭೆ ಪ್ರಕರಣ: ಕೇಂದ್ರ ಕಾರಾಗೃಹದಲ್ಲಿರೋ ಆರೋಪಿಗಳಿಗೆ ಇಫ್ತಾರ್‌ ಕೂಟ ನೀಡಲು ಬಂದಿದ್ದ ಎಂಐಎಂ ಪಕ್ಷದ ಶಾಸಕ
ತಪಾಸಣೆಗೊಳಗಾಗುತ್ತಿರುವ ಆರೋಪಿಗಳು
Follow us on

ಕಲಬುರಗಿ: ಹುಬ್ಬಳಿ ಗಲಭೆ ಪ್ರಕರಣ (Hubli Violence) ದಲ್ಲಿ ಕೇಂದ್ರ ಕಾರಾಗೃಹದಲ್ಲಿರೋ 103 ಆರೋಪಿಗಳಿಗೆ ಇಫ್ತಿಯಾರ ಕೂಟ ನೀಡೋದಕ್ಕೆ ಎಂಐಎಂ ಪಕ್ಷದ ತೆಲಂಗಾಣದ ಶಾಸಕ ಕೌಸರ್ ಮೋಹಿನೊದ್ದಿನ್ ಆಗಮಿಸಿದ್ದಾರೆ. ಎಐಎಮ್ಐಎಮ್ ಪಕ್ಷದ ಮುಖಂಡ ಸಲೀಂ ,ಕಲಬುರಗಿಯ ಇಲಿಯಾಸ್ ಭಾಗವಾನ್ ಜೈಲಿಗೆ ಭೇಟಿ ನೀಡಿದ್ದು, ಜೈಲಿನಲ್ಲಿರುವ ಆರೋಪಿಗಳಿಗೆ ಇಫ್ತಿಯಾರ ಕೂಟ ಕೋಡೊದಕ್ಕೆ ಆಗಮಿಸಿದ್ದಾರೆ. ಇಫ್ತಿಯಾರ ಕೂಟ ನೀಡೋದಕ್ಕೆ ಜೈಲು ಸಿಬ್ಬಂಧಿಗಳು ಅವಕಾಶ ನೀಡಿಲ್ಲ. ಹೊರಗಡೆಯೇ ಜೈಲು ಸಿಬ್ಬಂಧಿಗಳಿಗೆ ಊಟ ಕೊಟ್ಟು ಶಾಸಕ ಕೌಸರ್ ಮೋಹಿನೋದ್ದಿನ್ ಹೋಗಿದ್ದಾರೆ.

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಅರೋಪಿಗಳನ್ನು ಕಲಬುರಗಿ ಸೆಂಟ್ರಲ್ ಜೈಲಿಗೆ ರವಾನೆ

ಕಲಬುರಗಿ: ಕಳೆದ ವಾರ ಅವಹೇಳನಕಾರಿ ವಾಟ್ಸ್ಯಾಪ್ ಪೋಸ್ಟ್ (WhatsApp Post) ಬಳಿಕ ಕೋಮು ಗಲಭೆಗೆ ನಡೆಸಿದ ಗಲಭೆಕೋರರನ್ನು (rioters) ಹುಬ್ಬಳ್ಳಿ ಪೊಲೀಸರು ಲಭ್ಯವಿರುವ ಸಿಸಿಟಿವಿ ಫುಟೇಜ್ (CCTV footage) ಆಧಾರದಲ್ಲಿ ಬಂಧಿಸಿ ಜೈಲಿಗೆ ತಳ್ಳುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹಲವಾರು ಅರೋಪಿಗಳನ್ನು ಬಂಧಿಸಲಾಗಿದೆ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಹಾಗೆ ಬಂಧಿತರ ಪೈಕಿ 103 ಅರೋಪಿಗಳನ್ನು ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿದೆ. ಈ ಸೆಂಟ್ರಲ್ ಜೈಲಿನ ಮುಂದೆ ಅರೋಪಿಗಳಿಗಿಂತ ಪೊಲೀಸರ ಸಂಖ್ಯೆಯೇ ಜಾಸ್ತಿಯಿದೆ!

ಆರೋಪಿಗಳನ್ನು ಕಾರಾಗೃಹದೊಳಗೆ ಕಳಿಸುವ ಮೊದಲು ಸಮಗ್ರ ತಪಾಸಣೆ ನಡೆಯುತ್ತಿದೆ. ಅವರು ಧರಿಸಿರುವ ಟೋಪಿಗಳನ್ನು ಸಹ ತೆಗೆಸಿ ತಲೆಭಾಗವನ್ನು ಪರೀಕ್ಷಿಸಲಾಗುತ್ತಿದೆ. ಹಾಗೆಯೇ ಚಪ್ಪಲಿ ಬಿಚ್ಚಿಸಿ ಅವುಗಳ ಕೆಳಗೆ ಏನನ್ನೂ ಬಚ್ಚಿಟ್ಟಿಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತಿದೆ. ಆರೋಪಿಗಳನ್ನು ಅದರಲ್ಲೂ ವಿಶೇಷವಾಗಿ ಕೋಮು ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅರೋಪ ಹೊತ್ತವರನ್ನು ಸೆರೆಮನೆಯೊಳಗೆ ಕಳಿಸುವಾಗ ಇದನ್ನೆಲ್ಲ ಮಾಡಲಾಗುತ್ತದೆ.

ಆರೋಪಿಗಳು ಚೂಪಾದ ವಸ್ತುಗಳನ್ನು ಜೈಲಿನೊಳಗೆ ತೆಗೆದುಕೊಂಡು ಹೋಗಲು ಬಿಟ್ಟರೆ ಅವುಗಳನ್ನು ಬಳಸಿಯೇ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನುವ ಕಾರಣಕ್ಕೆ ಸಮಗ್ರ ತಪಾಸಣೆ ಮಾಡಲಾಗುತ್ತದೆ. ಆರೋಪಿಗಳು ಮೊಬೈಲ್ ಪೋನ್ ಗಳನ್ನು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ.

ಇದನ್ನೂ ಓದಿ;

Bengaluru: ಸೂಟ್​ಕೇಸ್​ ಚಕ್ರ ತುಂಡಾಗಿದ್ದಕ್ಕೆ ಬೆಂಗಳೂರಿನ ಪ್ರಯಾಣಿಕನಿಗೆ 8,000 ರೂ. ನೀಡಿದ ಏರ್​ಲೈನ್ಸ್​!

ಕರಾಚಿ ವಿಶ್ವವಿದ್ಯಾಲಯದಲ್ಲಿನ ಸ್ಫೋಟದ ಹೊಣೆ ಹೊತ್ತ ಬಲೂಚಿಸ್ತಾನ್​​ ಲಿಬರೇಶನ್​​ ಆರ್ಮಿ; ಕೃತ್ಯವೆಸಗಿದ್ದು ಮಹಿಳಾ ಬಾಂಬರ್​​

Published On - 7:27 pm, Tue, 26 April 22