ಕಲಬುರಗಿ: ಅನಾರೋಗ್ಯದಿಂದ ಬೇಸತ್ತು ಎಎಸ್ಐ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಪೊಲೀಸ್ ಕ್ವಾಟ್ರಸ್ನಲ್ಲಿ ನಡೆದಿದೆ. ಕಲಬುರಗಿಯ ಸಿಟಿ ರಿಸರ್ವ್ ಪೊಲೀಸ್ ವಿಭಾಗದಲ್ಲಿನ ಎಎಸ್ಐ (ASI) ಜಗನ್ನಾಥ್ (54) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಗನ್ನಾಥ್, ಇಂದು ಮನೆಯಲ್ಲಿಯೇ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದಲ್ಲಿ 11ರ ಹರೆಯದ ಬಾಲಕಿ ನೇಣುಬಿಗಿದು ಆತ್ಮಹತ್ಯೆ
ಟಿವಿ ನೋಡುವ ವಿಷಯದಲ್ಲಿ ತನ್ನ ಸಹೋದರಿಯೊಂದಿಗೆ ವಾಗ್ವಾದ ನಡೆದ ನಂತರ ಕೇರಳದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋಮವಾರ ಇಡುಕ್ಕಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. 11 ವರ್ಷದ ಬಾಲಕಿ ಇಡುಕ್ಕಿಯ ಮನಕ್ಕಾಡ್‌ನಲ್ಲಿರುವ ತನ್ನ ಮನೆಯೊಳಗಿನ ಕಿಟಕಿ ಗ್ರಿಲ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.
ಸೋಮವಾರ ಪೋಷಕರು ಹೊರಗೆ ಹೋಗಿದ್ದಾಗ ಬಾಲಕಿ, ಆಕೆಯ ಸಹೋದರಿ ಮತ್ತು ಸೋದರಸಂಬಂಧಿ ಟಿವಿ ವೀಕ್ಷಿಸುತ್ತಿದ್ದರು. ಈ ನಡುವೆ ವಾಗ್ವಾದ ನಡೆದಿದ್ದು ನಂತರ 11 ವರ್ಷದ ಬಾಲಕಿ ಕೋಣೆಗಯೊಳಗೆ ಹೋಗಿ ಬೀಗ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆಕೆ ನೇಣು ಬಿಗಿದಿರುವ ಸ್ಥಿತಿಯಲ್ಲಿ ಆಕೆಯ ಅಜ್ಜಿ ನೋಡಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ 6 ನೇ ತರಗತಿಯ 11 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:
ಟಿವಿ ವಿಷಯದಲ್ಲಿ ಸಹೋದರಿಯರ ನಡುವೆ ವಾಗ್ವಾದ; ಕೇರಳದಲ್ಲಿ 11ರ ಹರೆಯದ ಬಾಲಕಿ ನೇಣುಬಿಗಿದು ಆತ್ಮಹತ್ಯೆ