ಸದುದ್ದೇಶದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ಆತಂಕದಿಂದ ಆರೋಪಿ ಡಾಟಾ ಎಂಟ್ರಿ ಆಪರೇಟರ್‌ ಆತ್ಮಹತ್ಯೆ

MGNREGA: ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ ಆರೋಪ ಮೇರೆಗೆ ಡಾಟಾ ಎಂಟ್ರಿ ಆಪರೇಟರ್‌ ವಿರುದ್ಧ ಮೇಲಧಿಕಾರಿಗೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಹಳದೂರು ಗ್ರಾ.ಪಂ.ಗೆ ಅಧಿಕಾರಿಗಳು ಪರಿಶೀಲನೆಗೆ ಬಂದಿದ್ದರು. ಇದರಿಂದ ವಿಚಲಿತಳಾದ ಆರೋಪಿ ಡಾಟಾ ಎಂಟ್ರಿ ಆಪರೇಟರ್‌ ಅನ್ನಪೂರ್ಣಾ ಪಾದನಕಟ್ಟಿ(30) ಗ್ರಾ.ಪಂ. ಕಚೇರಿಯಲ್ಲೇ ವಿಷ ಸೇವಿಸಿದ್ದರು.

ಸದುದ್ದೇಶದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ಆತಂಕದಿಂದ ಆರೋಪಿ ಡಾಟಾ ಎಂಟ್ರಿ ಆಪರೇಟರ್‌ ಆತ್ಮಹತ್ಯೆ
ಸದುದ್ದೇಶದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ಆತಂಕದಿಂದ ಆರೋಪಿ ಡಾಟಾ ಎಂಟ್ರಿ ಆಪರೇಟರ್‌ ಆತ್ಮಹತ್ಯೆ

ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ನೀಡುವ ಸದುದ್ದೇಶದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದರ ಸದುದ್ದೇಶಕ್ಕೇ ಎಳ್ಳೂನೀರು ಬಿಡುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ. ತಾಜಾ ಪ್ರಕರಣವೊಂದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಅದಕ್ಕೆ ವಿಕಲಚೇತನ ಡಾಟಾ ಎಂಟ್ರಿ ಆಪರೇಟರ್ ಯವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೂ ನಿನ್ನೆ ನಡೆದಿದೆ.

MGNREGAಯಲ್ಲಿ ಅಕ್ರಮ ಎಂದು ಪದೇಪದೆ ಕಿರುಕುಳ ಆರೋಪ:
MGNREGA (Mahatma Gandhi National Rural Employment) ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ ಆರೋಪ ಮೇರೆಗೆ ಡಾಟಾ ಎಂಟ್ರಿ ಆಪರೇಟರ್‌ ವಿರುದ್ಧ ಮೇಲಧಿಕಾರಿಗೆ ದೂರು ನೀಡಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಮತ್ತಿತರರಿಂದ ದೂರು ದಾಖಲಾಗಿತ್ತು. ದೂರಿನ ಅನ್ವಯ ಹಳದೂರು ಗ್ರಾ.ಪಂ.ಗೆ ಅಧಿಕಾರಿಗಳು ಪರಿಶೀಲನೆಗೆ ಬಂದಿದ್ದರು. ಇದರಿಂದ ವಿಚಲಿತಳಾದ ಆರೋಪಿ ಡಾಟಾ ಎಂಟ್ರಿ ಆಪರೇಟರ್‌ ಅನ್ನಪೂರ್ಣಾ ಪಾದನಕಟ್ಟಿ(30) ಗ್ರಾ.ಪಂ. ಕಚೇರಿಯಲ್ಲೇ ವಿಷ ಸೇವಿಸಿದ್ದರು. ಚಿಕಿತ್ಸೆ ಫಲಿಸದೆ ಅನ್ನಪೂರ್ಣಾ ಕೊನೆಯುಸಿರೆಳೆದಿದ್ದಾರೆ.

ಇದೀಗ ಅನ್ನಪೂರ್ಣಾ ಆತ್ಮಹತ್ಯೆಗೆ ಗ್ರಾ.ಪಂ. ಸದಸ್ಯ ಈರಯ್ಯ ಹೊಸಮಠ, ಗ್ರಾಮಸ್ಥರಾದ ಸಂಗಮೇಶ್ ಚಲವಾದಿ, ರಮೇಶ್ ಲೆಂಕೆಣ್ಣವರ, ಯಮನಪ್ಪ ಲೆಂಕೆಣ್ಣವರ ಅವರುಗಳ ಕಿರುಕುಳವೇ ಕಾರಣ ಎಂದು ಮೃತ ಅನ್ನಪೂರ್ಣಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮೇಲಾಧಿಕಾರಿಗಳು ಪರಿಶೀಲನೆಗೆ ಬಂದ ಹಿನ್ನೆಲೆ ಆತಂಕದಲ್ಲಿದ್ದ ಅನ್ನಪೂರ್ಣಾ ಮನೆಯಿಂದಲೇ ವಿಷದ ಬಾಟಲ್ ತಂದಿದ್ದಳು ಎಂದು ಪಂಚಾಯತ್ ಪಿಡಿಒ ಸಾವಿತ್ರಿ ಮಾಶ್ಯಾಳ ಹೇಳಿದ್ದಾರೆ. ಅನ್ನಪೂರ್ಣಾ ಆಲೂರ ಎಸ್.ಪಿ. ಗ್ರಾಮದ ನಿವಾಸಿ.

ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಜಿಲ್ಲಾಸ್ಪತ್ರೆ ಎದುರು ಡಾಟಾ ಎಂಟ್ರಿ ಆಪರೇಟರ್‌ಗಳು ಮತ್ತು ಗ್ರಾ.ಪಂ. ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯಿಂದ ಪ್ರವಾಹ ಪರಿಹಾರ ಹಣ ದುರ್ಬಳಕೆ; ಗ್ರಾಮ ಪಂಚಾಯತಿ ಸದಸ್ಯನಿಂದ ಗಂಭೀರ ಆರೋಪ

(corruption allegation in Mahatma Gandhi National Rural Employment MGNREGA in guledagudda gram panchayat lady dtp operator suicide)

Click on your DTH Provider to Add TV9 Kannada