ಟಿವಿ ವಿಷಯದಲ್ಲಿ ಸಹೋದರಿಯರ ನಡುವೆ ವಾಗ್ವಾದ; ಕೇರಳದಲ್ಲಿ 11ರ ಹರೆಯದ ಬಾಲಕಿ ನೇಣುಬಿಗಿದು ಆತ್ಮಹತ್ಯೆ

ಸೋಮವಾರ ಪೋಷಕರು ಹೊರಗೆ ಹೋಗಿದ್ದಾಗ ಬಾಲಕಿ, ಆಕೆಯ ಸಹೋದರಿ ಮತ್ತು ಸೋದರಸಂಬಂಧಿ  ಟಿವಿ ವೀಕ್ಷಿಸುತ್ತಿದ್ದರು. ಈ ನಡುವೆ ವಾಗ್ವಾದ ನಡೆದಿದ್ದು ನಂತರ 11 ವರ್ಷದ ಬಾಲಕಿ ಕೋಣೆಗಯೊಳಗೆ ಹೋಗಿ ಬೀಗ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ

ಟಿವಿ ವಿಷಯದಲ್ಲಿ ಸಹೋದರಿಯರ ನಡುವೆ ವಾಗ್ವಾದ; ಕೇರಳದಲ್ಲಿ 11ರ ಹರೆಯದ ಬಾಲಕಿ ನೇಣುಬಿಗಿದು ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ

ಇಡುಕ್ಕಿ: ಟಿವಿ ನೋಡುವ ವಿಷಯದಲ್ಲಿ ತನ್ನ ಸಹೋದರಿಯೊಂದಿಗೆ ವಾಗ್ವಾದ ನಡೆದ ನಂತರ ಕೇರಳದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋಮವಾರ ಇಡುಕ್ಕಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

11 ವರ್ಷದ ಬಾಲಕಿ ಇಡುಕ್ಕಿಯ ಮನಕ್ಕಾಡ್‌ನಲ್ಲಿರುವ ತನ್ನ ಮನೆಯೊಳಗಿನ ಕಿಟಕಿ ಗ್ರಿಲ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.

ಸೋಮವಾರ ಪೋಷಕರು ಹೊರಗೆ ಹೋಗಿದ್ದಾಗ ಬಾಲಕಿ, ಆಕೆಯ ಸಹೋದರಿ ಮತ್ತು ಸೋದರಸಂಬಂಧಿ  ಟಿವಿ ವೀಕ್ಷಿಸುತ್ತಿದ್ದರು. ಈ ನಡುವೆ ವಾಗ್ವಾದ ನಡೆದಿದ್ದು ನಂತರ 11 ವರ್ಷದ ಬಾಲಕಿ ಕೋಣೆಗಯೊಳಗೆ ಹೋಗಿ ಬೀಗ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಸ್ವಲ್ಪ ಹೊತ್ತಿನ ನಂತರ ಆಕೆ ನೇಣು ಬಿಗಿದಿರುವ ಸ್ಥಿತಿಯಲ್ಲಿ ಆಕೆಯ ಅಜ್ಜಿ ನೋಡಿದ್ದಾರೆ .

ಆರಂಭಿಕ ತನಿಖೆಯ ಪ್ರಕಾರ 6 ನೇ ತರಗತಿಯ 11 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬಕ್ರೀದ್ ಪ್ರಯುಕ್ತ ಲಾಕ್​ಡೌನ್ ಸಡಿಲಿಸಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ