ಕಲಬುರಗಿ: ಶಾಲಾ ವಿದ್ಯಾರ್ಥಿಯ ಅಪಹರಣ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಮುಂದೇನಾಯ್ತು?

ಶಾಲೆಯಿಂದ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಅಪಹರಣ ನಡೆಸಿ ಒಂದಷ್ಟು ದೂರ ಹೋಗುತ್ತಿದ್ದಾಗ ಪೊಲೀಸರು ಎದುರಾಗಿದ್ದಾರೆ. ಮುಂದೇನಾಯ್ತು ಎಂಬುದು ಇಲ್ಲಿದೆ.

ಕಲಬುರಗಿ: ಶಾಲಾ ವಿದ್ಯಾರ್ಥಿಯ ಅಪಹರಣ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಮುಂದೇನಾಯ್ತು?
ಅಪಹರಣಕ್ಕೊಳಗಾದ ಶಾಲಾ ವಿದ್ಯಾರ್ಥಿ
Updated By: Rakesh Nayak Manchi

Updated on: Aug 18, 2023 | 10:15 PM

ಕಲಬುರಗಿ, ಆಗಸ್ಟ್ 18: ಶಾಲೆಯಿಂದ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿಯನ್ನು ಅಪಹರಣ (Kidnap) ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ಇಂದು ಸಂಜೆ ನಡೆದಿದೆ. ಮಹಾಗಾಂವ್ ಸರ್ಕಾರಿ ಶಾಲೆಯ ಶರಣಯ್ಯ ಶಿವಣ್ಣ (13) ಅಪಹರಣಕ್ಕೊಳಗಾದ ಬಾಲಕನಾಗಿದ್ದಾನೆ.

ವಿದ್ಯಾರ್ಥಿ ಶರಣಯ್ಯ ಶಿವಣ್ಣ ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಓಮಿನಿ ಕಾರ್​ನಲ್ಲಿ ಬಂದ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಅಪಹರಣ ಮಾಡಿ 2 ಕಿ. ಮೀ. ಹೊಗುತ್ತಿದ್ದಂತೆ ಓಮಿನಿ ಕಾರಿಗೆ ಪೊಲೀಸ್ ವಾಹನ ಎದುರಾಗಿದೆ.

ಇದನ್ನೂ ಓದಿ: ಮುಂಬೈ: ಬಂದೂಕು ತೋರಿಸಿ ಉದ್ಯಮಿ ಅಪಹರಣ, ಶಿಂಧೆ ಬಣದ ಶಾಸಕರ ಪುತ್ರನ ವಿರುದ್ಧ ಎಫ್‌ಐಆರ್

ಕೂಡಲೇ ಅಪಹರಣಕಾರರು, ವಿದ್ಯಾರ್ಥಿಯ ಹೆಬ್ಬರಳಿಗೆ ಬ್ಲೇಡ್​ನಿಂದ ಕೊಯ್ದು ಮುಳ್ಳಿನ ಕಂಟಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಮುಳ್ಳಿನ ಕಂಟಿಯಿಂದ ಹೊರಬಂದು ಕಣ್ಣಿರು ಹಾಕುತ್ತಲೇ ಮನೆಗೆ‌ ಹೋದ ಶರಣಯ್ಯ ಶಿವಣ್ಣ, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೋಷಕರು ನೀಡಿದ ದೂರಿನ ಅನ್ವಯ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ