ಕಲಬುರಗಿ, ಮಾ.12: ‘ಬಿಜೆಪಿಯಿಂದ ನನ್ನನ್ನು ಹೊರಹಾಕಲ್ಲ, ಬಿಜೆಪಿಯಲ್ಲಿ ಗಟ್ಟಿಯಾಗಿದ್ದೀನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಹೇಳಿದರು. ಕಲಬುರಗಿ(Kalaburagi)ಯ ಶ್ರೀಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆ ಮುಗಿಯಲಿ, ನಂತರ ನಾನು ತೋರಿಸುತ್ತೇನೆ. ಚುನಾವಣೆಯೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ 2ಎ ಮೀಸಲಾತಿ ನೀಡಬೇಕು. ಇಲ್ಲದಿದ್ರೆ ಕಾಂಗ್ರೆಸ್ಗೆ ವೋಟ್ ಹಾಕಬೇಡಿ. ನಾನು ಮೀಸಲಾತಿ ತಂದು ತೋರಿಸ್ತೆನೆ ಕೇಂದ್ರದಲ್ಲಿ ನಮ್ಮದೆ ಸರ್ಕಾರ ಬರುತ್ತೆ ಎಂದರು.
ಇನ್ನು ಲೋಕಸಭಾ ಚುನಾವಣೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಈ ಸಮಾವೇಶ ಆಯೋಜಿಸಲಾಗಿದೆ. ಈ ಮೂಲಕ ದೀಕ್ಷಾ, ಪಂಚಮಸಾಲಿ ಸಮಾಜಗಳು ಒಂದು ಮಾಡಲು ಮುಂದಾಗಿದ್ದೇವೆ. ನಮ್ಮ ಹೋರಾಟದಿಂದಲೇ ವೀರಶೈವ ಲಿಂಗಾಯತ ಸಮಾಜ ಒಂದಾಗುತ್ತಿದೆ. ಮೀಸಲಾತಿ ದೊರೆಯುವುದಕ್ಕೆ ಪ್ರಧಾನಿ ಮೋದಿ, ಶಾ ಮುತುವರ್ಜಿ ವಹಿಸಿದ್ದರು. ಕೆಲ ಸ್ವಾಮೀಜಿಗಳು ಯಾರೂ ಏನು ಕೆಲಸ ಮಾಡುತ್ತಿಲ್ಲ ಎಂದು ಯತ್ನಾಳ್ ಸ್ವ ಸಮುದಾಯದ ಸ್ವಾಮೀಜಿಗಳ ವಿರುದ್ದ ಕಿಡಿಕಾರಿದರು.
ಇದನ್ನೂ ಓದಿ:ಪೂಜ್ಯ ತಂದೆ-ಮಕ್ಕಳು ಎಲ್ಲರನ್ನೂ ಮುಗಿಸಲು ಹೊರಟಿದ್ದಾರೆ: ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ
ಕೆಲ ಸ್ವಾಮೀಜಿಗಳು, ‘ನೀನು ಸಿಎಂ ಆಗ್ತೀಯಾ ಎಂದು ಆಶೀರ್ವದಿಸ್ತಾರೆ, ನಮ್ಮ ವಿಜಯಪುರ ಮಂದಿ ಯಾವುದಕ್ಕೂ ಅಂಜುವುದಿಲ್ಲ. ವಿಧಾನಸಭೆ ಚುನಾವಣೆ ವೇಳೆ ನನಗೆ ಟಿಕೆಟ್ ತಪ್ಪಿಸ್ತೀನಿ ಎಂದು ಕೆಲವರು ಹೇಳಿದ್ದರು. ಅವರೆಲ್ಲಾ ಏನ್ ಮಾಡಿದ್ರು, ಬಿಜೆಪಿಯ ಮೊದಲ ಲಿಸ್ಟ್‌ನಲ್ಲೇ ನನಗೆ ಟಿಕೆಟ್ ಸಿಕ್ಕಿತು. ಪರೋಕ್ಷವಾಗಿ ವಿರೋಧಿಗಳ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಗುಡುಗಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ