ಬಾಡಿಗೆ ಭಾಷಣಕಾರರೆಲ್ಲ ಸಂಸದರಾಗಲು ಸಾಧ್ಯವೇ? ಸೂಲಿಬೆಲೆ ಮೊದಲು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿ: ಪ್ರಿಯಾಂಕ್ ಖರ್ಗೆ

ಬಾಡಿಗೆ ಭಾಷಣಕಾರರೆಲ್ಲ ಸಂಸದರಾಗಲು ಸಾಧ್ಯವೇ? ಸೂಲಿಬೆಲೆ ಮೊದಲು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿ: ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 12, 2024 | 4:42 PM

ಯಾರು ಇವರೆಲ್ಲ? ಬಾಡಿಗೆ ಭಾಷಣಕಾರರೆಲ್ಲ ರಾಜಕೀಯಕ್ಕೆ ಇಳಿದರೆ ಹೇಗೆ? ಇದುವರೆಗೆ ಒಂದು ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸದ ಜನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ? ಯಾವುದೋ ಸಂಘಟನೆಯವರು ಅವರ ಹೆಸರನ್ನು ಪಕ್ಷದ ವರಿಷ್ಠರಿಗೆ ಕಳಿಸಿ ಟಿಕೆಟ್ ಕೊಡಿ ಅಂತ ಕೇಳಿರಬಹುದು ಎಂದು ಖರ್ಗೆ ಹೇಳಿದರು.

ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಕಲಬುರಗಿ ರೊಟ್ಟಿ ಬ್ರ್ಯಾಂಡ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ (Ananth Kumar Hegde) ಮತ್ತು ಆ ಕ್ಷೇತ್ರಕ್ಕೆ ಟಿಕೆಟ್ ಗಿಟ್ಟಿಸಬಹುದೆನ್ನಲಾಗುತ್ತಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೆಗಡೆಯವರನ್ನ್ನು ಹುಚ್ಚ, ಮನೋರೋಗಿ ಎಂದ ಖರ್ಗೆ, ಸೂಲಿಬೆಲೆ ಸ್ಪರ್ಧೆಯ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೆಂಡಾಮಂಡಲರಾದರು. ತನಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ, ಇಂಥವರ ಬಗ್ಗೆ ಪ್ರಶ್ನೆಗಳನ್ನು ಕೇಳಿ ನಿಮ್ಮ ಹಾಗೂ ತಮ್ಮ ಸಮಯ ವ್ಯರ್ಥಮಾಡಬೇಡಿ ಎಂದು ಅವರು ಹೇಳಿದರು. ಯಾರು ಇವರೆಲ್ಲ? ಬಾಡಿಗೆ ಭಾಷಣಕಾರರೆಲ್ಲ ರಾಜಕೀಯಕ್ಕೆ ಇಳಿದರೆ ಹೇಗೆ? ಇದುವರೆಗೆ ಒಂದು ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸದ ಜನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ? ಯಾವುದೋ ಸಂಘಟನೆಯವರು ಅವರ ಹೆಸರನ್ನು ಪಕ್ಷದ ವರಿಷ್ಠರಿಗೆ ಕಳಿಸಿ ಟಿಕೆಟ್ ಕೊಡಿ ಅಂತ ಕೇಳಿರಬಹುದು ಎಂದು ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ಹಿಟ್ ಆ್ಯಂಡ್ ರನ್‌ ಮಾಸ್ಟರ್: ಕಲಬುರಗಿ ಪ್ರವೇಶಕ್ಕೆ ಪೊಲೀಸರು ತಡೆಯೊಡ್ಡಿದ ಬಳಿಕ ಚಕ್ರವರ್ತಿ ಸೂಲಿಬೆಲೆ ಕಿಡಿ

Published on: Mar 12, 2024 04:40 PM