ಖಾನಾಪುರ ಬಳಿ ಕಾರು ಪಲ್ಟಿಯಾಗಿ ತಂದೆ ಮಗ ಸಾವು; ಈಜುಬಾರದಿದ್ದರೂ ಕಾಲುವೆಗೆ ಇಳಿದ ವಿದ್ಯಾರ್ಥಿ ‌ನೀರು‌ಪಾಲು

ಖಾನಾಪುರ ಬಳಿ ಕಾರು ಪಲ್ಟಿಯಾಗಿ ತಂದೆ ಮಗ ಸಾವು; ಈಜುಬಾರದಿದ್ದರೂ ಕಾಲುವೆಗೆ ಇಳಿದ ವಿದ್ಯಾರ್ಥಿ ‌ನೀರು‌ಪಾಲು
ಈಜುಬಾರದಿದ್ದರೂ ಕಾಲುವೆಗೆ ಇಳಿದ ವಿದ್ಯಾರ್ಥಿ ‌ನೀರು‌ಪಾಲು

ಸ್ನೇಹಿತರೊಂದಿಗೆ ಕಾಲುವೆಯಲ್ಲಿ ಈಜಲು ತೆರಳಿದ್ದ ಮದನ್ ಸಾಲವಾಡಗಿ ಜಲಸಮಾಧಿಯಾದ ನತದೃಷ್ಟ ವಿದ್ಯಾರ್ಥಿ. ಈಜಲು‌ ಬಾರದಿದ್ದರೂ ಕಾಲುವೆಗೆ ಜಿಗಿದಿದ್ದ ಮದನ್ ಸಾವನ್ನಪ್ಪಿದ್ದಾನೆ. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿದ್ದ ಮದನ್, ತಾಳಿಕೋಟೆ ತಾಲೂಕಿನ ಬಿ. ಸಾಲವಾಡಗಿ ಗ್ರಾಮದ ಯುವಕ.

TV9kannada Web Team

| Edited By: sadhu srinath

Apr 04, 2022 | 9:17 PM

ಕಲಬುರಗಿ: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಖಾನಾಪುರ ಗ್ರಾಮದ ಬಳಿ ಕಾರು ಪಲ್ಟಿಯಾಗಿ ತಂದೆ ಮತ್ತು ಮಗ ಅಸುನೀಗಿದ್ದಾರೆ. ಸ್ವಾಮಿ ಗಾಯಕ್ವಾಡ (30) ಮತ್ತು ಬಾಬು ಗಾಯಕ್ವಾಡ (55) ಮೃತರು. ಮೃತಪಟ್ಟವರು ಮಹಾರಾಷ್ಟ್ರದ ಅಕ್ಕಲಕೋಟೆ ನಿವಾಸಿಗಳು. ಆಳಂದದಿಂದ ಅಕ್ಕಲಕೋಟೆಗೆ ಹೋಗುವಾಗ ಅಪಘಾತ ಸಂಭವಿಸಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲುವೆಯಲ್ಲಿ ಈಜಲು‌ ತೆರಳಿದ್ದ ವಿದ್ಯಾರ್ಥಿ ‌ನೀರು‌ಪಾಲು: ವಿಜಯಪುರ: ಕಾಲುವೆಯಲ್ಲಿ ಈಜಲು‌ ತೆರಳಿದ್ದ ದ್ವಿತೀಯ ಪಿಯು ವಿದ್ಯಾರ್ಥಿ ‌ನೀರು‌ಪಾಲಾಗಿದ್ದಾನೆ. ಮುದ್ದೇಬಿಹಾಳ ‌ತಾಲೂಕಿನ ಹಡಲಗೇರಿ ಬಳಿಯ ಚಿಮ್ಮಲಗಿ ಕಾಲುವೆಯಲ್ಲಿ ಈ ಕಹಿ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಕಾಲುವೆಯಲ್ಲಿ ಈಜಲು ತೆರಳಿದ್ದ ಮದನ್ ಸಾಲವಾಡಗಿ ಜಲಸಮಾಧಿಯಾದ ನತದೃಷ್ಟ ವಿದ್ಯಾರ್ಥಿ. ಈಜಲು‌ ಬಾರದಿದ್ದರೂ ಕಾಲುವೆಗೆ ಜಿಗಿದಿದ್ದ ಮದನ್ ಸಾವನ್ನಪ್ಪಿದ್ದಾನೆ. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿದ್ದ ಮದನ್, ತಾಳಿಕೋಟೆ ತಾಲೂಕಿನ ಬಿ. ಸಾಲವಾಡಗಿ ಗ್ರಾಮದ ಯುವಕ. ಅಗ್ನಿಶಾಮಕ ದಳ‌ದ ಸಿಬ್ಬಂದಿಯಿಂದ ಮದನ್​ಗಾಗಿ ಶೋಧ ಕಾರ್ಯ ನಟೆದಿದೆ. ಸ್ಥಳಕ್ಕೆ ಮುದ್ದೇಬಿಹಾಳ ತಹಶೀಲ್ದಾರ್ ಕಡಕಬಾವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಲಮಾಣಿ ಭೇಟಿ ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರ್ಷ ತೊಡಕಿನಂದು ಈಜಲು ಹೋಗಿ ನೀರುಪಾಲಾಗಿದ್ದ ಮೂವರ ಮೃತದೇಹಗಳು ಪತ್ತೆ: ಬಳ್ಳಾರಿ: ಹೋಳಿ ಆಡಿ ಮೈತೊಳೆಯಲು ಹೋಗಿದ್ದ ಮೂವರು ಯುವಕರು ಕಾಲುವೆಗೆ ಕಾಲು ಜಾರಿಬಿದ್ದು ಮೃತಪಟ್ಟ ಘಟನೆ ಭಾನುವಾರ ಬಳ್ಳಾರಿಯಲ್ಲಿ ನಡೆದಿದ್ದು. ಮೃತರ ದೇಹಗಳು ಸೋಮವಾರ ಬೆಳ್ಳಿಗೆ ಪತ್ತೆಯಾಗಿವೆ. ಬಳ್ಳಾರಿ ನಗರದ ಮರಿಸ್ವಾಮಿ ಮಠದ ನಿವಾಸಿ ಈಶ್ವರ(15), ತಾಳೂರು ರೋಡ್‌ ನಿವಾಸಿ ವಿರುಪಾಕ್ಷಿ(25), ಹಾಗೂ ತಾಲೂಕಿನ ಹಂದಿಹಾಳು ಗ್ರಾಮ ನಿವಾಸಿ ಶೌಕತ್‌ ಆಲಿ(15) ಮೃತ ಬಾಲಕರಾಗಿದ್ದಾರೆ.

ಮೃತ ಶೌಕತ್‌ ಆಲಿ ಗೆಳೆಯರ ಜೊತೆ ಭಾನುವಾರ ಮಧ್ಯಾಹ್ನದ ವೇಳೆ ಗುಡೂದೂರಿನ ಎಲ್‌ಎಲ್‌ಸಿ ಕಾಲುವೆಗೆ ಮೈ ತೊಳೆಯಲು ಹೋಗಿದ್ದ ವೇಳೆ ಘಟನೆ ನಡೆದಿದೆ. ನಗರದ ಇಬ್ಬರು ಮೃತರು ಬೇರೆ ಬೇರೆ ಸಮಯದಲ್ಲಿ ಶಿವಪುರದ ಕಾಲುವೆಗೆ ಈಜಲು ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಒಬ್ಬರ ಮೃತ ದೇಹವು ಪಿಡಿ ಹಳ್ಳಿಯ ರೆಗ್ಯುಲೇಟರ್‌ ಹಾಗೂ ಇನ್ನಿಬ್ಬರ ಮೃತ ದೇಹವು ಬ್ಯಾಲಚಿಂತೆ ರೆಗ್ಯುಲೇಟರ್‌ ಗಳಲ್ಲಿ ಪತ್ತೆಯಾಗಿವೆ. ಈ ಮೃತರ ಸಂಬಂಧಿಕರ ದೂರಿನ ಮೇರೆಗೆ ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್​ ಠಾಣೆ ಎದುರಿಗಿರುವ ಅಂಗಡಿಗೇ ಕನ್ನ ಹಾಕಿ ಕಳವು: ಆನೇಕಲ್‌: ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲೂಕಿನ‌ ಸೂರ್ಯನಗರ ಪೊಲೀಸ್​ ಠಾಣೆ ಎದುರಿಗೇ ಇರುವ ಅಂಗಡಿಗೆ ಕನ್ನ ಹಾಕಿ ಅಂದಾಜು 1 ಲಕ್ಷ ರೂಪಾಯಿ ನಗದು ಕಳವು ಮಾಡಲಾಗಿದೆ. ಸೂರ್ಯನಗರ ಠಾಣೆ ಎದುರಿಗಿನ ಫರ್ನೀಚರ್​ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಫರ್ನಿಚರ್ ಮಳಿಗೆಯಲ್ಲಿದ್ದ 1 ಲಕ್ಷ ನಗದು ಮತ್ತು ಸಿಸಿಟಿವಿ ಚಿಪ್ ಕಳವು ಮಾಡಲಾಗಿದೆ. ಫೋಮ್ ಟೆಕ್ ಅಂಗಡಿಯ ಛಾವಣಿ‌‌ ಕೊರೆದು ಕೃತ್ಯವೆಸಗಲಾಗಿದೆ. ಅಂಗಡಿ ಬಗ್ಗೆ ತಿಳಿದವರೇ‌ ಕಳ್ಳತನ‌ ಮಾಡಿರೋ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಬೇಸಿಗೆ ಶುರುವಾಗುತ್ತಿದ್ದಂತೆ ರಾಜ್ಯದ ಜನರಿಗೆ ಬಿಗ್ ಶಾಕ್; ವಿದ್ಯುತ್ ದರ ಏರಿಕೆಗೆ ಮುಂದಾದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ

ಕಾಂಗ್ರೆಸ್ ತೊರೆದು ಕಳೆದ ವರ್ಷ ಟಿಎಂಸಿ ಸೇರಿದ್ದ ಅಶೋಕ್ ತಂವರ್ ಈಗ ಎಎಪಿಗೆ ಸೇರಲು ಸಿದ್ಧತೆ

Follow us on

Related Stories

Most Read Stories

Click on your DTH Provider to Add TV9 Kannada