AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂದಿರ, ಮಸೀದಿಗಳಿಂದ ಧ್ವನಿವರ್ಧಕ ತೆರವು, ಹೈಕೋರ್ಟ್ ಆದೇಶ ಪಾಲನೆಗೆ ಸಿಎಂ ಬೊಮ್ಮಾಯಿ ಸೂಚನೆ

ಧ್ವನಿವರ್ಧಕ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮಂದಿರ ಮತ್ತು ಮಸೀದಿಗಳಿಗೆ ಹೈಕೋರ್ಟ್ ಆದೇಶ ಪಾಲನೆಗೆ ಸೂಚನೆ ನೀಡಲಾಗಿದೆ.

ಮಂದಿರ, ಮಸೀದಿಗಳಿಂದ ಧ್ವನಿವರ್ಧಕ ತೆರವು, ಹೈಕೋರ್ಟ್ ಆದೇಶ ಪಾಲನೆಗೆ ಸಿಎಂ ಬೊಮ್ಮಾಯಿ ಸೂಚನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 22, 2022 | 12:49 PM

ಕಲಬುರ್ಗಿ: ಧ್ವನಿವರ್ಧಕ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮಂದಿರ ಮತ್ತು ಮಸೀದಿಗಳಿಗೆ ಹೈಕೋರ್ಟ್ ಆದೇಶ ಪಾಲನೆಗೆ ಸೂಚನೆ ನೀಡಲಾಗಿದೆ. ಅನುಸರಿಸದ ಕೆಲವರಿಗೆ ಎಚ್ಚರಿಕೆ ನೀಡಲಾಗಿತ್ತು ಹಲವರ ಮೇಲೆ ಪ್ರಕರಣಗಳನ್ನೂ ದಾಖಲಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಗೂ ಮೈಕ್ ಹಾವಳಿ ನಿಯಂತ್ರಿಸಲು ಜವಾಬ್ದಾರಿ ನೀಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಘರ್ಷಣೆಯಾಗದಂತೆ ನೋಡಿಕೊಳ್ಳಬೇಕು, ಕಾನೂನು ಉಲ್ಲಂಘನೆಯಾಗಿರುವುದು ಕಂಡುಬಂದಾಗ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಿಜಾಬ್​ಗೆ ಅವಕಾಶ ನೀಡದ ಕಾರಣಕ್ಕಾಗಿ ಪರೀಕ್ಷೆ ಬರೆಯದೆ ಕೆಲ ವಿದ್ಯಾರ್ಥಿನಿಯರು ಮನೆಗಳಿಗೆ ಹಿಂದಿರುಗಿದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದ ಬಗ್ಗೆ ನಮ್ಮ ಶಿಕ್ಷಣ ಸಚಿವರು ಗಮನ ಹರಿಸುತ್ತಾರೆ. ಮರು ಪರೀಕ್ಷೆ ಬಗ್ಗೆಯೂ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ದಿಂಗಾಲೇಶ್ವರ ಸ್ವಾಮೀಜಿಗೆ ಪೊಲೀಸರು ಧಮಕಿ ಹಾಕಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಪೊಲೀಸರೂ ಶ್ರೀಗಳಿಗೆ ಧಮಕಿ ಹಾಕುವುದಿಲ್ಲ. ದಿಂಗಾಲೇಶ್ವರ ಸ್ವಾಮೀಜಿ ಬಗ್ಗೆ ನಮಗೆ ಅಪಾರ ಗೌರವವಿದೆ. ಪೊಲೀಸರು ಬೆದರಿಕೆ ಹಾಕಿದ್ದರೆ ಸ್ವಾಮೀಜಿ ದೂರು ಕೊಡಲಿ ಎಂದು ಸಲಹೆ ಮಾಡಿದರು. ಮಠಗಳಿಗೆ ಘೋಷಿಸಿರುವ ಅನುದಾನ ಮಂಜೂರು ಮಾಡಲು ಶ್ರೀಗಳು ಯಾರಿಗಾದರೂ ಕಮಿಷನ್ ಕೊಟ್ಟಿದ್ದರೆ ಅದರ ಬಗ್ಗೆ ಮಾಹಿತಿ ಕೊಡಲಿ. ಕಮಿಷನ್ ಕೇಳಿದವರ ವಿರುದ್ಧ ನಮ್ಮ ಸರ್ಕಾರ ಶಿಸ್ತುಕ್ರಮ ಕೈಗೊಳ್ಳುತ್ತದೆ ಎಂದು ನುಡಿದರು.

ಕರ್ನಾಟಕದಲ್ಲಿ ಶೂನ್ಯ ಪರ್ಸೆಂಟೇಜ್ ಸರ್ಕಾರ ಮಾಡಲಾಗುವದು ಎನ್ನುವ ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರ ಸುತ್ತಮುತ್ತ ಇದ್ದವರು ಯಾರು? ಪರ್ಸೆಂಟೇಜ್ ಆರೋಪ ಇದ್ದವರೇ ಅವರ ಸುತ್ತಲೂ ಇದ್ದಾರೆ ಎಂದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಬೇಕಿದೆ. ಗಲಭೆ ಮಾಡಿದವರ ಆಸ್ತಿನಾಶಕ್ಕೆ ಬುಲ್ಡೋಜರ್ ಬಳಕೆಯನ್ನು ಅವರು ಸಮರ್ಥಿಸಿಕೊಂಡರು. ಗಲಭೆಕೋರರಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಲಾಗುವುದು. 371 ಜೆ ವಿಧಿಯ ಅನುಷ್ಠಾನಕ್ಕೆ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವದು. ಕೆಕೆಆರ್​ಡಿಬಿಗೆ ಮೂರು ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಶಾಸಕರ ನಡುವೆ ಸಮನ್ವಯತೆಯ ಕೊರತೆ ಇಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಯೋಜನೆ ರೂಪಿಸಲಾಗುವುದು ಎಂದರು.

ಪಿಎಸ್​ಐ ಪರೀಕ್ಷೆ ಅಕ್ರಮದಲ್ಲಿ ಬಿಜೆಪಿ ನಾಯಕಿಯ ಹೆಸರು ತಳುಕಿ ಹಾಕಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾಪತ್ತೆಯಾಗಿರುವ ದಿವ್ಯಾ ಹಾಗರಗಿಗಾಗಿ ಹುಡುಕಾಟ ನಡೆಯುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಅವರ ಗನ್​ಮೆನ್ ಬಂಧನ ಕುರಿತು ಪ್ರಸ್ತಾಪಿಸಿದ ಅವರು ಪಾಟೀಲ್ ಕೇಳಿದವರನ್ನೇ ಗನ್​ಮೆನ್ ಆಗಿ ನೀಡಲಾಗಿದೆ. ಅವರ ಗನ್​ಮ್ಯಾನ್ ಹೇಗಿದ್ದಾನೆ ಅಂತ ಅವರಿಗೆ ಗೊತ್ತಿರಲಿಲ್ವವೇ ಎಂದು ಪ್ರಶ್ನಿಸಿದರು.

ಅಕ್ರಮದಲ್ಲಿ ಭಾಗಿಯಾದ ದಿವ್ಯಾ ಹಾಗರಗಿ ಪರವಾಗಿ ವರ್ತಿಸಬಾರದು ಎಂದು ಶಾಸಕರಿಗೆ ಸೂಚನೆ ನೀಡಲಾಗಿದೆ. ಆಕೆಯಿಂದ ಪಕ್ಷಕ್ಕೆ ಈಗಾಗಲೇ ಸಾಕಷ್ಟು ನಷ್ಟವಾಗಿದೆ. ಕೆಲ ಶಾಸಕರು ಆದಷ್ಟು ಬೇಗ ಅವರನ್ನು ಬಂಧಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ದಿವ್ಯಾಳಿಂದ ಪಕ್ಷಕ್ಕೆ ನಮಗೆ ಸಾಕಷ್ಟು ಮುಜುಗರ ಆಗಿದೆ. ದಿವ್ಯಾ ಬಂಧನದ ಮೂಲಕ ಯಾರನ್ನು ರಕ್ಷಣೆ ಮಾಡೋದಿಲ್ಲ ಎನ್ನುವ ಸಂದೇಶ ನೀಡುವಂತೆ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ನನಗೆ ಮನವಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಇಬ್ಬರ ಬಂಧನ. ತನಿಖೆಗೆ ಪೂರ್ಣ ವಿರಾಮ‌ ಹಾಕಲು ಸೂಚನೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ವಿರೋಧ ಪಕ್ಷಗಳಲ್ಲ ಜನ ಹೇಳುವುದು ಮುಖ್ಯ ಎಂದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published On - 12:49 pm, Fri, 22 April 22

Video: ಪ್ರಧಾನಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
Video: ಪ್ರಧಾನಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
Daily Devotional: ತೀರ್ಥ ತೆಗೆದುಕೊಳ್ಳುವ ವಿಧಾನ ಹೇಗೆ ತಿಳಿಯಿರಿ
Daily Devotional: ತೀರ್ಥ ತೆಗೆದುಕೊಳ್ಳುವ ವಿಧಾನ ಹೇಗೆ ತಿಳಿಯಿರಿ
Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
Daily Horoscope: ಕನ್ಯಾ ರಾಶಿಯ ಆರನೇ ಮನೆಯಲ್ಲಿ ಚಂದ್ರ ಸಂಚಾರ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ