Achar Halappa Basappa: ಮುಖ್ಯಮಂತ್ರಿ ಬೊಮ್ಮಾಯಿ ಕ್ಯಾಬಿನೆಟ್​​ನಲ್ಲಿ ಆಚಾರ್ ಹಾಲಪ್ಪಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ

| Updated By: ಸಾಧು ಶ್ರೀನಾಥ್​

Updated on: Aug 07, 2021 | 12:29 PM

ಹಾಲಪ್ಪ ಆಚಾರ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ (Karnataka assembly elections 2018) ಯಲಬುರ್ಗಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಚುನಾಯಿತರಾದವರು. ಅವರು ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್​​ ಪಕ್ಷದ ಬಸವರಾಜ ರಾಯರೆಡ್ಡಿ ಅವರಿಗಿಂತ 13,318 ರಷ್ಟು ಅಧಿಕ ಮತ ಗಳಿಸಿ, ಗೆಲುವು ಸಾಧಿಸಿದ್ದರು.

Achar Halappa Basappa: ಮುಖ್ಯಮಂತ್ರಿ ಬೊಮ್ಮಾಯಿ ಕ್ಯಾಬಿನೆಟ್​​ನಲ್ಲಿ ಆಚಾರ್ ಹಾಲಪ್ಪಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಮುಖ್ಯಮಂತ್ರಿ ಬೊಮ್ಮಾಯಿ ಕ್ಯಾಬಿನೆಟ್: ನೂತನ ಸಚಿವ ಆಚಾರ್ ಹಾಲಪ್ಪ ಬಸಪ್ಪ ಪರಿಚಯ
Follow us on

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತಮ್ಮ ಚೊಚ್ಚಲ ಸಚಿವ ಸಂಪುಟವನ್ನು ರಚಿಸಿದ್ದಾರೆ. ಯಲಬುರ್ಗಾ ಕ್ಷೇತ್ರದ ಶಾಸಕ ಆಚಾರ್ ಹಾಲಪ್ಪ ಬಸಪ್ಪ ಅವರು ಹೊಸಬರಾಗಿ ಸಿಎಂ ಬೊಮ್ಮಾಯಿ ಸಂಪುಟವನ್ನು ಸೇರಿದ್ದಾರೆ. ಇಂದು ಮಧ್ಯಾಹ್ನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರು ನೂತನ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಹಾಲಪ್ಪ ಆಚಾರ್​​ಗೆ ಸಿಕ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ:
70 ವರ್ಷದ ಹಾಲಪ್ಪ ಆಚಾರ್ ಅವರು  (Achar Halappa Basappa) 2018ರ ವಿಧಾನಸಭಾ ಚುನಾವಣೆಯಲ್ಲಿ (Karnataka assembly elections 2018) ಯಲಬುರ್ಗಾ ಕ್ಷೇತ್ರದಿಂದ (Yelburga Constituency) ಬಿಜೆಪಿ ಶಾಸಕರಾಗಿ ಚುನಾಯಿತರಾದವರು. ಅವರು ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್​​ ಪಕ್ಷದ ಬಸವರಾಜ ರಾಯರೆಡ್ಡಿ ಅವರಿಗಿಂತ 13,318 ರಷ್ಟು ಅಧಿಕ ಮತ ಗಳಿಸಿ, ಗೆಲುವು ಸಾಧಿಸಿದ್ದರು. ಹಾಲಪ್ಪ ಆಚಾರ್ ಒಟ್ಟು 79,072 ಮತ ಗಳಿಸಿದ್ದರು.

ಹಾಲಪ್ಪ ಆಚಾರ್ ಅವರು 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ (Karnataka University) ಬಿಎಸ್​ಸಿ (B.Sc) ಪಡೆದಿದ್ದಾರೆ.

(Karnataka chief minister Basavaraj Bommai Cabinet Formation Achar Halappa Basappa profile)

Published On - 3:20 pm, Wed, 4 August 21