ಕಲಬುರಗಿ ಪೊಲೀಸ್ ಕಮಿಷನರ್ ವಿರುದ್ದ ಲೋಯಾಯುಕ್ತಕ್ಕೆ ದೂರು, ಪತ್ನಿ ಮಾಡಿದ ಯಡವಟ್ಟಿಗೆ ಟ್ರಬಲ್​​ ಶುರುವಾಯ್ತಾ?

ಕಲಬುರಗಿ ಪೊಲೀಸ್ ಕಮಿಷನರ್ ರವಿಕುಮಾರ್ ವಿರುದ್ದ ಲೋಯಾಯುಕ್ತಕ್ಕೆ ದೂರು ದಾಖಲಾಗಿದ್ದು, ಕಾಂಗ್ರೆಸ್​​ ನಾಯಕರು ಕೂಡಾ ತನಿಖೆಗೆ ಆಗ್ರಹಿಸಿದ್ದಾರೆ. ಪತ್ನಿ ಮಾಡಿದ ಯಡವಟ್ಟಿಗೆ ಇದೀಗ ಕಮಿಷನರ್ ಟ್ರಬಲ್​​ ನಲ್ಲಿ ಸಿಕ್ಕಾಕಿಕೊಂಡಂತಿದೆ.

ಕಲಬುರಗಿ ಪೊಲೀಸ್ ಕಮಿಷನರ್ ವಿರುದ್ದ ಲೋಯಾಯುಕ್ತಕ್ಕೆ ದೂರು, ಪತ್ನಿ ಮಾಡಿದ ಯಡವಟ್ಟಿಗೆ ಟ್ರಬಲ್​​ ಶುರುವಾಯ್ತಾ?
ಕಲಬುರಗಿ ಪೊಲೀಸ್ ಕಮಿಷನರ್ ವಿರುದ್ದ ಲೋಯಾಯುಕ್ತಕ್ಕೆ ದೂರು
Edited By: ಸಾಧು ಶ್ರೀನಾಥ್​

Updated on: Dec 10, 2022 | 9:00 AM

ಅಂದು ಪೊಲೀಸ್ ಕಮಿಷನರ್ ಅವರು ತಮ್ಮ ಪತ್ನಿ ಜೊತೆ ಭರ್ಜರಿ ದಾಂಡಿಯಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು. ಆದ್ರೆ ಅಂದು ಸಂಭ್ರಮಿಸಿದ್ದೇ ಇಂದು ಪೊಲೀಸ್ ಕಮಿಷನರ್ (Kalaburagi Police commissioner) ಅವರಿಗೆ ಸಂಕಷ್ಟ ತಂದಿಟ್ಟಿದೆ. ಯಾಕಂದ್ರೆ ದಾಂಡಿಯಾ ಇವೆಂಟ್ ಗೆ ಬಿಜೆಪಿ ಮುಖಂಡನಿಗೆ ಹಣಕ್ಕೆ ಬೇಡಿಕೆ ವಿಚಾರ ಆರೋಪ ತೀರ್ವ ಸ್ವರೂಪ ಪಡೆದುಕೊಂಡಿದ್ದು, ಲೋಕಾಯುಕ್ತಕ್ಕೆ (Bangalore Lokayukta) ದೂರು (Complaint) ದಾಖಲಾಗಿದೆ. ಮತ್ತೊಂದೆಡೆ ಕಮಿಷನರ್ ಮತ್ತು ಅವರ ಪತ್ನಿ ವಿರುದ್ದ ಕ್ರಮಕ್ಕೆ ಕೈ ನಾಯಕರು ಕೂಡಾ ಆಗ್ರಹಿಸಿದ್ದಾರೆ (Kalaburagi).

ಅದು ಸೆಪ್ಟೆಂಬರ್ 30 ನೇ ತಾರೀಕು. ಕಲಬುರಗಿ ನಗರದ ಖಾಸಗಿ ಕ್ಲಬ್ ನಲ್ಲಿ ಅದ್ದೂರಿಯಾಗಿ ದಾಂಡಿಯಾ ಇವೆಂಟ್ ನ್ನು ಆಯೋಜಿಸಲಾಗಿತ್ತು. ಇವೆಂಟ್ ಗೆ ಬಂದವರು, ಕಾರ್ಯಕ್ರಮದ ಆಯೋಜನೆ ನೋಡಿ, ವಾರೇ ವ್ಹಾ ಅಂತ ಹುಬ್ಬೇರಿಸಿದ್ದರು. ಕುಣಿದು ಸಂಭ್ರಮಿಸಿದ್ದರು. ಮುಂಬೈ ಮೂಲದ ಇವೆಂಟ್ ಕಂಪನಿಯ ಹಾಡುಗಾರರ ಹಾಡಿಗೆ ಹುಚ್ಚೆದ್ದು ಕುಣಿದಿದ್ದರು. ಅಂದು ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ. ವೈ ಎಸ್ ರವಿಕುಮಾರ್ ಕೂಡಾ ದಾಂಡಿಯಾ ಕಾರ್ಯಕ್ರಮದಲ್ಲಿ ಪತ್ನಿ ಜೊತೆ ಭಾಗಿಯಾಗಿ, ತಾವು ಕೂಡಾ ಕುಣಿದು ಸಂಭ್ರಮಿಸಿದ್ದರು.

ಇನ್ನು ಅಂದು ಅಂತಹದ್ದೊಂದು ದಾಂಡಿಯಾ ಇವೆಂಟ್ ಆಯೋಜಿಸಿದ್ದು, ಇದೇ ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ. ವೈ ಎಸ್ ರವಿಕುಮಾರ್ ಅವರ ಪತ್ನಿ ರೂಪಾಲಿ ಮತ್ತು ಅವರ ಸಂಗಡಿಗರು. ಆದ್ರೆ ಅದೇ ಈಗ ಪೊಲೀಸ್ ಕಮಿಷನರ್ ಅವರಿಗೆ ಸಂಕಷ್ಟ ತಂದೊಡ್ಡಿದೆ. ಅಂದು ತಾವು ಹಣ ಖರ್ಚು ಮಾಡಿ, ಇಂತಹದೊಂದು ಕಾರ್ಯಕ್ರಮ ಆಯೋಜಿಸಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲಾ. ಆದ್ರೆ ಅಂದು ಕಾರ್ಯಕ್ರಮದ ಆಯೋಜನೆಗೆ ಅನೇಕರ ಸ್ಪಾನ್ಸರ್ ಪಡೆಯಲಾಗಿತ್ತು.

ಇದನ್ನೂ ಓದಿ: Nitya Bhavishya- ದಿನ ಭವಿಷ್ಯ: ಈ ರಾಶಿಯವರು ಇಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು, ಕುಟುಂಬ ಸದಸ್ಯರ ಸಹಕಾರವಿದೆ

ಹೀಗೆ ಸ್ಪಾನ್ಸರ್ ಪಡೆದಿದ್ದು, ಬಿಜೆಪಿ ಮುಖಂಡ, ಮಣಿಕಂಠ ರಾಠೋಡ್ ಅವರದ್ದು ಕೂಡಾ ಸೇರಿದೆ. ಹೌದು ಮುಂಬೈ ಮೂಲದ ಇವೆಂಟ್ ಕಂಪನಿಗೆ ಮೂರು ಲಕ್ಷ ಹಣವನ್ನು ಮಣಿಕಂಠ ರಾಠೋಡ್ ರಿಂದ ಕಮಿಷನರ್ ಪತ್ನಿ ರೂಪಾಲಿ ಕೊಡಿಸಿದ್ದರಂತೆ. ಜೊತೆಗೆ ಮತ್ತೆ ಮೂರು ಲಕ್ಷ ಹಣಕ್ಕೆ ಮಣಿಕಂಠ ರಾಠೋಡ್ ಗೆ ಕೇಳಿದ್ದರಂತೆ. ಆದ್ರೆ ಮಣಿಕಂಠ ರಾಠೋಡ್, ಕಮಿಷನರ್ ಪತ್ನಿ ಪೋನ್ ಮಾಡಿ ಹಣ ಕೇಳಿದ್ರು ಕೂಡಾ ಕೊಟ್ಟಿರಲಿಲ್ಲವಂತೆ. ಇದೇ ಕಾರಣಕ್ಕೆ ರೂಪಾಲಿ, ತಮ್ಮ ಪತಿ ಡಾ. ವೈ ಎಸ್ ರವಿಕುಮಾರ್ ಮೂಲಕ ಸೇಡು ತೀರಿಸಿಕೊಳ್ಳುವ ಕೆಲಸ ಮಾಡಿದ್ದರಂತೆ. ಪತ್ನಿಯ ಮಾತು ಕೇಳಿ ಡಾ. ವೈ ಎಸ್ ರವಿಕುಮಾರ್, ಮಣಿಕಂಠ ರಾಠೋಡ್ ರನ್ನು ಗಡಿಪಾರು ಆದೇಶ ಮಾಡಿದ್ದರಂತೆ.

ಯಾವಾಗ ಪೊಲೀಸ್ ಕಮಿಷನರ್ ಡಾ. ವೈ ಎಸ್ ರವಿಕುಮಾರ್ ತನ್ನನ್ನೇ ಗಡಿಪಾರು ಮಾಡಿ ಆದೇಶ ಮಾಡಿದ್ದರೋ, ಆಗಿನಿಂದ ಮಣಿಕಂಠ ರಾಠೋಡ್ ಕಮಿಷನರ್ ಮೇಲೆ ಸಿಟ್ಟಾಗಿದ್ದ. ಹೀಗಾಗಿ ಕಳೆದ ವಾರ ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಮಣಿಕಂಠ ರಾಠೋಡ್, ಕಮಿಷನರ್ ಪತ್ನಿ ಹಣ ಕೇಳಿದ್ದರ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದಲ್ಲದೆ, ಹಣ ನೀಡದೇ ಇದ್ದಿದ್ದಕ್ಕೆ ತನ್ನನ್ನು ಗಡಿಪಾರು ಮಾಡಲಾಗಿದೆ ಅಂತ ಆರೋಪಿಸಿದ್ದ. ಇನ್ನೂ ಒಂದು ಹೆಜ್ಜೆ ಮುಂದಡಿಯಿಟ್ಟ ಮಣಿಕಂಠ ರಾಠೋಡ್, ಕಮಿಷನರ್ ರವಿಕುಮಾರ್ ವಿರುದ್ದ ಇದೀಗ ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರನ್ನು ಕೂಡಾ ನೀಡಿದ್ದಾರೆ.

ಹೌದು ಡಿಸೆಂಬರ್ 5 ರಂದು ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಮಣಿಕಂಠ ರಾಠೋಡ್ ದೂರು ನೀಡಿದ್ದು, ಕಮಿಷನರ್ ಮತ್ತ ಅವರ ಪತ್ನಿ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಆಗ್ರಿಹಿಸಿದ್ದಾರೆ. ಇನ್ನು ಇತ್ತ ಬಿಜೆಪಿ ಮುಖಂಡನೇ ಕಮಿಷನರ್ ಮತ್ತು ಅವರ ಪತ್ನಿ ರೂಪಾಲಿ ವಿರುದ್ದ ಗಂಭೀರ ಆರೋಪ ಮಾಡಿದ್ರೆ, ಇತ್ತ ಕೈ ನಾಯಕರು ಕೂಡಾ ಕಮಿಷನರ್ ವಿರುದ್ದ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: ಕೋಟಿಲಿಂಗೇಶ್ವರ ಅಭಯ: ನವದಂಪತಿಗೆ ಸುಖದಾಂಪತ್ಯದ ಕನಸು ಕಟ್ಟಿಕೊಡುವ ಕುಂದಾಪುರ ಕೊಡಿ ಹಬ್ಬ ಸಪ್ತಾಹ ಆರಂಭ

ಪೊಲೀಸ್ ಕಮಿಷನರ್ ಮತ್ತು ಅವರ ಪತ್ನಿ, ಗಡಿಪಾರು ಆದಂತವರಿಂದ ಹಣ ಕೇಳಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಅನೇಕ ಪ್ರಕರಣದಲ್ಲಿ ಆರೋಪಿಯಾಗಿದ್ದರ ಬಗ್ಗೆ ಪೊಲೀಸ್ ಕಮಿಷನರ್ ಅವರಿಗೆ ಗೊತ್ತಿದ್ದರು ಕೂಡಾ, ಆತನಿಂದಲೇ ಸ್ಪಾನ್ಸರ್ ಪಡೆಯುವದು, ಹಣ ಪಡೆಯುವದು ಯಾವ ನೈತಿಕತೆ ಅಂತ ಪ್ರಶ್ನಿಸಿರುವುದಾಗಿ ಮಾಜಿ ವಿಧಾನಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಮಾಹಿತಿ ನೀಡಿದ್ದಾರೆ.

ಕಲಬುರಗಿ ನಗರ ಪೊಲೀಸ್ ಕಮಿಷನರ್ ವಿರುದ್ದ ಇತ್ತ ಲೋಯಾಯುಕ್ತಕ್ಕೆ ದೂರು ದಾಖಲಾದ್ರೆ, ಅತ್ತ ಕೈ ನಾಯಕರು ಕೂಡಾ ತನಿಖೆಗೆ ಆಗ್ರಹಿಸಿದ್ದಾರೆ. ಪತ್ನಿ ಮಾಡಿದ ಯಡವಟ್ಟಿಗೆ ಇದೀಗ ಕಮಿಷನರ್ ಟ್ರಬಲರ್ ನಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಕಮಿಷನರ್ ವಿರುದ್ದ ಕ್ರಮಕ್ಕೆ ಆಗ್ರಹ ಜೋರಾಗಿ ಕೇಳಿಬರ್ತಿದೆ. ಆದ್ರೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಅನ್ನೋದು ಮಾತ್ರ ಇನ್ನು ನಿಗೂಢವಾಗಿದೆ. (ವರದಿ: ಸಂಜಯ್, ಟಿವಿ 9, ಕಲಬುರಗಿ)

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us