ಕಲಬುರಗಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಚಾಲನೆ, ಮೂವರು ಸಸ್ಪೆಂಡ್

ಸಾರಿಗೆ ಬಸ್​ನ ಹೆಡ್​​ಲೈಟ್​​ಗಳು ಕಾರ್ಯನಿರ್ವಹಿಸದೆ, ಮೊಬೈಲ್ ಟಾರ್ಚ್​​ನೊಂದಿಗೆ ಬಸ್​ ಚಲಾಯಿಸಿದ ವಿಡಿಯೋವೊಂದು ವೈರಲ್ ಆಗಿದೆ. ಕಲಬುರಗಿಯಲ್ಲಿ ಕೆಕೆಆರ್‌ಟಿಸಿ ಬಸ್ಸೊಂದರ ಹೆಡ್‌ಲೈಟ್ ಕೆಟ್ಟುಹೋದಾಗ, ನಿರ್ವಾಹಕ ಮೊಬೈಲ್ ಟಾರ್ಚ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಚಲಾಯಿಸಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ. ಈ ಘಟನೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ನಿರ್ಲಕ್ಷ್ಯ ವಹಿಸಿದ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಕಲಬುರಗಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಚಾಲನೆ, ಮೂವರು ಸಸ್ಪೆಂಡ್
Kkrtc Bus
Edited By:

Updated on: Jul 06, 2026 | 5:38 PM

ಮುಖ್ಯಾಂಶಗಳು

  • ಮೊಬೈಲ್ ಟಾರ್ಚ್​ ಬೆಳಕಿನಲ್ಲಿ ಬಸ್ ಚಾಲನೆ ಮಾಡಿದ ಪ್ರಕರಣ
  • ನಿರ್ಲಕ್ಷ್ಯ ವಹಿಸಿದ ಚಾಲಕ, ಇಬ್ಬರು ತಾಂತ್ರಿಕ ಸಿಬ್ಬಂದಿ ಅಮಾನತು
  • ಜು.5ರಂದು ಕಲಬುರಗಿಯಿಂದ ಚಿಂಚೋಳಿಗೆ ಮೊಬೈಲ್​ ಟಾರ್ಚ್​ನಲ್ಲಿ ​ ಬಸ್​ ಚಾಲನೆ

ಕಲಬುರಗಿ, (ಜುಲೈ 06): ಮೊಬೈಲ್ ಟಾರ್ಚ್​ ಬೆಳಕಿನಲ್ಲಿ ಕೆಕೆಆರ್‌ಟಿಸಿ ಬಸ್ (KKRTC Bus) ಚಾಲನೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಹೆಡ್​​ಲೈಟ್ ಇಲ್ಲದೇ ಮೊಬೈಲ್​ ಟಾರ್ಚ್​​​​ನಲ್ಲೇ ಬಸ್ ಚಲಾಯಿಸಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂಬ ಆಕ್ರೋಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ತಾಂತ್ರಿಕ ಸಿಬ್ಬಂದಿ ಶಿವಾನಂದ, ಮೇಲ್ವಿಚಾರಕ ಬಸವರಾಜ ಹಾಗೂ ನಿರ್ಲಕ್ಷ್ಯ ವಹಿಸಿದ ಚಾಲಕ ಆಕಾಶ್​ನನ್ನ ಅಮಾನತು ಮಾಡಿ ಕಲಬುರಗಿ (Kalaburagi) ವಿಭಾಗೀಯ ನಿಯಂತ್ರಣಾಧಿಕಾರಿ ಇಂದು (ಜುಲೈ 06) ಆದೇಶ ಹೊರಡಿಸಿದ್ದಾರೆ.

ಏನಿದು ಘಟನೆ?

ಕಲಬುರಗಿಯಿಂದ ಚಿಂಚೋಳಿ ಮಾರ್ಗವಾಗಿ ಸಂಚರಿಸುತ್ತಿದ್ದ KA-28 F-1985 ನೋಂದಣಿ ಸಂಖ್ಯೆಯ ಕೆಕೆಆರ್‌ಟಿಸಿ (KKRTC) ಬಸ್ಸಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ಸಿನ ಹೆಡ್‌ಲೈಟ್‌ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದವು. ಆದರೆ, ಬಸ್ಸನ್ನು ರಸ್ತೆಯಲ್ಲೇ ನಿಲ್ಲಿಸುವ ಬದಲು ಅಥವಾ ಬದಲಿ ವ್ಯವಸ್ಥೆ ಮಾಡುವ ಬದಲು, ಚಾಲಕ ಮತ್ತು ಕಂಡಕ್ಟರ್ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಕಂಡಕ್ಟರ್ ಬಸ್ಸಿನ ಮುಂದಿನ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಆನ್ ಮಾಡಿ ದಾರಿ ತೋರಿಸುತ್ತಿದ್ದರೆ, ಚಾಲಕ ಬಸ್ ಓಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ನೋಡಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್: ಹೆಡ್‌ಲೈಟ್ ಇಲ್ಲದೆ 90 ಕಿ.ಮೀ ಪ್ರಯಾಣ!

ಸಾರ್ವಜನಿಕರ ಆಕ್ರೋಶ

ಹೆಡ್‌ಲೈಟ್ ಇಲ್ಲದ ಬಸ್ಸನ್ನು ರಸ್ತೆಗೆ ಬಿಟ್ಟಿದ್ದು ಯಾರು? ಫಿಟ್‌ನೆಸ್ ಸರ್ಟಿಫಿಕೇಟ್ ನೀಡಿದವರು ಯಾರು? ಎಂಬ ಪ್ರಶ್ನೆಗಳು ಎದ್ದಿವೆ. ಲೈಟ್ ಕೆಟ್ಟಿದ್ದರಿಂದ ಬಸ್ ರಸ್ತೆ ಪಕ್ಕದಲ್ಲೇ ಸೈಡಿಗೆ ನಿಲ್ಲಿಸಿ ಪ್ರಯಾಣಿಕರಿಗೆ ಬೇರೊಂದು ಬಸ್​​​​ಗೆ ಕಳುಹಿಸಬೇಕಿತ್ತು. ರಾತ್ರಿ ಸಮಯದಲ್ಲಿ ಟಾರ್ಚ್​ ಲೈಟ್​​ನಲ್ಲಿ ಬಸ್ ಓಡಿಸಿಕೊಂಡು ಹೋಗಿವುದು ವಿಪರ್ಯಾಸವೇ ಸರಿ. ಏನಾದರೂ ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ರೆ ಹೊಣೆ ಯಾರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಇನ್ನು ಸಾಮಾನ್ಯ ನಾಗರಿಕರು ತಮ್ಮ ಖಾಸಗಿ ವಾಹನದಲ್ಲಿ ಸಣ್ಣ ತಪ್ಪು ಮಾಡಿದರೂ ದಂಡ ವಿಧಿಸುವ ಸಾರಿಗೆ ಇಲಾಖೆ, ಸರ್ಕಾರಿ ಬಸ್‌ಗಳ ಈ ಭೀಕರ ನಿರ್ಲಕ್ಷ್ಯಕ್ಕೆ ಏನು ಹೇಳುತ್ತದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಮತ್ತು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌, ಘಟನೆಯನ್ನು “ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಡಳಿತದ ದುಸ್ಥಿತಿ” ಎಂದು ವ್ಯಂಗ್ಯವಾಡಿವೆ.KSRTC Bus Runs In Mobile Torch At Kalaburgi: ಚಾಲಕನನ್ನ ಅಮಾನತು ಮಾಡಿದ ಸಾರಿಗೆ ಅಧಿಕಾರಿಗಳು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Mon, 6 July 26

Follow Us