ಅಫಜಲಪುರಕ್ಕೆ ಲಕ್ಷ್ಮೀಪುರ ಎಂದು ಹೆಸರಿಡಲು ಮಾಲೀಕಯ್ಯ ಗುತ್ತೇದಾರ್‌ರಿಂದ ಮನವಿ, ಶುರುವಾಯ್ತು ಪರ-ವಿರೋಧ ಚರ್ಚೆ
ಅಫಜಲಪುರಕ್ಕೆ ಲಕ್ಷ್ಮೀಪುರ ಎಂದು ಹೆಸರಿಡಲು ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಮನವಿ ಮಾಡಿದ್ದಾರೆ.
ಕಲಬುರಗಿ: ಬಿಜೆಪಿ ಸರ್ಕಾರದಲ್ಲಿ ಹೆಸರು ಬದಲಾಯಿಸೋ ಟ್ರೆಂಡ್ ಮುಂದುವರೆದಿದೆ. ಈ ಹಿಂದೆ ಗುಲಬರ್ಗಾವನ್ನು ಕಲಬುರಗಿ ಅಂತ ಮರು ನಾಮಕರಣ ಮಾಡಲಾಗಿತ್ತು. ಇದೀಗ ಅಫಜಲಪುರ ಪಟ್ಟಣದ ಹೆಸರು ಬದಲಾವಣೆಗೆ ಒತ್ತಾಯ ಹೇಳಿ ಬಂದಿದೆ. ಅಫಜಲಪುರಕ್ಕೆ ಲಕ್ಷ್ಮೀಪುರ ಎಂದು ಹೆಸರಿಡಲು ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಮನವಿ ಮಾಡಿದ್ದಾರೆ.
ಅಫಜಲಪುರ ತಾಲೂಕು ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು ಕಾರ್ಯಕಾರಿಣಿಯಲ್ಲಿ ಅಫಜಲಪುರ ಹೆಸರು ಬದಲಿಸಿ ಲಕ್ಷ್ಮೀಪುರ ಅಂತ ಮರು ನಾಮಕರಣಕ್ಕೆ ಆಗ್ರಹಿಸಿ ಮಾಜಿ ಶಾಸಕ ಮಾಲೀಕಯ್ಯ ಆಡಿದ ಮಾತುಗಳು ವೈರಲ್ ಆಗಿದೆ. ಹೆಸರು ಬದಲಾವಣೆ ಬಗ್ಗೆ ಎಲ್ಲೆಡೆ ಪರ ವಿರೋಧ ಚರ್ಚೆ ಶುರುವಾಗಿದೆ.
ಎರಡು ದಿನದ ಹಿಂದೆ ಮಂಡಿಸಿದ ಪ್ರಸ್ತಾಪದ ವಿಡಿಯೋ ವೈರಲ್ ಆಗಿದೆ. ಮುಸ್ಲಿಂಂ ದೊರೆ ಅಫಜಲಖಾನ್ ಹೆಸರಿರುವ ಅಫಜಲಪುರ ಪಟ್ಟಣ ಇದಾಗಿದ್ದು ಲಕ್ಷ್ಮೀಪುರ ಎಂದು ಮರು ನಾಮಕರಣಕ್ಕೆ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ರಾಣಿ ಮುಖರ್ಜಿ-ಟೈಗರ್ ಶ್ರಾಫ್ ಈಗ ನೆರೆಹೊರೆಯವರು; ಇದಕ್ಕೆ ನಟಿ ಖರ್ಚು ಮಾಡಿದ್ದು 7 ಕೋಟಿ