ಕಲಬುರಗಿ: ಕಾಲೇಜಿನಲ್ಲಿ ಹುಡುಗಿಗಾಗಿ ಹೊಡೆದಾಟ, ಒಬ್ಬನಿಗೆ ಚಾಕು ಇರಿತ, ಇಬ್ಬರು ಆರೋಪಿಗಳು ಪರಾರಿ
ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆ ಎಹ್ತೇಶಾಮ್ ಸ್ನೇಹ ಹೊಂದಿದ್ದು, ಆಕೆಯ ಜೊತೆ ಪೋನ್ ನಲ್ಲಿ ಮಾತನಾಡುವುದು, ಮೆಸೇಜ್ ಮಾಡುವುದನ್ನು ಮಾಡ್ತಿದ್ದನಂತೆ. ಇದು ಮುಜಮಿಲ್ ಸಿಟ್ಟಿಗೆ ಕಾರಣವಾಗಿತ್ತಂತೆ. ಈ ಬಗ್ಗೆ ಇಬ್ಬರ ನಡುವೆ ಅನೇಕ ಬಾರಿ ಜಗಳ ಕೂಡಾ ಆಗಿತ್ತಂತೆ.
ಅವರಿಬ್ಬರು ಒಂದೇ ಕಾಲೇಜಿನ ವಿದ್ಯಾರ್ಥಿಗಳು. ಆದ್ರೆ ಅದೇ ಕಾಲೇಜು ವಿದ್ಯಾರ್ಥಿಗಳ ನಡುವೆ ಕಳೆದ ಕೆಲ ದಿನಗಳಿಂದ ದ್ವೇಷ ಹುಟ್ಟುಕೊಂಡಿತ್ತು. ತಾನು ಸಹಪಾಠಿ ವಿದ್ಯಾರ್ಥಿನಿಯ (girl) ಜೊತೆ ಸ್ನೇಹ ಹೊಂದಿರುವುದು ಇನ್ನೋರ್ವ ಯುವಕನ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಮಾತನಾಡೋಣಾ ಬಾ ಅಂತ ಕರೆಸಿದ ಫಾರ್ಮಸಿ ವಿದ್ಯಾರ್ಥಿ, ನರ್ಸಿಂಗ್ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿದ್ದಾನೆ (Stabbing). ಆಸ್ಪತ್ರೆಯಲ್ಲಿ ಓರ್ವ ವಿದ್ಯಾರ್ಥಿ ಸಾವು ಬದುಕಿನ ಹೋರಾಟ ನಡೆಸಿದ್ದರೆ, ಮತ್ತೊಂದಡೆ ಮನೆಯವರಿಗೆ ಆತಂಕ ಆರಂಭವಾಗಿದೆ. ವೈದ್ಯರು ಸತತ ಪ್ರಯತ್ನ ಮಾಡ್ತಿದ್ದಾರೆ. ಇನ್ನೊಂದಡೆ ಪೊಲೀಸರ ವಿಚಾರಣೆ ಕೂಡಾ ಆರಂಭವಾಗಿತ್ತು. ಹೌದು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಓರ್ವ ವಿದ್ಯಾರ್ಥಿ ಇದೀಗ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ. ಅಷ್ಟಕ್ಕೂ ಈತನ ಈ ಸ್ಥಿತಿಗೆ ಕಾರಣ, ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವುದು. ಕಲಬುರಗಿ ನಗರದ (Kalaburgi) ನೂರ್ ಬಾಗ್ ಕ್ರಾಸ್ ನಲ್ಲಿ ಬುಧವಾರ ಸಂಜೆ ನರ್ಸಿಂಗ್ ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದ್ದು, ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಚಾಕುವಿನಿಂದ ದಾಳಿಗೊಳಗಾದ ವಿದ್ಯಾರ್ಥಿ ಹೆಸರು, ಮಹ್ಮದ್ ಎಹ್ತೇಶಾಮ್ ಅಂತ. ಕಲಬುರಗಿ ನಗರದ ಖಮರ್ ಕಾಲೋನಿ ನಿವಾಸಿಯಾಗಿರೋ ಎಹ್ತೇಶಾಮ್, ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ನರ್ಸಿಂಗ್ ಓದುತ್ತಿದ್ದ.
ಬುಧವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುವಾಗ, ಎಹ್ತೇಶಾಮ್ ಗೆ ಕರೆ ಮಾಡಿ, ಕರೆಸಿಕೊಂಡಿದ್ದ ಮುಜಾಮಿಲ್ ಮತ್ತು ಆತನ ಇನ್ನಿಬ್ಬರು ಸ್ನೇಹಿತರು, ಎಹ್ತೇಶಾಮ್ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಮುಜಾಮಿಲ್ ಎಹ್ತೇಶಾಮ್ ನ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದ ನಂತರ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಕೆಲ ಸ್ಥಳೀಯರು ಕೂಡಲೇ ಎಹ್ತೇಶಾಮ್ ನನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕಲಬುರಗಿ ನಗರ ಮಾಹಿತಿ ನೀಡಿದ್ದಾರೆ.
ಇನ್ನು ಮಹ್ಮದ್ ಎಹ್ತೇಶಾಮ್ ಮೇಲೆ ಮುಜಮಿಲ್ ಚಾಕುವಿನಿಂದ ಇರಿಯಲು ಕಾರಣ, ತಮ್ಮದೇ ಕಾಲೇಜು ವಿದ್ಯಾರ್ಥಿನಿ ವಿಚಾರ. ಹೌದು ಎಹ್ತೇಶಾಮ್, ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದರೇ, ಅದೇ ಕಾಲೇಜಿನಲ್ಲಿ ಮುಜಮಿಲ್ ಫಾರ್ಮಸಿ ಓದುತ್ತಿದ್ದನಂತೆ. ಮುಜಮಿಲ್ ನ ಕ್ಲಾಸ್ಮೇಟ್ ವಿದ್ಯಾರ್ಥಿಯೋರ್ವಳ ಜೊತೆ ಎಹ್ತೇಶಾಮ್ ಸ್ನೇಹವನ್ನು ಹೊಂದಿದ್ದನಂತೆ. ಇದೇ ಯುವತಿಯನ್ನು ಮುಜಮಿಲ್ ಪ್ರೀತಿಸುತ್ತಿದ್ದನಂತೆ.
ಇದನ್ನು ಓದಿ:
Bandipur safari: ಬಂಡೀಪುರ ಸಫಾರಿ ಸಹವಾಸವೇ ಬೇಡಾ ಅಂತಿದ್ದಾರೆ ಪ್ರಾಣಿಪ್ರಿಯರು! ಹದಗೆಟ್ಟ ರಸ್ತೆಗಳಿಂದಾಗಿ ನರಕಯಾತನೆ
ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆ ಎಹ್ತೇಶಾಮ್ ಸ್ನೇಹ ಹೊಂದಿದ್ದು, ಆಕೆಯ ಜೊತೆ ಪೋನ್ ನಲ್ಲಿ ಮಾತನಾಡುವುದು, ಮೆಸೇಜ್ ಮಾಡುವುದನ್ನು ಮಾಡ್ತಿದ್ದನಂತೆ. ಇದು ಮುಜಮಿಲ್ ಸಿಟ್ಟಿಗೆ ಕಾರಣವಾಗಿತ್ತಂತೆ. ಈ ಬಗ್ಗೆ ಇಬ್ಬರ ನಡುವೆ ಅನೇಕ ಬಾರಿ ಜಗಳ ಕೂಡಾ ಆಗಿತ್ತಂತೆ. ತನ್ನ ಹುಡುಗಿ ತಂಟೆಗೆ ಬಾರದಂತೆ ಎಹ್ತೇಶಾಮ್ ಗೆ ಅನೇಕ ಬಾರಿ ಮುಜಮಿಲ್ ಹೇಳಿದ್ದನಂತೆ. ಆದರೂ ಕೇಳದೇ ಇದ್ದಾಗ, ನಿನ್ನೆ ಆತನನ್ನು ಕರೆಸಿ, ಆತನ ಮೇಲೆ ಚಾಕುವಿನಿಂದ ಇರಿದು, ಮುಜಮಿಲ್ ಪರಾರಿಯಾಗಿದ್ದಾನೆ ಎನ್ನುತ್ತಾರೆ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕಲಬುರಗಿ ನಗರ.
ಸದ್ಯ ಮುಜಿಮಿಲ್ ಸೇರಿದಂತೆ ಮೂವರ ವಿರುದ್ದ ಕಲಬುರಗಿ ನಗರದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಮುಜಮಿಲ್ ಮತ್ತು ಆತನ ಸ್ನೇಹಿತರು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದ್ರೆ ಕ್ಷುಲ್ಲಕ ವಿಚಾರವನ್ನೇ ಗಂಭೀರವಾಗಿ ತಗೆದುಕೊಂಡ ವಿದ್ಯಾರ್ಥಿ, ತನ್ನದೇ ಕಾಲೇಜು ವಿದ್ಯಾರ್ಥಿಯ ಜೀವ ತಗೆಯಲು ಹೋಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಗಮನವನ್ನು ಅಧ್ಯಯನದತ್ತ ವಹಿಸಬೇಕೆ ವಿನಃ ಬೇರೆ ವಿಷಯಗಳತ್ತ ಗಮನಹರಿಸಿದ್ರೆ ಈ ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾದೀತು.
ವರದಿ: ಸಂಜಯ್, ಟಿವಿ 9, ಕಲಬುರಗಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Fri, 16 December 22