ಅಫಜಲಪುರದಲ್ಲಿ ಐದು ಗಂಡು ಮರಿಗಳಿಗೆ ಜನ್ಮವಿಟ್ಟ ಮೇಕೆ, ಅಪರೂಪದ ಘಟನೆಯಿಂದ ಮನೆಯಲ್ಲಿ ಹೆಚ್ಚಿದ ಸಂಭ್ರಮ

| Updated By: ಆಯೇಷಾ ಬಾನು

Updated on: Dec 08, 2022 | 7:12 AM

ಮೇಕೆ, ನಿನ್ನೆ ಮುಂಜಾನೆ ಐದು ಮರಿಗಳಿಗೆ ಜನ್ಮ ನೀಡಿದೆ. ಇದನ್ನು ನೋಡಿದ ಗ್ರಾಮದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೇಕೆಗಳು ಇಷ್ಟೊಂದು ಮರಿಗಳಿಗೆ ಜನ್ಮ ನೀಡಿವದು ಅಪರೂಪ ಎನ್ನಲಾಗುತ್ತಿದೆ.

ಅಫಜಲಪುರದಲ್ಲಿ ಐದು ಗಂಡು ಮರಿಗಳಿಗೆ ಜನ್ಮವಿಟ್ಟ ಮೇಕೆ, ಅಪರೂಪದ ಘಟನೆಯಿಂದ ಮನೆಯಲ್ಲಿ ಹೆಚ್ಚಿದ ಸಂಭ್ರಮ
ಐದು ಗಂಡು ಮರಿಗಳಿಗೆ ಜನ್ಮವಿಟ್ಟ ಮೇಕೆ
Follow us on

ಕಲಬುರಗಿ: ಸಾಮಾನ್ಯವಾಗಿ ಮೇಕೆಗಳು ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಕಲಬುರಗಿ ಜಿಲ್ಲೆಯಲ್ಲಿ ಮೇಕೆಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ. ಇದರಲ್ಲಿ ಅಚ್ಚರಿಯ ಪಡುವಂತಹ ವಿಚಾರವೇನೆಂದರೆ ಮೇಕೆಯ ಐದು ಮರಿಗಳು ಕೂಡಾ ಗಂಡು ಮೇಕೆ ಮರಿಗಳು ಅನ್ನೋದು.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿನಮಳ್ಳಿ ಗ್ರಾಮದಲ್ಲಿ ಇಂತಹದೊಂದು ಅಚ್ಚರಿಯ ಘಟನೆ ನಡೆದಿದೆ. ಗ್ರಾಮದ ಬಸಮ್ಮ ಅನ್ನೋರಿಗೆ ಸೇರಿದ್ದ ಮೇಕೆ, ನಿನ್ನೆ ಮುಂಜಾನೆ ಐದು ಮರಿಗಳಿಗೆ ಜನ್ಮ ನೀಡಿದೆ. ಇದನ್ನು ನೋಡಿದ ಗ್ರಾಮದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೇಕೆಗಳು ಇಷ್ಟೊಂದು ಮರಿಗಳಿಗೆ ಜನ್ಮ ನೀಡಿವದು ಅಪರೂಪ. ಅದರಲ್ಲೂ ಹೆಣ್ಣು ಮತ್ತು ಗಂಡು ಮರಿಗಳು ಇರುತ್ತವೇ. ಆದರೆ ಐದು ಮರಿಗಳು ಕೂಡಾ ಗಂಡು ಮರಿಗಳಿಗೆ ಜನ್ಮ ನೀಡಿದ್ದು ವಿಶೇಷ ಅಂತಾರೆ ಬಸಮ್ಮಾ.

ಇದನ್ನೂ ಓದಿ: ಮೇಕೆಮರಿಗಳ ಹುಟ್ಟುಹಬ್ಬ; ‘ನಮಗೆ ಮಕ್ಕಳಿಲ್ಲ, ಇವರೇ ನಮಗೆ ಎಲ್ಲ’

ಇನ್ನು ಮೇಕೆಯೊಂದು ಐದು ಮರಿಗಳಿಗೆ ಜನ್ಮ ನೀಡಿದ ವಿಷಯ ತಿಳಿದು ಗ್ರಾಮದ ಜನರು ಮಾತ್ರವಲ್ಲಾ, ಸುತ್ತಮುತ್ತಲಿನ ಅನೇಕ ಗ್ರಾಮದ ಜನರು ಕೂಡಾ ಬಸಮ್ಮನವರ ಮನೆಗೆ ಬಂದು ಮೇಕೆ ಮತ್ತು ಐದು ಗಂಡು ಮರಿಗಳನ್ನು ನೋಡಿಕೊಂಡು ಹೋಗುತ್ತಿದ್ದಾರೆ.

ಇನ್ನು ಐದು ಮರಿಗಳು ಕೂಡಾ ಆರೋಗ್ಯದಿಂದ ಇವೆ. ಅನೇಕ ಸಂದರ್ಭಗಳಲ್ಲಿ, ಹೆಚ್ಚು ಮರಿಗಳು ಜನಿಸಿದಾಗ,‌ ಜನಿಸಿದ ಕೆಲವೇ ಗಂಟೆಗಳಲ್ಲಿ ಕೆಲ ಮರಿಗಳು ಸಾಯುತ್ತವೆ. ಆದರೆ ಚಿನಮಳ್ಳಿ ಗ್ರಾಮದ ಬಸಮ್ಮನವರ ಮನೆಯಲ್ಲಿರೋ ಮೇಕೆ ಮತ್ತು ಅದರ ಐದು ಮರಿಗಳು ಕೂಡಾ ಆರೋಗ್ಯದಿಂದ ಇವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:12 am, Thu, 8 December 22