ಕಲಬುರಗಿ: ಮಗುವಿಗೆ ಹಾಲುಣಿಸುತ್ತಿದ್ದಾಗ ಪತ್ನಿಯನ್ನು ಕೊಂದ ಪತಿ!

| Updated By: sandhya thejappa

Updated on: Oct 23, 2021 | 2:08 PM

ಆರೋಪಿ ಕುಡಿಯುವುದಕ್ಕಾಗಿ ತವರು ಮನೆಯಿಂದ ದುಡ್ಡು ತರುವಂತೆ ಪೀಡಿಸುತ್ತಿದ್ದ. ತವರು ಮನೆಯಿಂದ ದುಡ್ಡು ತರದ ಹಿನ್ನೆಲೆ ಮಗುವಿಗೆ ಹಾಲು ಕುಡಿಸುವಾಗಲೇ ಗಂಡ ಕೊಲೆ ಮಾಡಿದ್ದಾನೆ.

ಕಲಬುರಗಿ: ಮಗುವಿಗೆ ಹಾಲುಣಿಸುತ್ತಿದ್ದಾಗ ಪತ್ನಿಯನ್ನು ಕೊಂದ ಪತಿ!
ಕೊಲೆಯಾದ ಮಹಿಳೆ
Follow us on

ಕಲಬುರಗಿ: ಮಗುವಿಗೆ ಹಾಲು ಕುಡಿಸುತ್ತಿದ್ದಾಗ ಪತ್ನಿಯನ್ನು ಪತಿ ಕೊಲೆಗೈದಿದ್ದಾನೆ. ಈ ಘಟನೆ ಕಲಬುರಗಿ ನಗರದ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ. 35 ವರ್ಷದ ನಸೀಮಾ ಬೇಗಂ ಕೊಲೆಯಾದ ಮಹಿಳೆ. ಪತಿ ಇಬ್ರಾಹಿಂ ನಸೀಮಾಳ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಪತ್ನಿಯನ್ನು ಹತ್ಯೆಗೈದ ಇಬ್ರಾಹಿಂನ ಅರೆಸ್ಟ್ ಮಾಡಲಾಗಿದೆ. ಸದ್ಯ ಈ ಪ್ರಕರಣ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಆರೋಪಿ ಪತಿ ಕುಡಿಯುವುದಕ್ಕಾಗಿ ತವರು ಮನೆಯಿಂದ ದುಡ್ಡು ತರುವಂತೆ ಪೀಡಿಸುತ್ತಿದ್ದ. ತವರು ಮನೆಯಿಂದ ದುಡ್ಡು ತರದ ಹಿನ್ನೆಲೆ ಮಗುವಿಗೆ ಹಾಲು ಕುಡಿಸುವಾಗಲೇ ಗಂಡ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿ ಪೊದೆಯೊಳಗೆ ಹೂತು ಹಾಕಿದ ದುಷ್ಕರ್ಮಿಗಳು
ಗದಗ: ರೋಣ ತಾಲೂಕಿನ ಕೊತಬಾಳ ಗ್ರಾಮದ ಗದ್ದಿಹಳ್ಳದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. ಸಿದ್ದಪ್ಪ ಪಾಗದ ಎಂಬುವವರನ್ನು ಹತ್ಯೆಗೈದು ದುಷ್ಕರ್ಮಿಗಳು ಹೂತುಹಾಕಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ವ್ಯಕ್ತಿ ಚಿಕನ್ ಪಾರ್ಟಿಯಲ್ಲಿ ಭಾಗಿಯಾಗಿದ್ದ. ಕಂಠಪೂರ್ತಿ ಕುಡಿದು ಚಿಕನ್ ಪಾರ್ಟಿಯಲ್ಲಿ ಗಲಾಟೆ ಮಾಡಿದ್ದ. ದುಷ್ಕರ್ಮಿಗಳು ಸಿದ್ದಪ್ಪನ ತಲೆಗೆ ಹೊಡೆದು ಬಳಿಕ, ಹಳ್ಳದಲ್ಲಿ ಹೂತು ಹಾಕಿದ್ದಾರೆ.

ಸ್ನೇಹಿತರಿಂದಲೇ ವ್ಯಕ್ತಿಯ ಬರ್ಬರ ಹತ್ಯೆ
ಬೆಂಗಳೂರಿನ ಆವಲಹಳ್ಳಿ ಮುಖ್ಯ ರಸ್ತೆಯಲ್ಲಿ ಸ್ನೇಹಿತರಿಂದಲೇ ವ್ಯಕ್ತಿಯೊಬ್ಬರ ಬರ್ಬರ ಕೊಲೆಯಾಗಿದೆ.
ಚಂದ್ರಶೇಖರ್ನನ್ನು ಆತನ ಸ್ನೇಹಿತರು ಕೊಲೆ ಮಾಡಿದ್ದಾರೆ. ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾರೆ. ಕೊಲೆ ಆರೋಪಿಗಳಿಗಾಗಿ ಬ್ಯಾಟರಾಯನಪುರ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಕೊಲೆಯಾದ ಚಂದ್ರಶೇಖರ್ ಹೂವಿನ ವ್ಯಾಪಾರ ಮಾಡಿಕೊಂಡು ಆಟೋ ಓಡಿಸುತ್ತಿದ್ದ. ಹಣಕಾಸು ವಿಚಾರಕ್ಕೆ ಸ್ನೇಹಿತರ ಜೊತೆ ಗಲಾಟೆಯಾಗಿತ್ತು.

ಯುವಕನ ಶವ ಪತ್ತೆ
ಬೆಳಗಾವಿ: ಬೆನಕನಹಳ್ಳಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಸಂಜಯ್(29) ಶವ ಪತ್ತೆಯಾಗಿದೆ. ನಿನ್ನೆ ರಾತ್ರಿ ಪ್ರೀತಿಸುತ್ತಿದ್ದ ಯುವತಿ ಜತೆ ಗಲಾಟೆಯಾಗಿತ್ತು. ಯುವತಿ ಕಡೆಯವರೇ ಹತ್ಯೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಮೃತನ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ

ಬೀದಿಬೀದಿ ಅಲೆಯುತ್ತಿದ್ದ ಹೆಣ್ಣು ದೆವ್ವಕ್ಕೆ ಗುಂಡು ಹೊಡೆದು ಕೊಂದ ವ್ಯಕ್ತಿ !; ತಲೆ ಕೆಡಿಸಿಕೊಂಡ ಪೊಲೀಸರು

ವಿಪಕ್ಷ ನಾಯಕರು ಮಾತಿನಲ್ಲೇ ಮಂಟಪ ಕಟ್ಟಿಸುತ್ತಿದ್ದಾರೆ; ಹಾನಗಲ್​ನಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ