ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ
ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 750 ಹುದ್ದೆಗಳಿಗೆ ಕೆಇಎ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ನಕಲು ಮಾಡಿ ಅಕ್ರಮ ಎಸಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಂಬಂಧ ಕಲಬುರಗಿ ಜಿಲ್ಲೆಯ ಅಫಜಲಪುರ ಠಾಣೆಯಲ್ಲಿ ಆರ್ಡಿ ಪಾಟೀಲ್ ಸೇರಿ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, 7 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬನ ಬಂಧನವಾಗಿದೆ.
ಕಲಬುರಗಿ, ನ.7: ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 750 ಹುದ್ದೆಗಳಿಗೆ ಕೆಇಎ (KEA) ನಡೆಸಿದ ಪರೀಕ್ಷೆಯಲ್ಲಿ ಅಭ್ಯರ್ಥಿಗೆ ಬ್ಲುಟೂತ್ ನೆರವು ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಅಫಜಲಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಬ್ಲೂಟೂತ್ ನೆರವು ನೀಡಿ ಎಸ್ಕೇಪ್ ಆಗಿದ್ದ ಆಸೀಫ್ ಬಂಧಿತ ಆರೋಪಿ. ಅಕ್ರಮ ಪ್ರಕರಣ ಸಂಬಂಧ ಅಫಜಲಪುರ ಠಾಣೆಯಲ್ಲಿ ಪ್ರಮುಖ ಆರೋಪಿ ಆರ್ಡಿ ಪಾಟೀಲ್ ಸೇರಿದಂತೆ 9 ಮಂದಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಈ ವರೆಗೆ ಎಂಟು ಮಂದಿಯನ್ನು ಬಂಧಿಸಿದ ಪೊಲೀಸರು, ಕಿಂಗ್ ಪಿನ್ ಪಾಟೀಲ್ ಬಂಧನಕ್ಕೆ ತೀವ್ರಶೋಧ ನಡೆಸುತ್ತಿದ್ದಾರೆ.
ಪರೀಕ್ಷಾರ್ಥಿಗಳಿಗೆ ಬ್ಲೂಟುತ್ ಡಿವೈಸ್ ನೀಡಿದ್ದ ಆರ್ಡಿ ಪಾಟೀಲ್, ಲಕ್ಷಾಂತರ ರೂಪಾಯಿ ಪಡೆದಿದ್ದನು. ಸದ್ಯ ಕಿಂಗ್ ಫಿನ್ ಪತ್ತೆಗಾಗಿ ನೆರೆಯ ಮಹಾರಾಷ್ಟ್ರದಲ್ಲಿ ಕಲಬುರಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರ್ಡಿ ಬಲೆಗೆ ಬಿದ್ದರೆ ಪ್ರಕರಣದ ಅಸಲಿ ಸತ್ಯ ಹೊರಬರಲಿದೆ.
ಇದನ್ನೂ ಓದಿ: ಕೆಇಎ ಪರೀಕ್ಷಾ ಅಕ್ರಮ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ, ಸರ್ಕಾರ ಎಂಬ ಹೆಸರಿನ ಮೇಲೆ ಅಭ್ಯರ್ಥಿಗಳಿಗೆ ಫೋನ್ ಕರೆ
ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತೋ ಇಲ್ಲವೋ ಎನ್ನೋದು ಬಹಿರಂಗವಾಗುತ್ತದೆ. ಅಲ್ಲದೇ ಎಷ್ಟು ಜನರಿಗೆ ಬ್ಲುಟೂತ್ ಒದಗಿಸಿದ್ದ ಎಂಬ ಸತ್ಯ ಕೂಡ ಬಹಿರಂಗ ಆಗಲಿದೆ. ಹೀಗಾಗಿ ಆರ್ ಡಿ ಪಾಟೀಲ್ ಬಂಧನಕ್ಕೆ ಪೊಲೀಸರ ಮೇಲೆ ಒತ್ತಡ ಆರಂಭವಾಗಿದೆ.
ಆರ್ಡಿ ಪಾಟೀಲ್ಗೆ ಕಂಪೌಂಡ್ ಹಾರುವ ಚಟ
ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಪೊಲೀಸರು ದಾಳಿ ನಡೆಸಿದಾಗ ಕಂಪೌಂಡ್ ಹಾರಿ ಎಸ್ಕೇಪ್ ಆಗುವ ಚಟ ಹೊಂದಿದ್ದಾನೆ. ಈ ಹಿಂದೆ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದಾಗಲು ಕೂಡಾ ಇದೇ ರೀತಿ ಅಧಿಕಾರಿಗಳನ್ನು ತಳ್ಳಿ ಕಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದ.
ಪೊಲೀಸರ ಜೊತೆ ಚೆಲ್ಲಾಟವಾಡುವ ಚಾಳಿ ಬೆಳಸಿಕೊಂಡಿಡುವ ಕಿಂಗ್ ಪಿನ್ ಆರ್ಡಿ ಪಾಟೀಲ್, ಪೊಲೀಸರ ಕೈಗೆ ಸಿಕ್ಕರೆ ಕಂಬಿ ಹಿಂದೆ ಹೋಗಬೇಕಾಗುತ್ತದೆ. ಸಾಕ್ಷಿಗಳು ನಾಶವಾಗಲಿ ಅನ್ನೋ ಉದ್ದೇಶದಿಂದ ಪಾಟೀಲ್ ಈ ರೀತಿ ಕಳ್ಳಾಟವಾಡುತ್ತಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ