AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ನಸುಕಿನಲ್ಲೇ ಯಮನ ದರ್ಶನ: ನಿಂತಿದ್ದ ಲಾರಿಗೆ ಗುದ್ದಿದ ಮಿನಿ ಬಸ್, ಐವರ ಸಾವು

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಮಿನಿ ಬಸ್​ವೊಂದು ಡಿಕ್ಕಿ ಹೊಡೆದು ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನ್ನೊಂದು ಜನರು ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬಾಗಲಕೋಟೆ ಜಿಲ್ಲೆಯವರು ಎಂದು ತಿಳಿದುಬಂದಿದೆ.

ಕಲಬುರಗಿ: ನಸುಕಿನಲ್ಲೇ ಯಮನ ದರ್ಶನ: ನಿಂತಿದ್ದ ಲಾರಿಗೆ ಗುದ್ದಿದ ಮಿನಿ ಬಸ್, ಐವರ ಸಾವು
ಭೀಕರ ಅಫಘಾತ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Apr 05, 2025 | 10:22 AM

Share

ಕಲಬುರಗಿ, ಏಪ್ರಿಲ್​ 05: ನಿಂತಿದ್ದ ಲಾರಿಗೆ ಮಿನಿ ಬಸ್​ ಡಿಕ್ಕಿ (accident) ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಭೀಕರ ಅಫಘಾತ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ. ಇಂದು ನಸುಕಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ವಾಜೀದ್, ಮೆಹಬೂಬಿ, ಪ್ರಿಯಾಂಕಾ, ಮೆಹಬೂಬ್ ಸೇರಿ ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರು ಬಾಗಲಕೋಟೆಯ ನವನಗರ ನಿವಾಸಿಗಳು. ಸ್ಥಳಕ್ಕೆ ನೆಲೋಗಿ ಠಾಣೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.

ಕಲಬುರಗಿಯ ಖಾಜಾ ಬಂದೇನವಾಜ್​ ದರ್ಗಾಕ್ಕೆ ತೆರಳುವಾಗ ದುರಂತ ಸಂಭವಿಸಿದ್ದು, ಮಿನಿ ಬಸ್​​ನಲ್ಲಿದ್ದ  ಒಟ್ಟು 31 ಜನರ ಪೈಕಿ ಐವರು ಸಾವನ್ನಪ್ಪಿದ್ದಾರೆ. 11 ಜನರಿಗೆ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಕಲಬುರಗಿಯ ಜಿಮ್ಸ್​​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದು ಬಹಳ ದೊಡ್ಡ ಅನಾಹುತ ಎಂದ ಶಾಸಕ ಡಾ.ಅಜಯ್ ಸಿಂಗ್

ಜೇವರ್ಗಿಯಲ್ಲಿ ಶಾಸಕ ಡಾ.ಅಜಯ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಿಂತಿದ್ದ ಲಾರಿಗೆ ಗುದ್ದಿ ಐವರು ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಬಹಳ ಗಂಭೀರವಾಗಿದೆ. ಅವರನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ಸಳಾಂತರಿಸಲಾಗಿದೆ. ಬಹಳ ದೊಡ್ಡ ಅನಾಹುತ ನಡೆದಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಸರ್ಕಾರದ ಜೊತೆ ತಕ್ಷಣವೇ ಮಾತನಾಡಿ ಗಾಯಳುಗಳ ಚಿಕಿತ್ಸಾ ವೆಚ್ಚ ಭರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಗಾಯಾಳು ಹೇಳಿದ್ದೇನು?

ಓರ್ವ ಗಾಯಾಳು ಮಾತನಾಡಿದ್ದು, ರಾತ್ರಿ 11 ಗಂಟೆಗೆ ನಾವು ಬಾಗಲಕೋಟೆಯಿಂದ ಹೊರಟ್ಟಿದ್ದೆವು. ಎಲ್ಲರೂ ಒಂದೇ ಫ್ಯಾಮಿಲಿಯವರಾಗಿದ್ದು, ಅದರಲ್ಲಿ ಮೂವರು ನಮ್ಮ ಸ್ನೇಹಿತರಿದ್ದರು. ಒಟ್ಟು 31 ಜನ ದರ್ಗಾ ದರ್ಶನಕ್ಕೆ ಬಂದಿದ್ದೆವು‌. ನಮ್ಮ ಮಿನಿ ಬಸ್ ಟೈರ್ ಪಂಚರ್ ಆಗಿದೆ. ಡ್ರೈವರ್​​ಗೆ ಕಂಟ್ರೋಲ್​ಗೆ ಬಾರದ ಹಿನ್ನಲೆ. ನಿಂತಿದ್ದ ಲಾರಿಗೆ‌ ಡಿಕ್ಕಿ ಹೊಡೆದಿದೆ. ನಸುಕಿನ ಜಾವ ಈ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ: ಏಳು SSLC ವಿದ್ಯಾರ್ಥಿಗಳಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿ ಏಳು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಘಟನೆ ನಿನ್ನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಳಿ ನಡೆದಿತ್ತು. SSLC ಪರೀಕ್ಷೆ ಮುಗಿಸಿ ವಾಪಸ್ ತಮ್ಮ ಗ್ರಾಮಕ್ಕೆ ತೆರಳುವಾಗ ಈ ಘಟನೆ ನಡೆದಿತ್ತು. ಲಕ್ಕುಂಡಿ ಗ್ರಾಮದಿಂದ ಕಣಗಿನಾಳ ಗ್ರಾಮಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಹೋಗುತ್ತಿದ್ದರು. ಆದರೆ ಟಂಟಂ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಏಳು ವಿಧ್ಯಾರ್ಥಿಗಳಿಗೆ ಗಾಯಗಳಾಗಿವೆ.

ಇದನ್ನೂ ಓದಿ: ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇನಲ್ಲಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

ತಕ್ಷಣ ಗಾಯಾಳುಗಳನ್ನು ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಗದಗ ಜಿಮ್ಸ್ ಆಸ್ಪತ್ರೆಗೆ ವಿದ್ಯಾರ್ಥಿಗಳ ರವಾನೆ ಮಾಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:37 am, Sat, 5 April 25

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್