“ಶಾಸಕ ಪ್ರಿಯಾಂಕ್​ ಖರ್ಗೆ ಕಾಣೆಯಾಗಿದ್ದಾರೆ” : ಸ್ವ ಕ್ಷೇತ್ರ ಚಿತ್ರಾಪೂರದಲ್ಲಿ ಪೋಸ್ಟರ್​ ಅಭಿಯಾನ

| Updated By: ವಿವೇಕ ಬಿರಾದಾರ

Updated on: Nov 08, 2022 | 4:06 PM

ಕಲಬುರಗಿ ಬಿಜೆಪಿ ಕಾರ್ಯಕರ್ತರು ಶಾಸಕ ಪ್ರಿಯಾಂಕ ಖರ್ಗೆ ವಿರುದ್ಧ ಪೋಸ್ಟರ್​ ಅಭಿಯಾನ ಪ್ರಾರಂಭಿಸಿದ್ದಾರೆ

ಶಾಸಕ ಪ್ರಿಯಾಂಕ್​ ಖರ್ಗೆ ಕಾಣೆಯಾಗಿದ್ದಾರೆ : ಸ್ವ ಕ್ಷೇತ್ರ ಚಿತ್ರಾಪೂರದಲ್ಲಿ ಪೋಸ್ಟರ್​ ಅಭಿಯಾನ
ಶಾಸಕ ಪ್ರಿಯಾಂಕ್​ ಖರ್ಗೆ ಕಾಣೆಯಾಗಿದ್ದಾರೆ ಪೋಸ್ಟರ್​​
Follow us on

ಕಲಬುರಗಿ: ಎರಡು ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದಲ್ಲಿ ಪೋಸ್ಟರ್​ ವಾರ್​ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್​​ “ಪೇ ಸಿಎಂ” “ಸೇ ಸಿಎಂ” ಎಂದು ಅಭಿಯಾನ ಪ್ರಾರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಡಿಕೆ ಶಿವಕುಮಾರ್ (DK Shivakumar) ‌ಹಾಗೂ ಸಿದ್ದರಾಮಯ್ಯ (Siddarmaiah) ವಿರುದ್ದ ರಾಜ್ಯವನ್ನ ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟ ಜೋಡಿ ಎಂದು ಆರೋಪಿಸಿ ಕೌಂಟರ್ ನೀಡಿರುವ ಪೋಸ್ಟರ್ ಅಭಿಯಾನ ಪ್ರಾರಂಭಿಸಿತ್ತು. ಈಗ ಕಲಬುರಗಿ ಬಿಜೆಪಿ (BJP) ಕಾರ್ಯಕರ್ತರು ಮತ್ತೊಂದು ಅಭಿಯಾನ ಪ್ರಾರಂಭಿಸಿದ್ದಾರೆ. ಅದು ಶಾಸಕ ಪ್ರಿಯಾಂಕ್​ ಖರ್ಗೆ (Priyank Kharge) ಕಾಣೆಯಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಭಾವಚಿತ್ರ ಇರುವ ಪೋಸ್ಟರ್​ನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಹಲವಡೆ ಅಂಟಿಸುತ್ತಿದ್ದಾರೆ.

ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲೆ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಈ ವ್ಯಕ್ತಿಯನ್ನು ಯಾರಾದರೂ ಚಿತ್ತಾಪುರ ದಲ್ಲಿ ನೋಡಿದ್ದೀರಾ? ಈ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದರೇ ಚಿತ್ತಾಪುರ ಕ್ಷೇತ್ರಕ್ಕೆ ಬೇಟಿ ನೀಡುವಂತೆ ತಿಳಿಸಿ ಎಂದು ಬಿತ್ತಿಚಿತ್ರದಲ್ಲಿ ಬರೆಯಲಗಿದೆ.

.