ದೇವಿಯ ಬೆನ್ನಿಗೆ ನಮಸ್ಕರಿಸಿ, ದೇವಸ್ಥಾನದ ಎದುರಿಗೆ ಚಪ್ಪಲಿ ಕಟ್ಟುವ ವಿಶಿಷ್ಟ ಆಚರಣೆ ಎಲ್ಲಿದೆ ಗೊತ್ತಾ? ಇದನ್ನು ಓದಿ

ಇಷ್ಟಾರ್ಥಗಳನ್ನು ಸಿದ್ದಿಸುವ ದೇವಿಗೆ ಹರಕೆ ರೂಪದಲ್ಲಿ, ದೇವಸ್ಥಾನದ ಎದುರಿಗೆ ಚಪ್ಪಲಿ ಕಟ್ಟುವ ವಿಶಿಷ್ಟ ಆಚರಣೆ.

ದೇವಿಯ ಬೆನ್ನಿಗೆ ನಮಸ್ಕರಿಸಿ, ದೇವಸ್ಥಾನದ ಎದುರಿಗೆ ಚಪ್ಪಲಿ ಕಟ್ಟುವ ವಿಶಿಷ್ಟ ಆಚರಣೆ ಎಲ್ಲಿದೆ ಗೊತ್ತಾ? ಇದನ್ನು ಓದಿ
ಕಲಬುರಗಿ ಲಕ್ಕಮ್ಮದೇವಿ ಜಾತ್ರೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 08, 2022 | 11:04 PM

ದೇವರಿಗೆ ಜನರು ತಾವು ಅಂದುಕೊಂಡಿದ್ದು ಆದ್ರೆ ಹತ್ತಾರು ರೀತಿಯಲ್ಲಿ ಹರಕೆಗಳನ್ನು ತೀರಿಸೋದು ಸಂಪ್ರದಾಯ. ಅನೇಕರು ಕೇಶ ಮುಂಡನ ಮಾಡಿಸಿಕೊಂಡರೇ, ಇನ್ನು ಕೆಲವರು ಟೆಂಗಿನ ಕಾಯಿಗಳನ್ನು ಒಡೆಯುತ್ತಾರೆ. ದೀಡ ನಮಸ್ಕಾರ ಹಾಕುತ್ತಾರೆ. ಇಷ್ಟೇ ಅಲ್ಲದೇ ಚಿನ್ನಾಭರಣ, ಹಣ, ದಾಸೋಹ ಸೇರಿದಂತೆ ಜನರು ವಿಭಿನ್ನ ರೀತಿಯ ಹರಕೆಗಳನ್ನು ತೀರಿಸೋದನ್ನು ನೋಡಿದ್ದೀರಿ ಮತ್ತು ಕೇಳಿದ್ದೀರಿ. ಆದರೇ ಪಾದರಕ್ಷೆಗಳನ್ನು ಕಟ್ಟಿ ಹರಕೇ ತಿರಿಸೋ ವಿಶಿಷ್ಟ ಸಂಪ್ರದಾಯವೊಂದು ಕಲಬುರಗಿ ಜಿಲ್ಲೆಯಲ್ಲಿದೆ.

ಎಲ್ಲಡೆ ಜಾತ್ರೆಯ ಸಂಭ್ರಮ. ಇನ್ನೊಂದಡೆ ದೇವಿಯ ದರ್ಶನ ಪಡೆಯುವಲ್ಲಿ ನಿರತರಾಗಿರುವ ಅನೇಕ ಭಕ್ತರು. ಇದರ ಜೊತೆಗೆ ದೇವಿಯ ದೇವಸ್ಥಾನದ ಮುಂದೆ ಕಟ್ಟಲಾಗಿರುವ ತರೇಹವಾರಿ ಪಾದರಕ್ಷೆಗಳು. ಈ ರೀತಿಯಾಗಿ ದೇವಿಯ ದೇವಸ್ಥಾನದ ಮುಂದೆ ಹೊಸ ಪಾದರಕ್ಷೆಗಳನ್ನು ಕಟ್ಟುವ ಸಂಪ್ರದಾಯ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ ಬಿ ಗ್ರಾಮದಲ್ಲಿ ಆಚರಣೆಯಲ್ಲಿದೆ. ದೀಪಾವಳಿ ಹಬ್ಬವಾದ ನಂತರ ಬರುವ ಕಡೆ ಪಂಚಮಿಯಂದು ಮತ್ತು ಹುಣ್ಣಿಮೆಯ ದಿನ, ಗೋಳಾ ಬಿ ಗ್ರಾಮದಲ್ಲಿರುವ ಲಕ್ಕಮ್ಮದೇವಿಯ ಜಾತ್ರೆ ನಡೆಯುತ್ತೆ. ಈ ಜಾತ್ರೆಯ ವಿಶೇಷವೆಂದರೇ ದೇವಸ್ಥಾನದ ಮುಂದೆ ಪಾದರಕ್ಷೆಗಳನ್ನು ಕಟ್ಟಿ ಹರಕೆ ತೀರಿಸೋದು. ಹೌದು ದೇವಿಯ ದೇವಸ್ಥಾನದ ಮುಂದೆ ಭಕ್ತರು ಹೊಸ ಪಾದರಕ್ಷೆಗಳನ್ನು ಖರೀದಿಸಿ ತಂದು, ಇಲ್ಲಿ ಕಟ್ಟಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಇನ್ನು ಇಂತಹದೊಂದು ಸಂಪ್ರದಾಯ ಇಲ್ಲಿ ಅನೇಕ ವರ್ಷಗಳಿಂದ ಆಚರಣೆಯಲ್ಲಿದೆ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಹೇಳಿಕೊಳ್ಳುತ್ತಾರಂತೆ. ತಮ್ಮ ಸಮಸ್ಯೆ ಪರಿಹಾರವಾದರೇ ಬರುವ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಮುಂದೆ ಚಪ್ಪಲಿಗಳನ್ನು ಕಟ್ಟುತ್ತೇನೆ ಅಂತ ಹರಿಕೆ ಕಟ್ಟಿಕೊಳ್ಳುತ್ತಾರೆ. ಹೀಗೆ ಬೇಡಿಕೊಂಡವರು ತಮ್ಮ ಸಮಸ್ಯೆಗಳು ಪರಿಹಾರವಾದ ಮೇಲೆ ಜಾತ್ರೆಯ ಸಂದರ್ಭದಲ್ಲಿ ಪಾದರಕ್ಷೆಗಳನ್ನು ತಂದು ಕಟ್ಟಿ, ತಮ್ಮ ಹರಕೆಯನ್ನು ತೀರಿಸುತ್ತಾರೆ.

ಇನ್ನು ಚಪ್ಪಲಿಗಳನ್ನು ತಂದು ಕಟ್ಟಲು ಕಾರಣವು ಇದೆಯಂತೆ. ಅದು ಗೋಳಾ ಗ್ರಾಮದಲ್ಲಿರುವ ಲಕ್ಕಮ್ಮ ದೇವಿ ರಾತ್ರಿಯ ಸಂದರ್ಭದಲ್ಲಿ ದೇವಸ್ಥಾನವನ್ನು ಬಿಟ್ಟು ಹೊರಗೆ ಸಂಚರಿಸುತ್ತಾಳೆ. ಆಗ ಈ ಚಪ್ಪಲಿಗಳನ್ನು ಹಾಕಿಕೊಂಡು ಅಡ್ಡಾಡುತ್ತಾಳೆ ಅನ್ನೋ ನಂಬಿಕೆ ಇಲ್ಲಿನ ಜನರದ್ದು. ಜಾತ್ರೆಗು ಒಂದು ದಿನ ಮೊದಲು ಇಲ್ಲಿ ಯಾವೋದ ದಿವ್ಯ ಶಕ್ತಿ ಬಂದು ಚಪ್ಪಲಿಗಳನ್ನು ತಂದು ಕಟ್ಟಿಹೋಗುತ್ತೆ. ಆ ಚಪ್ಪಲಿಗಳು ಮುಂಜಾನೆ ಸವೆದಿರುತ್ತವೆ. ಇದರ ಅರ್ಥ ದೇವಿ ಅವುಗಳನ್ನು ಹಾಕಿಕೊಂಡು ಅಡ್ಡಾಡಿರುತ್ತಾಳಂತೆ ಜನರು ಭಕ್ತರು ನಂಬಿದ್ದಾರೆ. ಇದೆಲ್ಲಾ ದೇವಿಯ ಶಕ್ತಿಯಿಂದ ನಡೆಯುತ್ತೆ ಅನ್ನೋ ನಂಬಿಕೆ ಜನರದ್ದು. ಇದು ಒಂದಾದ್ರೆ ಇನ್ನೊಂದು ವಿಶೇಷ ಈ ದೇವಸ್ಥಾನದಲ್ಲಿ ಇದೆ. ಇಲ್ಲಿ ದೇವರ ಮುಖ ಕಾಣೋದಿಲ್ಲಾ. ಬದಲಾಗಿ ದೇವರ ಬೆನ್ನಿಗೆ ಎಲ್ಲರು ನಮಸ್ಕರಿಸುತ್ತಾರೆ. ಬೆನ್ನಿಗೆ ನಮಸ್ಕರಿಸಲು ಕಾರಣವೂ ಇದೆ. ಅದು ಆಳಂದ ತಾಲೂಕಿನ ದುತ್ತರಗಾಂವ್ ಗ್ರಾಮದಿಂದ ಬಂದ ಲಕ್ಕಮ್ಮದೇವಿ ಗೋಳಾ ಬಿ ಗ್ರಾಮಕ್ಕೆ ಬಂದು ಬೆನ್ನನ್ನು ಮೇಲೆ ಮಾಡಿ ಮಲಗಿದ್ದಾಳಂತೆ. ಹೀಗಾಗಿ ಇಲ್ಲಿ ದೇವಿಯ ಮುಖ ಕಾಣೋದಿಲ್ಲಾ. ಆದ್ದರಿಂದ ದೇವಸ್ಥಾನಕ್ಕೆ ಬರುವ ಭಕ್ತರು ದೇವಿಯ ಬೆನ್ನಿಗೆ ನಮಸ್ಕರಿಸುತ್ತಾರೆ. ದೇವಿಯ ಬೆನ್ನಿಗೆ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇನ್ನು ಗೋಳಾ ಬಿ ಗ್ರಾಮದಲ್ಲಿ ನಡೆಯುವ ಲಕ್ಕಮ್ಮದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕಲಬುರಗಿ ಜಿಲ್ಲೆಯಲ್ಲದೆ, ನೆರೆಯ ಮಹರಾಷ್ಟ್ರ ಮತ್ತು ತೆಲಂಗಾಣದಿಂದಲೂ ಕೂಡಾ ಸಾಕಷ್ಟು ಭಕ್ತರು ಬರುತ್ತಾರಂತೆ. ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.

ಪಾದರಕ್ಷೆ ಹರಕೆಯಿಂದಾಗಿ ಗೋಳಾ ಬಿ ಲಕ್ಕಮ್ಮದೇವಿ ಜಾತ್ರೆ ಸಾಕಷ್ಟು ಸುಪ್ರಿಸಿದ್ದಿಯನ್ನು ಪಡೆದಿದೆ. ಪಾದರಕ್ಷೆಗಳನ್ನು ಕಟ್ಟಿ ಹರಕೆ ತೀರಿಸೋದರಿಂದ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೇ ಅನ್ನೋ ನಂಬಿಕೆ ಭಕ್ತರಲ್ಲಿ ಇರೋದರಿಂದಾಗಿ ಇಂದಿಗೂ ಪಾದರಕ್ಷೆಯ ಹರಕೆ ನಡೆದುಕೊಂಡು ಬಂದಿದೆ. ಕಾಲ ಬದಲಾದರೂ ಜನರ ನಂಬಿಕೆ ಮಾತ್ರ ಬದಲಾಗಿಲ್ಲಾ.

ವರದಿ-ಸಂಜಯ್​​ ಟಿವಿ9 ಕಲಬುರಗಿ

Published On - 11:04 pm, Tue, 8 November 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ