
ಕಲಬುರಗಿ, ಡಿಸೆಂಬರ್ 15: ಕಲಬುರಗಿ (Kalaburagi) ಜಿಲ್ಲೆಯ ಶಹಾಬಾದ್ ಮತ್ತು ಜೇವರ್ಗಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಪ್ರತ್ಯೇಕ ಕಳ್ಳತನ (theft) ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಿದ್ದಾರೆ. ಅಂತಾರಾಜ್ಯ ಕಳ್ಳ ಚಿರಾಗ್ ರಾಠೋಡ್, ಸುನೀಲ್, ಮೊಹಮ್ಮದ್ ಯೂನಸ್ ಮತ್ತು ಇನ್ನು ಮೂವರು ಬಂಧಿತರು. ಸದ್ಯ ಬಂಧಿತರಿಂದ ಕಳ್ಳತನವಾದ ಚಿನ್ನಾಭರಣ ಸೇರಿದಂತೆ ಎಲ್ಲಾ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಶಹಾಬಾದ್ ಹಾಗೂ ಜೇವರ್ಗಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಕಲಬುರಗಿ ಜಿಲ್ಲೆಯ ಹೊನಗುಂಟಾ ಗ್ರಾಮದ ಪ್ರಸಿದ್ಧ ಚಂದ್ರಲಾ ಪರವೇಶ್ವರಿ ದೇವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಕಳ್ಳನನ್ನು ಶಹಾಬಾದ್ ಪೋಲಿಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲಕ ಚಿರಾಗ್ ರಾಠೋಡ್ ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು ಚಿನ್ನದ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಲಾಭದ ಹಣ ದಾನ ಮಾಡುವುದಕ್ಕೆಂದು ಹೂಡಿಕೆ ಮಾಡಿದ ಉದ್ಯಮಿಗೆ ಕಾದಿತ್ತು ಶಾಕ್: 8 ಕೋಟಿ ರೂ. ಖತಂ!
ಮತ್ತೊಂದು ಪ್ರಕರಣದಲ್ಲಿ ಶಹಾಬಾದ್ನಲ್ಲಿ ದ್ವಿಚಕ್ರ ವಾಹನ ಕದ್ದಿದ್ದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತ ಆರೋಪಿಗಳಿಂದ 3 ದ್ವಿಚಕ್ರ ವಾಹನ, 90 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಎಸ್.ಎನ್. ಗುಡೂರು, ಇಜೇರಿ ಗ್ರಾಮದ ಮನೆಗಳ್ಳತನ ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಗುಡೂರಿನಲ್ಲಿ ಮನೆ ಬೀಗ ಮುರಿದು ಕಳವು ಮಾಡಿದ್ದ ಸುನೀಲ್ನನ್ನು ಬಂಧಿಸಲಾಗಿದ್ದು, 51 ಗ್ರಾಂ ಚಿನ್ನಾಭರಣ, 212 ಗ್ರಾಂ ಬೆಳ್ಳಿ ಆಭರಣ, 6 ಲಕ್ಷ ರೂ ಹಣ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಸಂಜೆಯಾದ್ರೆ ಸಾಕು ಒಂಟಿಯಾಗಿ ಓಡಾಡೋ ಹೆಣ್ಣು ಮಕ್ಕಳೇ ಈತನ ಟಾರ್ಗೆಟ್: ಬೆಂಗಳೂರಿನಲ್ಲೊಬ್ಬ ವಿಚಿತ್ರ ಸೈಕೋ!
ಇನ್ನು ಅದೇ ಗ್ರಾಮದ ಸಂಬಂಧಿಕರ ಮನೆಗೆ ನುಗ್ಗಿ ಸುಲಿಗೆ ಮಾಡಿದ್ದ ಮೊಹಮ್ಮದ್ ಯೂನಸ್ ಎಂಬಾತನನ್ನು ಪೊಲೀಸರ ಅರೆಸ್ಟ್ ಮಾಡಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ, ಚಾಕು ತೋರಿಸಿ ಸುಲಿಗೆ ಮಾಡಿದ್ದ. ಸದ್ಯ ಬಂಧಿತ ಮೊಹಮ್ಮದ್ ಯೂನಸ್ನಿಂದ 16 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:34 pm, Mon, 15 December 25