
ಕಲಬುರಗಿ, ಜುಲೈ 29: ಶಸ್ತ್ರಚಿಕಿತ್ಸೆಗೊಳಗಾಗಿದ್ದ ತಂದೆಯ ಆರೈಕೆಗೆಂದು ಬಂದಿದ್ದ ಬಾಲಕಿ ಮೇಲೆಯೇ ಕಲಬುರಗಿಯ (Kalaburagi) ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಅತ್ಯಾಚಾರ ಎಸಗಲಾಗಿದೆ. ಸದ್ಯ ಘಟನೆ ಸಂಬಂಧ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ತಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತಾಯಿ ದಿವ್ಯಾಂಗರಾಗಿದ್ದು, ಹೀಗಾಗಿ ಬಾಲಕಿಯೇ ತಂದೆಯ ಆರೈಕೆ ಬಂದಿದ್ದಳು. ಆ ಸಂದರ್ಭದಲ್ಲಿ ಆಸ್ಪತ್ರೆಯ ಸ್ವಚ್ಛತಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯೇ ಕೃತ್ಯ ಎಸಗಿದ್ದಾನೆ.
ಬಾಲಕಿಯ ಆರ್ಥಿಕ ಪರಿಸ್ಥಿತಿ ದುರುಪಯೋಗ ಮಾಡಿಕೊಂಡು ಸಿಬ್ಬಂದಿ ಸಂಪತ್ ಕಿವಡೇಕರ್ ಎಂಬಾತ ಆಕೆಯನ್ನುವಿಶ್ರಾಂತಿ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸದ್ಯ ಸಂಪತ್ ಕಿವಡೇಕರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಆತನನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ ತಾಲೂಕಿನ ಗ್ರಾಮವೊಂದರ ವ್ಯಕ್ತಿ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯ ಶಸ್ತ್ರಚಿತ್ಸೆಗೆ ಒಳಗಾಗಿದ್ದರು. ಅವರ ಪತ್ನಿ ಅಂಗವಿಕಲೆ ಆದ ಕಾರಣ ಮಗಳು ಅವರನ್ನು ನೋಡಿಕೊಳ್ಳುತ್ತಿದ್ದಳು. ಕಳೆದ ಒಂದು ವಾರದಿಂದ ತಂದೆ ಮಗಳು ಆಸ್ಪತ್ರೆಯಲ್ಲಿದ್ದರು.
ಇದನ್ನೂ ಓದಿ: ಸಿಬ್ಬಂದಿಯನ್ನ ಹೆದರಿಸಿ ಮಸಾಜ್ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಅದೇ ಆಸ್ಪತ್ರೆಯಲ್ಲಿ ಅವರದೇ ಊರಿನ ವ್ಯಕ್ತಿಯಾದ ಸಂಪತ್ ಕಿವಡೇಕರ್ ಸ್ವಚ್ಛತಾ ಕೆಲಸ ಮಾಡುತ್ತಿದ್ದ. ಅಪ್ಪ ಮತ್ತು ಮಗಳು ಆತನ ಮೂಲಕ ನಿತ್ಯ ಬಟ್ಟೆ ಹಾಗೂ ಇತರ ಸಾಮಗ್ರಿಯನ್ನು ಧರಿಸಿಕೊಳ್ಳುತ್ತಿದ್ದರು. ಮನೆಯಿಂದ ಕೊಟ್ಟಿರುವ ಬಟ್ಟೆಯನ್ನು ಆತನ ಬಳಿಯಿಂದ ತರಲೆಂದು ತಂದೆ ಮಗಳನ್ನು ಕಳುಹಿಸಿದ್ದರು. ಅದೇ ವೇಳೆ, ಸಮಯ ನೋಡಿಕೊಂಡು ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
Published On - 12:34 pm, Tue, 29 July 25