ಕಲಬುರಗಿ, ಫೆ.21: ಇತ್ತೀಚೆಗೆ ಹುಟ್ಟಿದ ಮುಗುವಿನಿಂದ ಹಿಡಿದು 16 ವರ್ಷದೊಳಗಿನ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಲಬುರಗಿ(Kalaburagi) ಜಿಲ್ಲಾ ಆರೋಗ್ಯ ಇಲಾಖೆಯು ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಹೃದಯ ಮತ್ತು ನರರೋಗಕ್ಕೆ ಸಂಬಂಧಿಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಅವರಲ್ಲಿ 170 ಮಕ್ಕಳ ಪೈಕಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿರುವ ಆತಂಕಕಾರಿ ವಿಷಯ ಬಯಲಿಗೆ ಬಂದಿದೆ. 90 ಮಕ್ಕಳ ಪೈಕಿ 41 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೆಂದು ಕಲಬುರಗಿ ಡಿಎಚ್‌ಓ ಡಾ. ರತಿಕಾಂತ್‌ಸ್ವಾಮಿ ಹೇಳಿದ್ದಾರೆ.
ಇನ್ನು ಮಕ್ಕಳಲ್ಲಿ ಹೃದಯಸಂಬಂಧಿ ಕಾಯಿಲೆ ಕಾಣಿಸುತ್ತಿರುವುದು ಹೊಸ ವಿಚಾರ ಏನಿಲ್ಲ. ಈ ಹಿಂದಿನಿಂದಲೂ ಕೂಡ ಈ ಕಾಯಿಲೆ ಮಕ್ಕಳಲ್ಲಿ ಕಾಣಿಸುತ್ತಾ ಬಂದಿದೆ. ಆದರೆ, ಪೋಷಕರು ಮಕ್ಕಳನ್ನ ತಪಾಸಣೆ ಮಾಡಿಸದ ಪರಿಣಾಮ ಕಾಯಿಲೆ ಪತ್ತೆಯಾಗಿರಲಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಸಾಮಾನ್ಯವಾಗಿ ತಾಯಿಯ ಹೊಟ್ಟೆಯಲ್ಲಿರುವಾಗಲೇ ಕೆಲವು ಮಕ್ಕಳಿಗೆ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತವೆ, ಹೀಗೆ ಕಾಯಿಲೆ ಕಂಡು ಬಂದ ಮಕ್ಕಳಿಗೆ ಚಿಕಿತ್ಸೆಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದೆಂದು ಜಿಲ್ಲಾಧಿಕಾರಿ ಕೂಡ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಮಕ್ಕಳ ಮೇಲಿನ ಒತ್ತಡವೇ ಹೃದಯಾಘಾತಕ್ಕೆ ಕಾರಣವಾಗುತ್ತಿದೆಯೇ? ಹೆತ್ತವರು ಈ ಬಗ್ಗೆ ಗಮನ ಕೊಡಿ
ಹೀಗಾಗಿ ಪೋಷಕರು ನಿರ್ಲಕ್ಷ್ಯ ವಹಿಸದೇ ಮಕ್ಕಳನ್ನ ತಪಾಸಣೆ ಮಾಡಿಸಬೇಕು ಎಂದು ಡಿಎಚ್‌ಓ ಮನವಿ ಮಾಡಿದ್ದಾರೆ. ಇಂತಹ ಆರೋಗ್ಯ ತಪಾಸಣೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಹೃದಯ ಸಂಬಂದಿ ಚಿಕಿತ್ಸೆಗೆ ಸರ್ಜರಿ ಅಗತ್ಯವಿದ್ದಲ್ಲಿ ಸೂಕ್ತ ಆಸ್ಪತ್ರೆಗೆ ಕಳುಹಿಸಲಾಗುವುದು ಎನ್ನುತ್ತಾರೆ. ಅಷ್ಟೆ ಅಲ್ಲದೆ ಬೇರೆ ಖಾಯಿಲೆಗೆ ಕೂಡ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿರೋದಾಗಿ ಆರೆ ವೈಧ್ಯಾಧೀಕಾರಿಗಳು ಹೇಳುತ್ತಿದ್ದಾರೆ. ಅದೆನೇ ಇರಲಿ ಚಿಕ್ಕ ಮಕ್ಕಳ ಹೃದಯ ಸಂಬಂಧಿ ಕಾಯಿಲೆ ದೊಡ್ಡ ಆತಂಕವನ್ನೆ ಸೃಷ್ಠಿ ಮಾಡಿದೆ. ಈ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲಾಂದ್ರೆ ಭವಿಷ್ಯದಲ್ಲಿ ಜೀವಕ್ಕೆ ಆಪತ್ತು ಬಂದರು ಬರಬಹುದು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ