ಕೆಲಸಕ್ಕಾಗಿ ಹೋದ ಕಲಬುರಗಿ ಕನ್ನಡಿಗರನ್ನು ಉಕ್ರೇನ್ ಯುದ್ದಕ್ಕೆ ನಿಯೋಜಿಸಿದ ರಷ್ಯಾ; ನನ್ನ ಮಕ್ಕಳನ್ನು ಕಾಪಾಡಿ ಎಂದು ತಂದೆ ಅಳಲು

ಕೆಲಸಕ್ಕಾಗಿ ಕಲಬುರಗಿಯ 4 ಯುವಕರು ಸೇರಿ ಭಾರತದ 6 ಯುವಕರು ಬಾಬಾ ಏಜೆಂಟ್ ಮೂಲಕ 2023 ಡಿಸೆಂಬರ್ 5 ರಂದು ರಷ್ಯಾಕ್ಕೆ ತೆರಳಿದ್ದರು. ಕೆಲಸ ಸಿಗುವ ಆಸೆಯಲ್ಲಿ ಉಕ್ರೇನ್​ಗೆ ಹೋದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲಸಕ್ಕೆ ಹೋಗಿದವರು ಉಕ್ರೇನ್ ಬಾರ್ಡರ್​ನಲ್ಲಿ ಯುದ್ದಕ್ಕೆ ನಿಯೋಜನೆಗೊಂಡಿದ್ದಾರೆ.

ಕೆಲಸಕ್ಕಾಗಿ ಹೋದ ಕಲಬುರಗಿ ಕನ್ನಡಿಗರನ್ನು ಉಕ್ರೇನ್ ಯುದ್ದಕ್ಕೆ ನಿಯೋಜಿಸಿದ ರಷ್ಯಾ; ನನ್ನ ಮಕ್ಕಳನ್ನು ಕಾಪಾಡಿ ಎಂದು ತಂದೆ ಅಳಲು
ಸಾಂದರ್ಭಿಕ ಚಿತ್ರ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಆಯೇಷಾ ಬಾನು

Updated on: Feb 22, 2024 | 10:36 AM

ಕಲಬುರಗಿ, ಫೆ.22: ಯುರೋಪ್‌ನ ಅತಿದೊಡ್ಡ ದೇಶಗಳಲ್ಲಿ ಒಂದಾಗಿರುವ ಉಕ್ರೇನ್​ನಲ್ಲಿ (Ukraine) ಸೆಕ್ಯುರಿಟಿ ಗಾರ್ಡ್​ ಕೆಲಸಕ್ಕಾಗಿ ಹೋಗಿದ್ದ ಕಲಬುರಗಿಯ ಯುವಕರು ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ. ಸೆಕ್ಯುರಿಟಿ ಗಾರ್ಡ್​ ಕೆಲಸಕ್ಕೆ ಹೋಗಿದವರು ಉಕ್ರೇನ್ ಬಾರ್ಡರ್​ನಲ್ಲಿ ಯುದ್ದಕ್ಕೆ ನಿಯೋಜನೆಗೊಂಡಿದ್ದಾರೆ. ತರಬೇತಿ ನಡೆದಿದೆ ಅಂತಾ ಹೇಳಿ ನಮ್ಮನ್ನ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ ಎಂದು ಸಿಲುಕಿಕೊಂಡ ಯುವಕನೋರ್ವವ ತಂದೆ ಅಳಲು ತೋಡಿಕೊಂಡಿದ್ದಾರೆ. ಉದ್ಯೋಗಕ್ಕಾಗಿ ತೆರಳಿದ್ದ ಯುವಕರನ್ನು ರಷ್ಯಾ ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ ಎಂದು ಇತ್ತೀಚೆಗೆ ಹೈದರಾಬಾದ್​ನಲ್ಲಿ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ (Asaduddin Owaisi) ಹೇಳಿಕೆ ನೀಡಿದ್ದರು.

ಕೆಲಸಕ್ಕಾಗಿ ಕಲಬುರಗಿಯ 4 ಯುವಕರು ಸೇರಿ ಭಾರತದ 6 ಯುವಕರು ಬಾಬಾ ಏಜೆಂಟ್ ಮೂಲಕ 2023 ಡಿಸೆಂಬರ್ 5 ರಂದು ರಷ್ಯಾಕ್ಕೆ ತೆರಳಿದ್ದರು. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಕ ಪ್ರತಿಯೊಬ್ಬ ಯುವಕರ ಬಳಿ ಮೂರು ಲಕ್ಷ ಹಣ ಪಡೆದುಕೊಂಡಿದ್ದ. ಆದರೆ ಈಗ ಕೆಲಸ ಸಿಗುವ ಆಸೆಯಲ್ಲಿ ಉಕ್ರೇನ್​ಗೆ ಹೋದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಳಬುರಗಿಯ ಆಳಂದ ತಾಲೂಕಿನ ನರೋಣದ ಸೈಯದ್ ಇಲಿಯಾಸ್ ಹುಸೇನ್, ಮೊಹಮ್ಮದ್ ಸಮೀರ್ ಅಹಮದ್, ಸೋಫಿಯಾ ಮೊಹಮ್ಮದ್ ರಷ್ಯಾದಲ್ಲಿ ಸಿಲುಕಿಕೊಂಡಿದ್ದಾರೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಉಕ್ರೇನ್ ನಲ್ಲಿರೋ ಹುಡುಗನ ತಂದೆ ನವಾಜ್ ಕಾಳಗಿ, ನನ್ನ ಮಗನಿಗೆ ಏಜೆಂಟ್​ಗಳು ಮೋಸ ಮಾಡಿದ್ದಾರೆ. ಅವನು ಸಮಸ್ಯೆಯಲ್ಲಿದ್ದಾನೆ. ನನ್ನ ಮಕ್ಕಳಿಗೆ ಮೋಸ ಆಗಿದೆ ಭಾರತದ ಅನೇಕ ಜನರಿಗೆ ಮೋಸ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಉಕ್ರೇನ್ ಬಾರ್ಡರ್​ನಲ್ಲಿ ಯುದ್ದದಲ್ಲಿ ನಿಯೋಜನೆ ಮಾಡಿದ್ದಾರೆ. ತರಬೇತಿ ನಡೆದಿದೆ ಅಂತಾ ಹೇಳಿ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ. ಮತ್ತೊಬ್ಬ ಯುವಕನನ್ನ ಎಲ್ಲಿ ಹಾಕಿದ್ದಾರೆ ಅಂತಾ ಇದುವರೆಗೂ ಗೊತ್ತಾಗಿಲ್ಲ ಎಂದು ಯುವಕನ ತಂದೆ ಅಳಲು ತೋಡಿಕೊಂಡಿದ್ದಾರೆ. ಆದಷ್ಟು ಬೇಗ ಸರ್ಕಾರ ಮಧ್ಯೆ ಪ್ರವೇಶಿಸಿ ಯುವಕರನ್ನು ತವರಿಗೆ ಕರೆತರಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್​​ನಲ್ಲಿ ಪತನ, 74 ಸಾವು

ಏಜೆಂಟ್ ಮೂಲಕ ತೆರಳಿದವರು ಯುದ್ಧಭೂಮಿಗೆ ನೇಮಕ

ಇನ್ನು ಇತ್ತೀಚೆಗೆ ಹೈದರಾಬಾದ್​ನಲ್ಲಿ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಅವರು ಗಂಭೀರ ಆರೋಪ ಮಾಡಿದ್ದರು. ಉದ್ಯೋಗಕ್ಕಾಗಿ ತೆರಳಿದ್ದ ಯುವಕರನ್ನು ರಷ್ಯಾ ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಭಾರತದ 12 ಯುವಕರನ್ನು ಯುದ್ಧಕ್ಕೆ ಕಳಿಸಿದೆ. ಕಳೆದ ಡಿಸೆಂಬರ್​​ನಲ್ಲಿ ಏಜೆಂಟ್​ರ ಮೂಲಕ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿ ಕೆಲಸಕ್ಕೆಂದು ಉದ್ಯೋಗಕ್ಕಾಗಿ ರಷ್ಯಾಗೆ ತೆರಳಿದ್ದ 12 ಯುವಕರು ರಷ್ಯಾ ಯುದ್ಧಕ್ಕೆ ನಿಯೋಜನೆಗೊಂಡಿದ್ದಾರೆ. ಯುವಕರಿಗೆ ಉದ್ಯೋಗ ನೀಡುವ ಆಮಿಷವೊಡ್ಡಿ ಏಜೆಂಟ್​ರಿಂದ ಮೋಸ ಆಗಿದೆ. ಮೂವರು ಏಜೆಂಟ್​ರ ಪೈಕಿ ಓರ್ವ ದುಬೈ, ಮತ್ತಿಬ್ಬರು ಮುಂಬೈನಲ್ಲಿದ್ದಾರೆ. ಇಂತಹವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವಂತೆ ಸಂಸದ ಒವೈಸಿ ಆಗ್ರಹಿಸಿದ್ದರು. ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತೀಯರನ್ನು ರಷ್ಯಾ ಕಳುಹಿಸಿಕೊಟ್ಟಿದೆ. ರಷ್ಯಾದಲ್ಲಿ ಯುದ್ಧಕ್ಕೆ ನೇಮಿಸಿರುವ ಯುವಕರನ್ನು ಕರೆತರುವಂತೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವರಿಗೆ ಒವೈಸಿ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?