ಹಾಡಹಗಲೇ ವಕೀಲನ ಬರ್ಬರ ಹತ್ಯೆ ಪ್ರಕರಣ; 6 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು

ಆತ ವೃತ್ತಿಯಲ್ಲಿ ವಕೀಲರು, ಆಗಷ್ಟೇ ಕೋರ್ಟ್‌ಗೆ ತೆರಳಲು ತಮ್ಮ ಅಪಾರ್ಟ್ಮೆಂಟ್​ನಿಂದ ಬೈಕ್ ಮೇಲೆ ಹೊರಟಿದ್ದರು. ಈ ವೇಳೆ ಮಾರಕಾಸ್ತ್ರಗಳ ಸಮೇತ ಎದುರಿಗೆ ಬಂದ ದುಷ್ಕರ್ಮಿಗಳು, ವಕೀಲನ ಬೈಕ್ ಅಡ್ಡಗಟ್ಟಿದ್ದರು. ಅಷ್ಟೇ, ಅಲ್ಲಿಂದ ನಡೆದಿದ್ದು ಸಿನಿಮಿಯ ಶೈಲಿಯ ಮರ್ಡರ್. ವಕೀಲನನ್ನ ಅಟ್ಟಾಡಿಸಿ ಹಾಡುಹಗಲೇ ನಡೆದ ರಣಭೀಕರ ಹತ್ಯೆಯಿಂದ ತೊಗರಿಯ ಕಣಜ ಕಲಬುರಗಿ ಅಕ್ಷರಶಃ ಬೆಚ್ಚಿಬಿದ್ದಿದೆ.

ಹಾಡಹಗಲೇ ವಕೀಲನ ಬರ್ಬರ ಹತ್ಯೆ ಪ್ರಕರಣ; 6 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು
ಮೃತ ಲಾಯರ್​
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 07, 2023 | 8:24 PM

ಕಲಬುರಗಿ, ಡಿ.07: ಕಲಬುರಗಿ(Kalaburagi) ನಗರದಲ್ಲಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ 6 ಆರೋಪಿಗಳ ವಿರುದ್ಧ ಎಫ್‌ಐಆರ್(FIR) ದಾಖಲು ಮಾಡಲಾಗಿದೆ. ನೀಲಕಂಠ ಪೊಲೀಸ್ ಪಾಟೀಲ್, ವಿಜಯಕುಮಾರ್, ಸಿದ್ದಣ್ಣಗೌಡ ಸಿದ್ರಾಮ್, ಅವ್ವಣ್ಣ, ಗುರು ಎಂಬುವವರ ವಿರುದ್ಧ ದಾಖಲಾಗಿದೆ. ಬೆಳಗ್ಗೆ ಗಂಗಾವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ವಕೀಲನ ಕೊಲೆ ಆಗಿತ್ತು. ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಈರಣ್ಣ ಗೌಡರನ್ನು ಹತ್ಯೆಗೈದಿದ್ದರು.

ಕಲಬುರಗಿಯಲ್ಲಿ ಹಾಡಹಗಲೇ ಭೀಕರ ಹತ್ಯೆ! ಆಸ್ತಿ ವ್ಯಾಜ್ಯ ಸಂಬಂಧ ವಕೀಲನ ಹತ್ಯೆಯಾಯ್ತಾ?

ಕಲಬುರಗಿ ನಗರದ ಸಾಯಿ ಮಂದಿರ ಬಳಿಯ ಶ್ರೀ ಗಂಗಾ ವಿಹಾರ್ ಅಪಾರ್ಟ್ಮೆಂಟ್‌ನಲ್ಲಿ‌‌. ವೃತ್ತಿಯಲ್ಲಿ ವಕೀಲರು ಆಗಿರುವ 40 ವರ್ಷದ ಈರಣ್ಣಗೌಡ ಎಂಬುವವರು ನೂರಾರು ಎಕರೆ ಜಮೀನಿನ ಜೊತೆಗೆ ರಿಯಲ್ ಎಸ್ಟೇಟ್​ ಬಿಸ್​ನೆಸ್ ಮಾಡುವುದರ ಜೊತೆಗೆ ವಕೀಲ ವೃತ್ತಿಯನ್ನು ಸಹ ಮಾಡಿಕೊಂಡು ಹೋಗುತ್ತಿದ್ದರು. ಇದರ ಮಧ್ಯೆ ಸಂಬಂಧಿಗಳ ಮಧ್ಯೆ ಜಮೀನು/ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆಯುತ್ತಾಯಿತ್ತು. ಪ್ರಕರಣ ಕೋರ್ಟ್‌ನಲ್ಲಿದ್ದರು ಸಹ, ಎರಡು ಕುಟುಂಬಸ್ಥರ ಮಧ್ಯೆ ದೊಡ್ಡಮಟ್ಟದ ವೈಷಮ್ಯ ಬೆಳೆದಿತ್ತು. ಹೀಗಾಗಿ ಇಂದು ಬೆಳಗ್ಗೆ 10.30 ಗಂಟೆಗೆ ಅಪಾರ್ಟ್ಮೆಂಟ್‌ನಿಂದ ಕೋರ್ಟ್‌ಗೆ ತೆರಳು ಈರಣ್ಣಗೌಡ ಬೈಕ್ ಮೇಲೆ ಹೊರಟಿದ್ದಾರೆ. ಈ ವೇಳೆ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹೊಡೆಯಲು ಮುಂದಾದಾಗ ಅವರಿಂದ ತಪ್ಪಿಸಿಕೊಂಡು ಅಪಾರ್ಟ್ಮೆಂಟ್‌ನ ಬೆಸ್‌ಮೆಂಟ್‌ಗೆ ಬಂದಾಗ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ..

ಇದನ್ನೂ ಓದಿ:ಕಲಬುರಗಿ: ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ವಕೀಲನ ಬರ್ಬರ ಹತ್ಯೆ

ಇನ್ನು ಹತ್ಯೆಯಾದ ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ್ ತಂದೆ ಹಾಗೂ ಸಹೋದರರ ಮಧ್ಯೆ ಉದನೂರು ಗ್ರಾಮದಲ್ಲಿ 70 ಎಕರೆ ಜಮೀನು ವಿವಾದದಿಂದ ವೈಷಮ್ಯ ಏರ್ಪಟ್ಟಿತ್ತು. ಮೂವರು ಸಹೋದರರ ಮಧ್ಯೆ ಈರಣ್ಣಗೌಡ ಒಬ್ಬನೇ ಗಂಡು ಮಗನಾಗಿದ್ದ. ಹೀಗಾಗಿ 70 ಎಕರೆ ಆಸ್ತಿ ಎಲ್ಲಿ ಕೈತಪ್ಪಿ‌ ಹೋಗುತ್ತೋ ಎಂದು ಈರಣ್ಣಗೌಡನನ್ನ ಕೊಲೆ ಮಾಡಲು ಸ್ಕೇಚ್ ಹಾಕಿದ್ದಾರೆ. ಅದರಂತೆ ಇಂದು ಸಹೋದರ ಸಂಬಂಧಿಕರ ಮಕ್ಕಳಾದ ಕಂಟೆಪ್ಪಣ ಅವ್ವಣ್ಣ ಮತ್ತು ಭಾಗೇಶ್ ಎಂಬಾತರು ಸೇರಿಕೊಂಡು ಈರಣ್ಣಗೌಡನನ್ನ ಅಟ್ಟಿಸಿಕೊಂಡು ಭೀಕರ ಹತ್ಯೆ ಮಾಡಿದ್ದಾರೆ ಎಂದು ಆರೋಪಸಿದ್ದಾರೆ.

ಅಟ್ಟಿಸಿಕೊಂಡು ಹತ್ಯೆ: ಸಿಸಿ ಕ್ಯಾಮರಾದಲ್ಲಿ ಸೆರೆ

ಅಟ್ಟಿಸಿಕೊಂಡು ಹತ್ಯೆ ಮಾಡುವ ದೃಶ್ಯಗಳು ಅಪಾರ್ಟ್ಮೆಂಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಈ ಹಿಂದೆ ಸಹ ಈರಣ್ಣಗೌಡ ಮತ್ತು ಕುಟುಂಬಸ್ಥರ ಮೇಲೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಅಟ್ಯಾಕ್ ನಡೆದಿತ್ತು. ತನ್ನ ಜೀವಕ್ಕೆ ಅಪಾಯವಿದೆಯೆಂದು ತಿಳಿದ ಈರಣ್ಣಗೌಡ, ಮನೆ ಹಾಗೂ ತನ್ನ ಜಮೀನಿನಲ್ಲಿ ಸಹ ಸಿಸಿ ಕ್ಯಾಮರಾ ಅಳವಡಿಸಿಕೊಂಡಿದ್ದನು.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್ ಚೇತನ್, ‘ಕೋರ್ಟ್‌ಗೆ ಹೋಗುವಾಗ ಹಂತಕರು ಅಟ್ಯಾಕ್ ಮಾಡಿದ್ದಾರೆ. ಹಂತಕರ ಬಂಧನಕ್ಕೆ ವಿವಿ ಠಾಣೆ ಪೊಲೀಸರ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿದ್ದು, ಸಿಸಿ ಕ್ಯಾಮರಾ ವಿಡಿಯೋ ಆಧರಿಸಿ ಮತ್ತು ಸ್ಥಳದಲ್ಲಿ ಸಿಕ್ಕ ಕೆಲ ವಸ್ತುಗಳ ಜಾಡು ಹಿಡಿದು ಹಂತಕರನ್ನ ಶೀಘ್ರವೇ ಬಂಧಿಸಲಾಗುವುದೆಂದು ಹೇಳಿದ್ದರು. ಅದೆನೇ ಇರಲಿ ಕಲಬುರಗಿಯಲ್ಲಿ ಮಳೆ ನಿಂತರು ಮಳೆ ಹನಿ ನಿಲ್ಲಲ್ಲ ಎಂಬಂತೆ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ ಹಾಡುಹಗಲೇ ವಕೀಲನ ಹತ್ಯೆಯಿಂದ ತೊಗರಿಯ ಕಣಜ ಅಕ್ಷರಶಃ ಬೆಚ್ಚಿಬಿದ್ದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us