ಶೂಟ್ ಮಾಡಿಕೊಂಡು ಪತಿ ಆತ್ಮಹತ್ಯೆ: ನನ್ನ ಗಂಡ ಸೈಕೋ ಎಂದ ಪತ್ನಿ, ಆಗಿದ್ದೇನು?
ಕಲಬುರಗಿಯ ಶಿವಶಕ್ತಿ ಕಾಲೋನಿಯಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡು, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಸದ್ಯ ಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸದ್ಯ ತನಿಖೆ ನಡೆಸಿದ್ದಾರೆ.

ಕಲಬುರಗಿ, ಡಿಸೆಂಬರ್ 29: ನಗರದ ಶಿವಶಕ್ತಿ ಕಾಲೋನಿಯಲ್ಲಿ ರಿವಾಲ್ವರ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ನಡೆದಿದೆ. ಖಂಡುರಾಜ್ ದವಳಜಿ(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಲೈಸೆನ್ಸ್ ರಿವಾಲ್ವರ್ನಿಂದಲೇ ಖಂಡುರಾಜ್ ಶೂಟ್ ಮಾಡಿಕೊಂಡಿದ್ದಾರೆ. ಪತ್ನಿ ಜೊತೆಗಿನ ಜಗಳ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಚೌಕ್ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.
ನನ್ನ ಗಂಡ ಸೈಕೋ: ಖಂಡುರಾಜ್ ದವಳಜಿ ಪತ್ನಿ ಪ್ರಿಯಾ
ಆತ್ಮಹತ್ಯೆ ಮಾಡಿಕೊಂಡ ಖಂಡುರಾಜ್ ದವಳಜಿ ಪತ್ನಿ ಪ್ರಿಯಾ ನಡತೆ ಬಗ್ಗೆ ಅನುಮಾನ ಪಡುತ್ತಿದ್ದರಂತೆ. ಹೀಗಾಗಿ ಪತ್ನಿ ಜೊತೆ ಜಗಳವಾಡುತ್ತಿದ್ದರು. ರವಿವಾರ ಕೂಡ ಗಲಾಟೆ ಮಾಡಿದ್ದು, ನಿದ್ದೆ ಮಾತ್ರೆ ಕೊಟ್ಟು ಸಾಯಿಸುವುದಕ್ಕೆ ಅಂತಾ ಪ್ಲ್ಯಾನ್ ಮಾಡಿದ್ದರು. ನನ್ನ ಗಂಡ ಸೈಕೋ ರೀತಿ ವರ್ತಿಸುತ್ತಿದ್ದರು ಎಂದು ಪತ್ನಿ ಪ್ರಿಯಾ ಹೇಳಿದ್ದಾರೆ.
ಇದನ್ನೂ ಓದಿ: ಮನೆಗೆ ಬರ್ತಾನೆಂದು ಮಗನ ದಾರಿ ಕಾಯುತ್ತಿದ್ದ ತಾಯಿಗೆ ಬರಸಿಡಿಲು: 10 ದಿನದ ಬಳಿಕ ಪುತ್ರ ಶವವಾಗಿ ಪತ್ತೆ
ಲೈಸೆನ್ಸ್ ಇಲ್ಲದೆ ಇರುವ ಕಂಟ್ರಿ ಮೇಡ್ ಪಿಸ್ತೂಲ್ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಯದಿಂದ ನಾವು ಮನೆ ಬಿಟ್ಟು ಹೋಗಿದ್ದೇವು. ಬೆಳಿಗ್ಗೆ ನನ್ನ ಗಂಡ ಸಾವನ್ನಪ್ಪಿರುವುದು ಗೊತ್ತಾಗಿ ಇವಾಗ ಬಂದು ನೋಡಿದೆ ಎಂದು ಅವರು ಹೇಳಿದ್ದಾರೆ.
ಸಿಮೆಂಟ್ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ: ಸವಾರ ಸಾವು, ಚಾಲಕ ಪರಾರಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ಸಿಮೆಂಟ್ ಬಲ್ಕರ್ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವಿದ್ಯಾರ್ಥಿ: ಪಾದಚಾರಿ ಸಾವು
ಬೈಕ್ನಲ್ಲಿದ್ದ ಪವನ್ ಕುಮರ್(22) ಮತ್ತು ಅಶೋಕ್(24) ಮೃತರು. ಮುಂದೆ ಚಲಿಸುತ್ತಿದ್ದ ಲಾರಿ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಕ್ಕೆ ಅಪಘಾತ ಸಂಭವಿಸಿದೆ ಅಂತ ಆರೋಪ ಕೇಳಿಬಂದಿದೆ. ಅಪಘಾತ ಬಳಿಕ ಲಾರಿ ಸಮೇತ ಚಾಲಕ ಪರಾರಿ ಆಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



