AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kalaburagi News: ಬಾಕಿಯಿದ್ದ ಕರೆಂಟ್ ಬಿಲ್ ಕೇಳಲು ಹೋದ ಜೆಸ್ಕಾಂ ಸಿಬ್ಬಂದಿಗಳ ಮೇಲೆ ವ್ಯಕ್ತಿಯೋರ್ವನಿಂದ ಹಲ್ಲೆ

ವಿದ್ಯುತ್ ಬಾಕಿ ಬಿಲ್ ಕೇಳಲು ಹೋಗಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಆಳಂದ‌ ಪಟ್ಟಣದ ಖಾಜಿ‌ಗಲ್ಲಿಯಲ್ಲಿ ನಡೆದಿದೆ

Kalaburagi News: ಬಾಕಿಯಿದ್ದ ಕರೆಂಟ್ ಬಿಲ್ ಕೇಳಲು ಹೋದ ಜೆಸ್ಕಾಂ ಸಿಬ್ಬಂದಿಗಳ ಮೇಲೆ ವ್ಯಕ್ತಿಯೋರ್ವನಿಂದ ಹಲ್ಲೆ
ಹಲ್ಲೆಗೊಳಗಾದ ಜೆಸ್ಕಾಂ ಸಿಬ್ಬಂದಿ
ಸಂಜಯ್ಯಾ ಚಿಕ್ಕಮಠ
| Updated By: Digi Tech Desk|

Updated on:Jun 01, 2023 | 8:56 AM

Share

ಕಲಬುರಗಿ: ಕಾಂಗ್ರೆಸ್ (Congress) ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದಾಗಿನಿಂದ ಒಂದಿಲ್ಲ ಒಂದು ಸಮಸ್ಯೆಗಳು ಆಗುತ್ತಿವೆ. ಹಾಗಾಗಿ ಹಲವೆಡೆ ಸಾರ್ವಜನಿಕರು ಮತ್ತು ಸರ್ಕಾರಿ ಸಿಬ್ಬಂದಿಗಳ ಮಧ್ಯೆ ಸಂಘರ್ಷಗಳು ನಡೆಯುತ್ತಿವೆ. ಸದ್ಯ ಅಂತಹದ್ದೇ ಒಂದು ಘಟನೆ ಜಿಲ್ಲೆಯ ಆಳಂದ‌ ಪಟ್ಟಣದ ಖಾಜಿ‌ಗಲ್ಲಿಯಲ್ಲಿ ನಡೆದಿದೆ. ವಿದ್ಯುತ್ ಬಾಕಿ ಬಿಲ್ ಕೇಳಲು ಹೋಗಿದ್ದ ಸಿಬ್ಬಂದಿ ಮೇಲೆ ಹಲ್ಲೆ (Assault) ಮಾಡಲಾಗಿದೆ.  ಜೆಸ್ಕಾಂ ಜೆಇ ಸಿದ್ದರಾಮಪ್ಪ, ಲೈನ್​ಮ್ಯಾನ್​ ಇಜಾಜ್​​ ಹಲ್ಲೆಗೊಳಗಾದವರು. ಸದ್ಯ ಗಾಯಳುಗಳನ್ನು ಜೆಸ್ಕಾಂ ಸಿಬ್ಬಂದಿ ಆಳಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಸೀಂ ಜವಳೆ ಎನ್ನುವವರು ದಾಬಾ ಮತ್ತು ಮನೆ ಹದಿಮೂರು ಸಾವಿರ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಾಕಿ ಪಾವತಿಸದ ಹಿನ್ನೆಲೆ ಲೈನ್​ ಕಟ್ ಮಾಡಲಾಗಿತ್ತು. ಹಾಗಾಗಿ ಜೆಇ ಮತ್ತು ಲೈನಮ್ಯಾನ್​​ ಮೇಲೆ ಹಲ್ಲೆ ಮಾಡಿದ್ದಾರೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: Mandya News: ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಮಂಡ್ಯದ ವ್ಯಕ್ತಿ

ಪತ್ನಿಗೆ ಟಿಕೆಟ್ ಪಡೆಯಲು ಪತಿ ಹಿಂದೇಟು

ಕೊಪ್ಪಳ: ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಗ್ಯಾರಂಟಿ ಹಿನ್ನೆಲೆ ಸರ್ಕಾರಿ ಬಸ್​ನಲ್ಲಿ ಪತ್ನಿಗೆ ಟಿಕೆಟ್ ಪಡೆಯಲು ಪತಿ ಹಿಂದೇಟು ಹಾಕಿದ್ದ. ಈ ವೇಳೆ ಬಸ್​ನಲ್ಲಿ ಪ್ರಯಾಣಿಕ ಹಾಗೂ ನಿರ್ವಾಹಕನ ನಡುವೆ ವಾಗ್ವಾದ ಉಂಟಾಗಿತ್ತು. ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆಂದು ಪ್ರಯಾಣಿಕ ವಾದಿಸಿದ್ದ. ಈ ವಿಡಿಯೋ ಸೋಶಿಯಲ್​ ಮಿಡಿಯಾದಲ್ಲಿ ವೈರಲ್​ ಆಗಿತ್ತು.

ಫ್ರೀ‌ ಅಂತಾ ಹೇಳಿದ್ದಕ್ಕೆ ಕಾಂಗ್ರೆಸ್‌ಗೆ ವೋಟ್ ಹಾಕಿರೋದು

ಮಂಡ್ಯ: ಸಿದ್ದರಾಮಯ್ಯ ಹೇಳಿಲ್ವಾ ನಿಂಗೂ ಫ್ರೀ ನಂಗೂ ಫ್ರೀ ಅಂತಾ ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ವಿದ್ಯುತ್ ಬಿಲ್ ವಸೂಲಿಗೆ ಹೋದ ಚೆಸ್ಕಾಂ ಸಿಬ್ಬಂದಿಗೆ ವ್ಯಕ್ತಿ ಅವಾಜ್ ಹಾಕುತ್ತಿರುವುದು ವಿಡಿಯೋ ಒಂದು ವೈರಲ್​ ಆಗಿತ್ತು. 200 ಯೂನಿಯನ್ ಒಳಗೆ ಲೈಟ್ ಬಿಲ್ ವಜಾ ಮಾಡ್ತಾರೆ ಅಂತಾ ಕಾಂಗ್ರೆಸ್‌ಗೆ ಓಟು ಹಾಕಿರೋದು. ಸಿದ್ದರಾಮಯ್ಯ ಅವರೇ ಕಟ್ಟಲ್ಲ ಫ್ರೀ ಅಂದ ಮೇಲೆ ನಾನು ಕಟ್ಟಲ್ಲ. ಸಿದ್ದರಾಮಯ್ಯಗಿಂತ ನಾನು ಶ್ರೀಮಂತ ಅಲ್ಲ, ನಾನು ಕಟ್ಟಲ್ಲ ಅಷ್ಟೇ ಎಂದು ವ್ಯಕ್ತಿಯೊಬ್ಬರು ಕಡಾ ಖಂಡಿತವಾಗಿ ಹೇಳಿದರು.

ಅದೇನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ. ಫೀಸ್ ಕಿತ್ತಾಕುತ್ತೀರಾ ಕಿತಾಕಿ ನೋಡ್ತೀನಿ ನಾನು. ನಿಂಗೂ ಫ್ರೀ‌ ನಂಗೂ ಅಂತಾ ಸಿದ್ದರಾಮಯ್ಯ ಹೇಳಿದ್ದಕ್ಕೆ ಕಾಂಗ್ರೆಸ್‌ಗೆ ವೋಟ್ ಹಾಕಿರೋದು. ನಿಮಗೆ ತಾಕತ್ ಇದ್ರೆ ಕಂಬಕ್ಕೆ ಹತ್ತಿ ಕಿತ್ತಾಕಿ ನೋಡ್ತೀನಿ. ಯಾವುದೇ ಕಾರಣಕ್ಕೂ ನಾನು ಕರೆಂಟ್ ಬಿಲ್ ಕಟ್ಟಲ್ಲ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 7:30 pm, Wed, 31 May 23