AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kalaburagi: ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ; ಪೈಲೆಟ್ ಹೇಳುವುದೇನು? ಇಲ್ಲಿದೆ ನೋಡಿ

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಹಾರಿ ಬಂದು ಗೊಂದಲ ನಿರ್ಮಾಣವಾದ ಘಟನೆ ಕಲಬುರಗಿಯ ಜೇವರ್ಗಿ ಪಟ್ಟಣ ಹೊರವಲಯದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​ನಲ್ಲಿ ನಡೆದಿತ್ತು. ಈ ಘಟನೆ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ನಡೆಯಿತೇ? ಪೈಲೆಟ್ ಹಂಚಿಕೊಂಡ ಅನುಭವ ಇಲ್ಲಿದೆ.

Kalaburagi: ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ; ಪೈಲೆಟ್ ಹೇಳುವುದೇನು? ಇಲ್ಲಿದೆ ನೋಡಿ
ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗಾಳಿಗೆ ತೂರಿಬಂದ ಪ್ಲಾಸ್ಟಿಕ್​ಗಳು (ಎಡಚಿತ್ರ)
Rakesh Nayak Manchi
|

Updated on: Mar 06, 2023 | 2:51 PM

Share

ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ (Helicopter) ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದು ಲ್ಯಾಂಡಿಂಗ್​ಗೆ ಅಡಚಣೆ ಉಂಟಾದ ಘಟನೆ ಬಗ್ಗೆ ಸ್ವತಃ ಪೈಲೆಟ್ ಜೋಸೇಫ್ ಅನುಭವ ಹಂಚಿಕೊಂಡಿದ್ದಾರೆ. ಈ ರೀತಿಯಾದರೆ ನಿರ್ಧಾರ ತೆಗೆದುಕೊಳ್ಳಲು ಪೈಲೆಟ್​ಗೆ ಕಷ್ಟವಾಗುತ್ತದೆ. ಲ್ಯಾಂಡ್ ಆಗುವ ವೇಳೆ ಬ್ಯಾಗ್ ಸೇರಿದಂತೆ ಸುತ್ತಮುತ್ತ ಯಾವುದೇ ವಸ್ತುಗಳು ಇರಬಾರದು. ಆದರೆ ನಮಗೆ ಎಲ್ಲವೂ ತರಬೇತಿ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಹೇಳಿರುತ್ತಾರೆ. ಕೆಲ ಪ್ಲಾಸ್ಟಿಕ್ ಚೀಲ ಹಾರಿದ್ದರಿಂದ ಮೊದಲು ಲ್ಯಾಂಡ್ ಮಾಡಲಿಲ್ಲ. ಯಾವ ರೀತಿಯ ಲೋಪ ಆಗಿದೆ ಅಂತ ವಿಶುವಲ್​ನಲ್ಲಿಯೇ ಗೊತ್ತಾಗುತ್ತದೆ ಎಂದರು.

ಹೆಲಿಕಾಪ್ಟರ್​ ಲ್ಯಾಂಡ್ ವೇಳೆ ಆದ ಲೋಪಕ್ಕೆ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಹೆಲಿಕಾಪ್ಟರ್ ರೆಕ್ಕೆಯ ರಭಸದ ಗಾಳಿ ಎಂತಹ ವಸ್ತುಗಳು ಕೂಡ ಮೇಲಕ್ಕೆ ಹಾರುತ್ತವೆ. ಹೀಗಾಗಿ ಕಾಪ್ಟರ್ ಲ್ಯಾಂಡಿಂಗ್ ಆಗುವ ಸ್ಥಳದ ಸುತ್ತಮುತ್ತ ಯಾವುದೇ ವಸ್ತುಗಳು ಇರದಂತೆ ಸ್ವಚ್ಛತೆ ಕಾಪಾಡಬೇಕು. ಇದರ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದಾಗಿರುತ್ತದೆ. ಅದಾಗ್ಯೂ, ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸದ ಕಾರಣ ಹೆಲಿಕಾಪ್ಟರ್ ಚಕ್ರ ಸೃಷ್ಟಿಸುವ ಜೋರುಗಾಳಿಗೆ ಅಲ್ಲಿದ್ದ ಕಸ, ಪ್ಲಾಸ್ಟಿಕ್ ಚೀಲಗಳು, ಡ್ರಮ್ ಹಾರಿವೆ.

ಜೇವರ್ಗಿಯಲ್ಲಿ ನಡೆಯುತ್ತಿರವ ವಿಜಯ ಸಂಕಲ್ಪ ರಥಯಾತ್ರೆ ಸಂಬಂಧ ಯಡಿಯೂರಪ್ಪ ಜೇವರ್ಗಿ ಆಗಮಿಸಿದ್ದರು. ಹೆಲಿಕಾಪ್ಟರ್​ ಮೂಲಕ ಬಂದ ಬಿಎಸ್​ ಯಡಿಯೂರಪ್ಪ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​ನಲ್ಲಿ ಕಾಪ್ಟರ್​ ಲ್ಯಾಂಡ್​​ ಆಗುವ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿವೆ. ತಕ್ಷಣ ಎಚ್ಚೆತ್ತ ಪೈಲೆಟ್‌ ಹೆಲಿಕಾಪ್ಟರ್​ನ್ನು ಲ್ಯಾಂಡ್​ ಮಾಡದೆ ಬೇರೆಡೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು.

ಇದನ್ನೂ ಓದಿ: Underprepared Helipad: ಜೇವರ್ಗಿ ನಗರದ ಹೊರವಲಯದಲ್ಲಿ ಲ್ಯಾಂಡ್ ಆಗುವ ಮೊದಲು ಸಮಸ್ಯೆ ಎದುರಿಸಿದ ಬಿಎಸ್ ಯಡಿಯೂರಪ್ಪ ಹೆಲಿಕಾಪ್ಟರ್

ಹೆಲಿಪ್ಯಾಡ್ ಸುತ್ತ ಜಮೀನಿನನಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಾಕಿದ್ದರು. ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿವೆ. ಕೂಡಲೆ ಎಚ್ಚತ್ತ ಪೈಲೆಟ್ ಹೆಲಿಕಾಪ್ಟರ್​​ ಅನ್ನು ಟೇಕ್​ ಆಫ್​​ ಮಾಡಿದ್ದಾರೆ. ನಂತರ ಒಂದೆರಡು ಸುತ್ತು ಹೆಲಿಕಾಪ್ಟರ್​ನ್ನು ಆಕಾಶದಲ್ಲಿ ಹಾರಾಟ ನಡೆಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಪ್ಲಾಸ್ಟಿಕ್ ಚೀಲಗಳನ್ನು ತೆರವುಗೊಳಿಸಿ ಹೆಲಿಕಾಪ್ಟರ್ ಸುಗಮ ಲ್ಯಾಂಡ್​ಗೆ ನೆರವಾದರು. ಬಳಿಕ ಪೈಲೆಟ್ ಹೆಲಿಕಾಪ್ಟರ್ ಅನ್ನು ಲ್ಯಾಂಡ್​ ಮಾಡಿದ್ದರು. ಹೆಲಿಕ್ಯಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ತೂರಿಬಂದಿದ್ದರಿಂದ ಅಧಿಕಾರಿಗಳು ಮತ್ತು ಪೊಲೀಸರು ಕಕ್ಕಾಬಿಕ್ಕಿಯಾಗಿದ್ದರು.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ​​