ಪಿಎಸ್​ಐ ಆಗುವ ಛಲದಿಂದ ದೈಹಿಕ ಪರೀಕ್ಷೆಯಲ್ಲಿ 1.36 ನಿಮಿಷದಲ್ಲೇ 400 ಮೀಟರ್​​​​ ಓಡಿದ ಗರ್ಭಿಣಿ!

ಪಿಎಎಸ್ಐ ಆಗಲೇಬೇಕು ಎಂಬ ಛಲ ಹೊಂದಿರುವ ಅವರು, ನಿಗದಿತ ಸಮಯದೊಳಗೆ 400 ಮೀಟರ್ ಓಡಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪಿಎಸ್​ಐ ಆಗುವ ಛಲದಿಂದ ದೈಹಿಕ ಪರೀಕ್ಷೆಯಲ್ಲಿ 1.36 ನಿಮಿಷದಲ್ಲೇ 400 ಮೀಟರ್​​​​ ಓಡಿದ ಗರ್ಭಿಣಿ!
Follow us
TV9 Web
| Updated By: guruganesh bhat

Updated on:Aug 13, 2021 | 4:19 PM

ಕಲಬುರಗಿ: ಪಿಎಸ್ಐ ನೇಮಕಾತಿಯ ದೈಹಿಕ ಪರೀಕ್ಷೆಯ 400 ಮೀಟರ್ ಓಟವನ್ನು ಎರಡೂವರೆ ತಿಂಗಳಿನ ಗರ್ಭಿಣಿಯೋರ್ವರು 1.36 ನಿಮಿಷದಲ್ಲಿ ಓಡಿದ್ದಾರೆ. ಆಗಸ್ಟ್ 11ರಂದು ಕಲಬುರಗಿ ಡಿಆರ್ ಪರೇಡ್ ಮೈದಾನದಲ್ಲಿ ನಡೆದ ದೈಹಿಕ ಪರೀಕ್ಷೆ ವೇಳೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದ ಅಶ್ವಿನಿ ಕೋರೆ ಎಂಬ 24 ವರ್ಷದ ಮಹಿಳೆಯೇ ಈ ಸಾಧನೆ ಮಾಡಿದವರು.

ಪಿಎಎಸ್ಐ ಆಗಲೇಬೇಕು ಎಂಬ ಛಲ ಹೊಂದಿರುವ ಅವರು, ನಿಗದಿತ ಸಮಯದೊಳಗೆ 400 ಮೀಟರ್ ಓಡಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಿಯಮದ ಪ್ರಕಾರ 400 ಮೀಟರ್ ಓಟವನ್ನು 2 ನಿಮಿಷದೊಳಗೆ ಓಡಿ ಗುರಿ ತಲುಪಬೇಕಿತ್ತು. ಆದರೆ ಅಶ್ವಿನಿ ಅವರು ಕೇವಲ 1.36 ನಿಮಿಷದೊಳಗೇ ಓಡಿ ಸಾಧನೆ ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕದಲ್ಲಿ ಅಶ್ವಿನಿ ಕೋರೆ ಹುದ್ದೆಗೆ ಆಯ್ಕೆಯಾಗುವುದನ್ನು ತಪ್ಪಿಸಿಕೊಂಡಿದ್ದರು.   ಆದರೆ ಛಲ ಬಿಡದ ಅವರು ಮೂರನೇ  ಬಾರಿ ಪ್ರಯತ್ನಕ್ಕೆ ಕೈಹಾಕಿದ್ದರು. ಈ ಬಾರಿ ಪಿಎಸ್​ಐ ನೇಮಕಾತಿಯ ದೈಹಿಕ ಪರೀಕ್ಷೆ ನಡೆಯುವಾಗ ಅವರು ಗರ್ಭಿಣಿಯಾಗಿದ್ದರು. ಆದರೂ ಪಿಎಸ್​ಐ ಆಗುವ ಅಗಾಧ ಹಂಬಲ ಹೊಂದಿದ್ದ ಅಶ್ವಿನಿ ಇದೀಗ ಮತ್ತೊಮ್ಮೆ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಏಕೆ ಈ ಸಾಹಸ? ಅಶ್ವಿನಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.  ಅವರಿಗೆ ಪಿಎಸ್ ಐ ಆಗಲೇಬೇಕು ಅನ್ನೋ ಕನಸಿದೆಯಂತೆ. ಹೀಗಾಗಿ ಈ ಹಿಂದೆ ಎರಡು ಬಾರಿ ಕೂಡಾ ದೈಹಿಕ ಪರೀಕ್ಷೆ ಪಾಸಾಗಿ ಲಿಖಿತ ಪರೀಕ್ಷೆಯನ್ನು ಕೂಡಾ ಬರೆದಿದ್ದರಂತೆ. ಆದರೆ ಕಡಿಮೆ ಅಂಕದಲ್ಲಿ ಪಿಎಸ್ ಐ ಹುದ್ದೆ ಕೈ ತಪ್ಪಿದೆ. ಈ ಬಾರಿ ಕೂಡಾ ಅರ್ಜಿ ಹಾಕಿದ್ದರು. ಆದ್ರೆ ಈ ಬಾರಿಯಾದರು ಕೂಡಾ ಪಿಎಸ್ ಐ ಆಗಲೇಬೇಕು ಅಂತ ಅಶ್ವಿನಿ ಅನೇಕ ತಿಂಗಳಿಂದ ಓದಿನಲ್ಲಿ ತೊಡಗಿದ್ದಾರಂತೆ. ಆದ್ರೆ ಇದೇ ಸಮಯದಲ್ಲಿ ಅವರು ಗರ್ಭಿಣಿ ಕೂಡಾ ಆಗಿದ್ದಾರೆ. ಗರ್ಭಿಣಿಯಾಗಿದ್ದರಿಂದ ದೈಹಿಕ ಪರೀಕ್ಷೆಗೆ ವಿನಾಯಿತಿ ಏನಾದ್ರು ಸಿಗುತ್ತಾ ಅಂತ ಅಧಿಕಾರಿಗಳ ಬಳಿ ಕೇಳಿದ್ದಾರೆ. ಆದರೆ ದೈಹಿಕ ಪರೀಕ್ಷೆಯಲ್ಲಿ ಪಾಸಾಗದೇ ಇದ್ದರೆ ಲಿಖಿತ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗೋದಿಲ್ಲ. ಗರ್ಭಿಣಿಯರಿಗೆ ವಿನಾಯತಿ ಕೂಡಾ ಇಲ್ಲಾ ಅಂತ ಹೇಳಿದ್ದರಂತೆ. ಹೀಗಾಗಿ ತನ್ನ ಜೀವನದ ಪರಮೋಚ್ಚ ಕನಸಾದ ಪಿಎಸ್ ಐ ಹುದ್ದೆಯನ್ನು ಪಡೆಯಲು ಅಶ್ವಿನಿ ದೈಹಿಕ ಪರೀಕ್ಷೆಗೆ ಹಾಜರಾಗಲು ನಿರ್ಧಾರ ಮಾಡಿದ್ದರಂತೆ. ತಾನು ಹತ್ತು ವಾರಗಳ ಗರ್ಭಿಣಿಯಾಗಿದ್ದರಿಂದ, ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ಓಡಬಹುದೆ ಅಂತ ವೈದ್ಯರನ್ನು ಕೇಳಿದಾಗ, ರಿಸ್ಕ್ ತಗೆದುಕೊಳ್ಳದೇ ಇರುವದು ಉತ್ತಮ ಅಂತ ವೈದ್ಯರು ಕೂಡಾ ಹೇಳಿದ್ದರಂತೆ. ಆದರೆ ಅವಕಾಶ ಬಿಟ್ಟರೆ ಮತ್ತೆ ಅವಕಾಶ ಸಿಗೋದು ಕಷ್ಟ ಅಂತ ತಿಳಿದ ಅಶ್ವಿನಿ, ಏನಾದರೂ ಆಗಲಿ ಅಂತ ದೈಹಿಕ ಪರೀಕ್ಷೆಗೆ ಹಾಜರಾಗಿದ್ದಾರೆ.

ಈ ಕುರಿತು ಟಿವಿ9 ಕನ್ನಡಿ ಡಿಜಿಟಲ್ ಜತೆ ಮಾತನಾಡಿದ ಅಶ್ವಿನಿ ಕೋರೆ, ‘ ಪಿಎಸ್ ಐ ಆಗಬೇಕು ಅನ್ನೋದು ನನ್ನ ಬಹು ದಿನಗಳ ಕನಸಾಗಿದೆ. ಅದಕ್ಕಾಗಿ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದೇನೆ.. ಈ ಬಾರಿ ಗರ್ಭಿಣಿಯಾದರೂ ಕೂಡಾ ನಾಲ್ಕು ನೂರು ಮೀಟರ್ ಓಟವನ್ನು ಓಡಿ, ದೈಹಿಕ ಪರೀಕ್ಷೆ ಪಾಸಾಗಿದ್ದೇನೆ. ನಾನು ಈ ಹಿಂದೆ ಎರಡು ಬಾರಿ ದೈಹಿಕ ಪರೀಕ್ಷೆ ಪಾಸಾಗಿದ್ದೆ. ಹೀಗಾಗಿ ಗರ್ಭಿಣಿಯಾಗಿದ್ದರಿಂದ ದೈಹಿಕ ಪರೀಕ್ಷೆಯಲ್ಲಿ ನಾಲ್ಕು ನೂರು ಮೀಟರ್ ಓಟಕ್ಕೆ ವಿನಾಯತಿ ನೀಡುವಂತೆ ಕೇಳಿದ್ದೆ. ಆದ್ರೆ ನಿಯಮಗಳ ಪ್ರಕಾರ ಕಡ್ಡಾಯವಾಗಿ ನಾಲ್ಕು ನೂರು ಮೀಟರ್ ಓಟದಲ್ಲಿ ಪಾಸಾಗಲೇಬೇಕಾಗಿದ್ದರಿಂದ ಅನಿವಾರ್ಯವಾಗಿ ಓಟವನ್ನು ಓಡಬೇಕಾಯಿತು. ಸದ್ಯ ನನಗೆ ಯಾವುದೇ ತೊಂದರೆಯಾಗಿಲ್ಲ‘ ಎಂದು ತಿಳಿಸಿದರು.

ಟಿವಿ 9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿದ ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬಿಕರ್, ‘ಗರ್ಭಿಣಿ ಮಹಿಳೆ ನಾಲ್ಕು ನೂರು ಮೀಟರ ಓಟ ಓಡಿದ್ದು ನಮ್ಮ ಗಮನಕ್ಕೆ ಬಂದಿಲ್ಲ. ಸ್ಪರ್ಧಾಳುಗಳು ಗರ್ಭಿಣಿ ಅನ್ನೋದನ್ನು ಮುಚ್ಚಿಡುತ್ತಾರೆ. ಹೀಗಾಗಿ ಅಶ್ವಿನಿ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡು, ನಾಲ್ಕು ನೂರು ಮೀಟರ್ ಓಡಿದ್ದು ಕೂಡಾ ತಮ್ಮ ಗಮನಕ್ಕೆ ಬಂದಿಲ್ಲ’ ಎಂದರು.

ವಿಶೇಷ ವರದಿ: ಸಂಜಯ್ ಕಲಬುರಗಿ

ಇದನ್ನೂ ಓದಿ: 

ಕಲಬುರಗಿ: ನಾಗರ ಪಂಚಮಿ ಹಬ್ಬದ ದಿನ ಕೊಬ್ಬರಿ ಕುಬ್ಬಸ ನೀಡಿ, ಜೋಕಾಲಿ ಆಡುವುದು ವಾಡಿಕೆ

ಉಗ್ರರಿಂದ ಗುಂಡಿನ ದಾಳಿ: ಬಾಂಗ್ಲಾ ಗಡಿಯಲ್ಲಿ ಕಲಬುರಗಿ ಜಿಲ್ಲೆಯ ಯೋಧ ಹುತಾತ್ಮ

(Kalaburagi Pregnant woman runs the 400m in 1.36 minute in PSI Recruitment Physical Exam)

Published On - 3:51 pm, Fri, 13 August 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ