AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರಿಂದ ಗುಂಡಿನ ದಾಳಿ: ಬಾಂಗ್ಲಾ ಗಡಿಯಲ್ಲಿ ಕಲಬುರಗಿ ಜಿಲ್ಲೆಯ ಯೋಧ ಹುತಾತ್ಮ

ಯೋಧರು ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ತ್ರಿಪುರಾದ ಧಲಾಯಿ ಪ್ರದೇಶದಲ್ಲಿ ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್​ಎಫ್​ ಯೋಧ ರಾಜಕುಮಾರ ಎಂ.ಮಾವಿನ್ ಮೃತಪಟ್ಟಿದ್ದಾರೆ.

ಉಗ್ರರಿಂದ ಗುಂಡಿನ ದಾಳಿ: ಬಾಂಗ್ಲಾ ಗಡಿಯಲ್ಲಿ ಕಲಬುರಗಿ ಜಿಲ್ಲೆಯ ಯೋಧ ಹುತಾತ್ಮ
ಬಿಎಸ್​ಎಫ್​ ಯೋಧ ರಾಜಕುಮಾರ ಎಂ.ಮಾವಿನ್
TV9 Web
| Updated By: ganapathi bhat|

Updated on: Aug 03, 2021 | 10:20 PM

Share

ಕಲಬುರಗಿ: ಬಾಂಗ್ಲಾದೇಶದ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಕಲಬುರಗಿ ಜಿಲ್ಲೆಯ ಯೋಧ ಹುತಾತ್ಮರಾದ ದುಃಖಕರ ಘಟನೆ ಇಂದು (ಆಗಸ್ಟ್ 3) ನಡೆದಿದೆ. ಬಾಂಗ್ಲಾ ಗಡಿಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರಿನ ರಾಜಕುಮಾರ ಎಂ. ಮಾವಿನ್ ಎಂಬ ಯೋಧ ಹುತಾತ್ಮರಾಗಿದ್ದಾರೆ.

ಯೋಧರು ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ತ್ರಿಪುರಾದ ಧಲಾಯಿ ಪ್ರದೇಶದಲ್ಲಿ ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್​ಎಫ್​ ಯೋಧ ರಾಜಕುಮಾರ ಎಂ.ಮಾವಿನ್ ಮೃತಪಟ್ಟಿದ್ದಾರೆ. ಯೋಧನ ಪಾರ್ಥಿವ ಶರೀರ ಗುರುವಾರ ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ. ಚಿಂಚನಸೂರಿನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಯೋಧ ಸಾವು ಜಮ್ಮು ಕಾಶ್ಮೀರದ ಶ್ರೀನಗರದ ಕುಪ್ಪಾಡನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಯೋಧ ಅನಾರೋಗ್ಯದಿಂದ ಕೊನೆಯುಸಿರೆಳೆದ ಘಟನೆ ಜುಲೈ 29 ರಂದು ನಡೆದಿತ್ತು. 41 ವರ್ಷದ ಯೋಧ ಮಹಾಂತೇಶ್ ದಾಸಪ್ಪನವರ ನಿಧನರಾಗಿದ್ದರು. ಮಹಾಂತೇಶ್ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದವರು. ಯೋಧ ಎಮ್ಇಜಿ 2 ಇಂಜಿನಿಯರ್ ಬಟಾಲಿಯನ್ ರೆಜಿಮೆಂಟ್​ನಲ್ಲಿದ್ದರು. ಮಹಾಂತೇಶ್ 2000 ಇಸವಿಯಲ್ಲಿ ಭಾರತೀಯ ಸೇನೆಗೆ ಸೇರಿದ್ದರು.

ಭಾರತೀಯ ಸೇನೆಯಲ್ಲಿ ಸುಮಾರು 22 ವರ್ಷ ಸೇವೆ ಸಲ್ಲಿಸಿದ ಯೋಧ, ಪತ್ನಿ ದ್ರಾಕ್ಷಾಯಿಣಿ ಮತ್ತು ಇಬ್ಬರು ಮಕ್ಕಳಾದ 17 ವರ್ಷದ ಸಹನಾ, 10 ವರ್ಷದ ಸಾಯಿ ಪ್ರಜ್ವಲ್​ನನ್ನ ಅಗಲಿದ್ದರು. ಇನ್ನೇನು ನಾಯಕ್ ಸುಬೇದಾರ್ ಪ್ರಮೋಷನ್ ಆಗುವುದಿತ್ತು. ಆದರೆ ಅದಕ್ಕೂ ಮುನ್ನ ಇಹಲೋಕ ತ್ಯಜಿಸಿದ್ದರು. ಜುಲೈ 24 ರಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದರು.

ಇದನ್ನೂ ಓದಿ: Kargil Vijay Diwas: ಕಾರ್ಗಿಲ್​ ಯುದ್ಧದ ಗೆಲುವಿಗೆ 22 ವರ್ಷ; ಭಾರತದ ಧೀರ ಯೋಧರ ಸಾಹಸಗಾಥೆಯ ಕಿರು ಪರಿಚಯ ಇಲ್ಲಿದೆ

ಕಾಶ್ಮೀರದಲ್ಲಿ ಮುಂಜಾನೆ ನಡೆದ ಎನ್​ಕೌಂಟರ್​​; ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರಿಗೆ ಗಾಯ

(BSF Border Security Force Soldier died Firing with Terrorists in Bangla Border)

ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ