ಕಲಬುರಗಿ, ನವೆಂಬರ್ 26: 11 ತಿಂಗಳು ಶಾಲೆಗೆ ಗೈರಾಗಿದ್ದರೂ ಶಿಕ್ಷಕ (teacher) ನಿಗೆ ವೇತನ ಬಿಡುಗಡೆ ಮಾಡಿರುವ ಬಿಇಒ ಹಾಗೂ ಇಬ್ಬರು ಎಫ್ಡಿಎಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಬಿಇಒ ಆಗಿದ್ದ ಚಿತ್ರಶೇಖರ ದೇಗುಲಮಡಿ, ಎಫ್ಡಿಎಗಳಾದ ಲೋಕಪ್ಪ ಜಾಧವ್, ಗುರುರಾಜರಾವ್ ಕುಲಕರ್ಣಿಯನ್ನ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಲಾಗಿದೆ.
2011ರ ಅಕ್ಟೋಬರ್ನಿಂದ 2012ರ ಆಗಸ್ಟ್ವರೆಗೂ ಶಾಲೆಗೆ ಗೈರಾಗಿದ್ದರು. ಶಾಲೆಗೆ ಸತತ ಗೈರಾಗಿದ್ದ ಶಿಕ್ಷಕ ರೇಣುಕಾಚಾರ್ಯಗೆ ವೇತನ ನೀಡಲಾಗಿತ್ತು. ಶಿಕ್ಷಕ ರೇಣುಕಾಚಾರ್ಯ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಸಹೋದರಾಗಿದ್ದು, ಜಿಲ್ಲೆಯ ಆಳಂದ ತಾಲೂಕಿನ ಅಂಬಲಗಾ ಪ್ರಾಥಮಿಕ ಶಾಲೆ ಶಿಕ್ಷಕ. ಇಲಾಖಾ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಹಾವೇರಿ: ನಗರದ ಲಯನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಕಳೆದ ಮೂರುವರೆ ತಿಂಗಳಿನಿಂದ ವೇತನವಾಗಿಲ್ಲವೆಂದು ಶಾಲೆಯ ಮುಂದೆ ಇತ್ತೀಚೆಗೆ ಪ್ರತಿಭಟನೆ ಮಾಡಿದ್ದರು. ಶಾಲೆಯ ಚೇರಮನ್, ಸಿಬ್ಬಂದಿ ಹಾಗೂ ಶಿಕ್ಷಕರ ಜೊತೆಗೆ ಅನುಚಿತ ವರ್ತನೆ ಖಂಡಿಸಿ ಶಿಕ್ಷಕರು ಶಾಲೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ಇದನ್ನೂ ಓದಿ: ಗುಲ್ಬರ್ಗ ವಿವಿಯಿಂದ ಮತ್ತೊಂದು ಎಡವಟ್ಟು: ಪರೀಕ್ಷಾ ಮೌಲ್ಯಮಾಪನದಲ್ಲಿ ಅಕ್ರಮ ಆರೋಪ
84 ಕ್ಕೂ ಅಧಿಕ ಶಿಕ್ಷಕರಿಗೆ ವೇತನ ಆಗಿಲ್ಲ. ಆಡಳಿಯ ಮಂಡಳಿ ಹಾಗೂ ಸದಸ್ಯರ ತಿಕ್ಕಾಟದಲ್ಲಿ ನಮ್ಮ ಬಡಪಾಯಿ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಬಿಇಓ ಮೌನೇಶ ಬಡಿಗೇರ್ ಮತ್ತು ಕಾರ್ಮಿಕ ಇಲಾಖೆಯ ಉಪನಿರ್ದೇಶಕರು ಆಗಮಿಸಿ, ಶಿಕ್ಷಕರ ಜೊತೆಗೆ ಮಾತುಕತೆ ನಡೆಸಿದ್ದರು.
ಜೊತೆಗೆ ಶಾಲೆಯ ಚೇರಮನ್ ಶಿವಬಸಪ್ಪ ಮುದಗಲ್ ಕರೆಸಿದ್ದರು. ಚೇರಮನ್ ಶಾಲೆಯ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಅಧ್ಯಕ್ಷನ್ನ ತರಾಟೆಗೆ ತೆಗೆದುಕೊಂಡಿದ್ದರು.
ರಾಯಚೂರು: ಹೊಸ ನೇಮಕಾತಿಯಾಗಿ ಸೇವೆ ಸಲ್ಲಿಸಲು ತುದಿಗಾಲಲ್ಲಿ ನಿಂತಿರುವ ನೂರಾರು ಶಿಕ್ಷಕರ ಫೈಲ್ಗಳೇ ಮಿಸ್ಸಿಂಗ್ ಆಗಿವೆ ಎನ್ನುವ ಆರೋಪ ಕೇಳಿಬಂದಿದೆ. ಈ ಮಧ್ಯೆ ಆರ್ಡರ್ ಕಾಪಿ ಪಡೆಯಲು ಶಿಕ್ಷಕರು ಪರದಾಡುತ್ತಿರುವ ಪರಿಸ್ಥಿತಿ ರಾಯಚೂರಿನಲ್ಲಿ ಕಂಡುಬಂದಿದೆ. ರಾಯಚೂರು ಜಿಲ್ಲೆಯೊಂದರಲ್ಲೇ ಸುಮಾರು 741 ಜನ ಹೊಸತಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಬಿಸಿಯೂಟದ ಸಾಂಬರ್ ಪಾತ್ರೆಗೆ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ ಪ್ರಕರಣ: ಶಾಲಾ ಮುಖ್ಯ ಶಿಕ್ಷಕಿ ಅಮಾನತು
ಇದೇ ನ. 6 ರಿಂದ ಹೊಸ ಶಿಕ್ಷಕರಿಗೆ ಕೌನ್ಸಲಿಂಗ್ ಕರೆದು ಆರ್ಡರ್ ಕಾಪಿ ಪಡೆಯಲು ಸೂಚಿಸಲಾಗಿತ್ತು. ಹೀಗಾಗಿ ಭವಿಷ್ಯದ ಆಸೆ ಹೊತ್ತು ಆರ್ಡರ್ ಕಾಪಿ ಪಡೆಯಲು ಹೊಸದಾಗಿ ನೇಮಕಗೊಂಡಿರುವ ಶಿಕ್ಷಕ ಶಿಕ್ಷಕಿಯರು ರಾಯಚೂರು ನಗರದ ಡಿಡಿಪಿಐ ಕಚೇರಿಗೆ ಆಗಮಿಸಿದ್ದರು. ಆದೇಶದಲ್ಲಿ ಸೂಚಿಸಲಾದಂತೆ ನಿಯಮದನುಸಾರದಲ್ಲೇ ಕೌನ್ಸಲಿಂಗ್ ನಡೆಯುತ್ತಿದೆ.
ಒಂದೇ ದಿನದಲ್ಲಿ ಸಿಗಬೇಕಿದ್ದ ಆರ್ಡರ್ ಕಾಪಿ ವಾರವಾದರೂ ಸಿಗ್ತಿಲ್ಲ. ಹತ್ತು ದಿನವಾದರೂ ಸಿಗ್ತಿಲ್ಲವಂತೆ. ಆರ್ಡರ್ ಪ್ರತಿ ಪಡೆಯಲು ಬರೋರು ಬೆಳಿಗ್ಗೆಯಿಂದ ಸಂಜೆವರೆಗೂ ಡಿಡಿಪಿಐ ಕಚೇರಯಲ್ಲೇ ಠಿಕಾಣಿ ಹೂಡಿದರು ಏನೂ ಪ್ರಯೋಜನವಾಗಿಲ್ಲ. ಅಲ್ಲಿರುವ ಸಿಬ್ಬಂದಿ ಬಹುತೇಕರಿಂದ ಫೈಲ್ ಮಿಸ್ಸಿಂಗ್ ಅಂತ ಹೇಳ್ತಿದ್ದಾರಂತೆ. ಇದರಿಂದ ಹೊಸದಾಗಿ ನೇಮಕಗೊಂಡ ಶಿಕ್ಷಕರು ಕಂಗಾಲಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:06 pm, Sun, 26 November 23