ಗುಲ್ಬರ್ಗ ವಿವಿಯಿಂದ ಮತ್ತೊಂದು ಎಡವಟ್ಟು: ಪರೀಕ್ಷಾ ಮೌಲ್ಯಮಾಪನದಲ್ಲಿ ಅಕ್ರಮ ಆರೋಪ
ಗುಲಬರ್ಗಾ ವಿಶ್ವವಿದ್ಯಾಲಯ ಒಂದಲ್ಲ ಒಂದು ಗೊಂದಲದಿಂದ ಹೆಸರಾಗಿದೆ. ಸದ್ಯ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಒಂದು ತಿಂಗಳ ಹಿಂದೆ ನಡೆಬೇಕಿದ್ದ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ. ಮೌಲ್ಯಮಾಪನ ಕುಲ ಸಚಿವರು ಡೆಡ್ ಲೈನ್ ನೀಡಿದ್ದಕ್ಕೆ ಕಣ್ಣು ಮುಚ್ಚಿ, ಹಗಲು ರಾತ್ರಿ ಅಡ್ಡಾತಿಡ್ಡಿ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಕಲಬುರಗಿ, ನವೆಂಬರ್ 24: ಗುಲಬರ್ಗಾ ವಿಶ್ವವಿದ್ಯಾಲಯ (gulbarga university) ಪರೀಕ್ಷಾ ಮೌಲ್ಯ ಮಾಪನದಲ್ಲಿ ಭಾರೀ ಅಕ್ರಮ ಕೇಳಿಬಂದಿದೆ. ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಪದವಿ 6ನೇ ಸೆಮಿಸ್ಟರ್ ಪರೀಕ್ಷೆ ಬರೆದ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ವಿಚಾರದಲ್ಲಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ನಿಯಮಾವಳಿ ಉಲ್ಲಂಘಿಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡಿದ್ದು, ಒಬ್ಬೊಬ್ಬ ವ್ಯಾಲ್ಯೂ ವೇಟರ್ಗೆ 10ಕ್ಕೂ ಹೆಚ್ಚು ಉತ್ತರ ಪತ್ರಿಕೆಗಳನ್ನು ಕೊಟ್ಟು ರಿಜಿಸ್ಟ್ರಾರ್ ಮೌಲ್ಯ ಮಾಪನ ನಡೆಸಿದ್ದಾರೆ. ಇದು ಟಿವಿ9 ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕಳೆದ ಮೂರು ದಿನಗಳಿಂದ ಪದವಿ ವಿದ್ಯಾರ್ಥಿಗಳ ಆರನೇ ಸೆಮ್ ನ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಆರನೇ ಸೆಮ್‌ನ ಪರೀಕ್ಷೆ ಮೌಲ್ಯಮಾಪನ ನಡೆಯುತ್ತಿದೆ. ಆದರೆ ಕಳೆದ ಒಂದು ತಿಂಗಳ ಹಿಂದೆ ನಡೆಯಬೇಕಿದ್ದ ಮೌಲ್ಯಮಾಪನ ತಡವಾಗಿ ಪರೀಕ್ಷೆ ನಡೆದ ಕಾರಣಕ್ಕೆ ತಡವಾಗಿ ಮೌಲ್ಯಮಾಪನ ನಡೆಯುತ್ತಿದೆ.
ಇದನ್ನೂ ಓದಿ: ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕನ ಕಾಮಕೇಳಿ ಆಡಿಯೋ ವೈರಲ್
ಉನ್ನತ ಶಿಕ್ಷಣಕ್ಕೆ ದಾಖಲಾತಿ ಪಡೆಯಬೇಕಾಗದ ಕಾರಣಕ್ಕೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕಾರ್ಯವೈಕರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದೆ ಕಾರಣಕ್ಕೆ ಆತುರ ಆತುರದಲ್ಲಿ ಮೌಲ್ಯಮಾಪನ ಮಾಡಿ ಫಲಿತಾಂಶ ಕೊಡಲು ವಿಶ್ವವಿದ್ಯಾಲಯ ಮುಂದಾಗಿದೆ. ಇದೆ ಕಾರಣಕ್ಕೆ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲ ಸಚಿವರು ಮೂರು ದಿನಗಳ ಒಳಗಾಗಿ ಮೌಲ್ಯಮಾಪನ ಮುಗಿಸಿ ಫಲಿತಾಂಶ ಕೊಡಲು ಮುಂದಾಗಿದ್ದಾರೆ.
ಇದೆ ಕಾರಣಕ್ಕೆ ಎರಡನೇ ಮತ್ತು ನಾಲ್ಕನೇ ಸೆಮ್ ಮೌಲ್ಯಮಾಪನ ತಡೆ ಹಿಡಿದು ಕೇಲವ ಆರನೇ ಸೆಮ್ ಮೌಲ್ಯಮಾಪನ ಶುರು ಮಾಡಿದ್ದಾರೆ. ಅದು ಕೂಡ ಮೂರು ದಿನಗಳ ಒಳಗಾಗಿ ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಮೌಲ್ಯಮಾಪನ ಮೂರು ದಿನಗಳ ಒಳಗೆ ಮುಗಿಸುವಂತಡ ಮೌಲ್ಯಮಾಪನ ಕುಲ ಸಚಿವರು ಆದೇಶ ಮಾಡಿದ್ದಾರೆ.
ನೂರಾರು ಮೌಲ್ಯಮಾಪಕರರು ಟಾರ್ಗೆಟ್ ಮುಗಿಸಲು ಮನಸ್ಸಿಗೆ ಬಂದ ಹಾಗೆ ಮೌಲ್ಯಮಾಪನ ಮಾಡುತ್ತಿದ್ದಾರೆ. ಮದ್ಯೆ ರಾತ್ರಿವರೆಗೆ ಮೌಲ್ಯಮಾಪನ ಕೇಂದ್ರದಲ್ಲಿ ಕುಳಿತು ಮನಸ್ಸಿಗೆ ಬಂದ ಹಾಗೆ ಮೌಲ್ಯಮಾಪನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶಾಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಒತ್ತಾಯಪೂರ್ವಕ ಮೊಟ್ಟೆ ತಿನ್ನಿಸಿದ ಶಿಕ್ಷಕ, ಕ್ರಮಕ್ಕೆ ಪೋಷಕರ ಆಗ್ರಹ
ನಿಯಮದ ಪ್ರಕಾರ ಒಬ್ಬ ಮೌಲ್ಯಮಾಪಕ ಎರಡು ಬಂಡಲ್ಗಳನ್ನ ಮಾತ್ರ ಮೌಲ್ಯಮಾಪನ ಮಾಡಬೇಕು. ಆದರೆ ಇಲ್ಲಿ ಮನಸ್ಸಿಗೆ ಬಂದ ಹಾಗೆ ನಡೆಯುತ್ತಿದೆ. ಇದೆ ಕಾರಣ ಅಂದರೆ ಬೇಗ ಬೇಗ ಮುಗಿಸಿ ಫಲಿತಾಂಶ ಕೊಡಬೇಕು ಎನ್ನೋದು ಒಂದು ಗುರಿಯಿದೆ. ಯಾರು ಹೇಗೆ ಪರೀಕ್ಷೆ ಬರೆದಿದ್ದಾರೆ ಅಂತ ನೋಡುವ ಬದಲು ಕಣ್ಣು ಮುಚ್ಚಿ ವ್ಯಾಲುವೇಷನ್ ಮಾಡುತ್ತಿದ್ದಾರೆ.
500 ಅಧಿಕ ಮೌಲ್ಯಮಾಪಕರು ಸುಮಾರು 30 ಸಾವಿರ ಅಧಿಕ ವಿದ್ಯಾರ್ಥಿಗಳ 2.5 ಲಕ್ಷಕ್ಕೂ ಅಧಿಕ ಉತ್ತರ ಪತ್ರಿಕೆಗಳನ್ನ ಮೌಲ್ಯಮಾಪನ ಮಾಡುತ್ತಿದ್ದಾರೆ ಅದು ಕೂಡ ಮೂರು ದಿನಗಳ ಒಳಗೆ ಮುಗಿಸುವ ಆದೇಶ ಮೌಲ್ಯಮಾಪನ ಕುಲ ಸಚಿವರಿಂದ ಬಂದಿದೆ. ಒಬ್ಬ ಮೌಲ್ಯಮಾಪಕ ಒಂದು ದಿನಕ್ಕೆ ಎರಡು ಬಂಡಲ್ ಮಾತ್ರ ಮೌಲ್ಯಮಾಪನ ಮಾಡಬೇಕು ಎನ್ನುವ ವಿಶ್ವವಿದ್ಯಾಲಯ ನಿಯಮವಿದೆ. ಆದರೆ ಇಲ್ಲಿ ಒಬ್ಬೊಬ್ಬ ಮೌಲ್ಯಮಾಪಕ ಬರೊಬ್ಬರಿ 10 ಕ್ಕೂ ಅಧಿಕ ಬಂಡಲ್ಗಳನ್ನ ಮೌಲ್ಯಮಾಪನ ಮಾಡುತ್ತಿದ್ದಾರೆ. ಇದು ವಿಶ್ವವಿದ್ಯಾಲಯದ ನಿಯಮದ ವಿರುದ್ಧವಾಗಿದೆ.
ಹಗಲು ರಾತ್ರಿ ಮೌಲ್ಯಮಾಪನ
ಅಷ್ಟೇ ಅಲ್ದೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮಾತ್ರ ಮೌಲ್ಯಮಾಪನ ಮಾಡಬೇಕು ಆದರೆ ಇಲ್ಲಿ ಹಗಲು ಮಾಡುವ ಕೆಲಸವನ್ನ ರಾತ್ರಿ ಮಾಡಲಾಗುತ್ತಿದೆ. ಬೇರೆ ಬೇರೆ ಜಿಲ್ಲೆಗಳಿಂದ ಮೌಲ್ಯಮಾಪಕರನ್ನ ಕರಿಸುವ ಬದಲು ಕಡಿಮೆ ಮೌಲ್ಯಮಾಪಕರನ್ನ ಕರೆಸಿದ ರಾತ್ರಿ ಎಲ್ಲಾ ಮೌಲ್ಯಮಾಪನ ಮಾಡಿಸಲಾಗುತ್ತಿದೆ. ತಡ ರಾತ್ರಿವರೆಗೆ ಮೌಲ್ಯಮಾಪನ ಮಾಡುವುದ್ದಕ್ಕೆ ಬೇಗ ಫಲಿತಾಂಶ ಕೊಡುವ ಉದ್ದೇಶವಾಗಿದೆ. ಇದೆ ಕಾರಣಕ್ಕೆ ನಿಯಮ ಮೀರಿ ಮೌಲ್ಯಮಾಪನ ಮಾಡಿಸಲಾಗುತ್ತಿದೆ ಅಂತ ಖುದ್ದು ಮೌಲ್ಯಮಾಪನ ಕುಲ ಸಚಿವರೆ ಒಪ್ಪಿಕೊಂಡಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ. ದುಡ್ಡು ಪಡೆದು ತಮಗೆ ಬೇಕಾದವರಿಗೆ ಹೆಚ್ಚು ಅಂಕ ಕಾಡ್ತಾಯಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಉನ್ನತ ಶಿಕ್ಷಣ ಸಚಿವರು ಇತ್ತ ಗಮನ ಹರಿಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Fri, 24 November 23