AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಮಹಾನಗರ ಪಾಲಿಕೆ ಮೇಯರ್ ಚುನಾವಣೆ; ಕಾಂಗ್ರೆಸ್ ಅರ್ಜಿಯನ್ನು ಎತ್ತಿಹಿಡಿದ ಹೈಕೋರ್ಟ್

ಬಿಜೆಪಿ ಅಧಿಕಾರಕ್ಕೆ ಬರಲು ಐವರ ಹೆಸರನ್ನು ಸೇರಿಸಿತ್ತು. ಪರಿಷತ್​ನ ಐವರು ಸದಸ್ಯರ ಹೆಸರನ್ನು ಬಿಜೆಪಿ ಸೇರಿಸಿತ್ತು. ಕಲಬುರಗಿ ಜಿಲ್ಲೆಗೆ ಸಂಬಂಧ ಇಲ್ಲದಿದ್ದವರ ಹೆಸರು ಸೇರಿಸಿತ್ತು. ಮತದಾರರ ಪಟ್ಟಿಯಲ್ಲಿ ಐವರ ಹೆಸರು ಸೇರಿಸಿದ್ದ ಬಿಜೆಪಿ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್​​ ಮೊರೆಹೋಗಿತ್ತು.

ಕಲಬುರಗಿ: ಮಹಾನಗರ ಪಾಲಿಕೆ ಮೇಯರ್ ಚುನಾವಣೆ; ಕಾಂಗ್ರೆಸ್ ಅರ್ಜಿಯನ್ನು ಎತ್ತಿಹಿಡಿದ ಹೈಕೋರ್ಟ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 04, 2022 | 8:20 PM

Share

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಸಂಬಂಧಿಸಿ ಹಳೆ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಆದೇಶ ನೀಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಅರ್ಜಿಯನ್ನು ಕಲಬುರಗಿ ಹೈಕೋರ್ಟ್ ಎತ್ತಿ ಹಿಡಿದಿದೆ. ಕಲಬುರಗಿ ಹೈಕೋರ್ಟ್ ನ್ಯಾ. ಇಂದರೇಶ್‌ ಪೀಠ ಆದೇಶ ನೀಡಿದೆ. ಹೈಕೋರ್ಟ್​ ಆದೇಶದಿಂದ ಬಿಜೆಪಿ ನಾಯಕರಿಗೆ ಹಿನ್ನಡೆ ಉಂಟಾಗಿದೆ.

63 ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಆದೇಶ ನೀಡಲಾಗಿದೆ. ನವೆಂಬರ್​ನಲ್ಲಿ ಹೊರಡಿಸಿದ್ದ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವಂತೆ ಹೈಕೋರ್ಟ್​​ನಿಂದ ಸೂಚನೆ ಲಭಿಸಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಐವರ ಹೆಸರನ್ನು ಸೇರಿಸಿತ್ತು. ಪರಿಷತ್​ನ ಐವರು ಸದಸ್ಯರ ಹೆಸರನ್ನು ಬಿಜೆಪಿ ಸೇರಿಸಿತ್ತು. ಕಲಬುರಗಿ ಜಿಲ್ಲೆಗೆ ಸಂಬಂಧ ಇಲ್ಲದಿದ್ದವರ ಹೆಸರು ಸೇರಿಸಿತ್ತು. ಮತದಾರರ ಪಟ್ಟಿಯಲ್ಲಿ ಐವರ ಹೆಸರು ಸೇರಿಸಿದ್ದ ಬಿಜೆಪಿ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್​​ ಮೊರೆಹೋಗಿತ್ತು.

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಹಳೆ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಆದೇಶ ನೀಡಲಾಗಿದೆ. ಕಲಬುರಗಿ ಹೈಕೋರ್ಟ್ ಕಾಂಗ್ರೆಸ್ ಅರ್ಜಿ ಎತ್ತಿ ಹಿಡಿದ ಹಿನ್ನೆಲೆ ಬಿಜೆಪಿ ನಾಯಕರಿಗೆ ಹಿನ್ನಡೆ ಉಂಟಾಗಿದೆ. ಈ ಕಾರಣದಿಂದ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಬಿಜೆಪಿಯ ಪರ ವಕೀಲರು ನಾಳೆ ಮೇಲ್ಮನವಿ ಸಲ್ಲಿಸಲಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಹಳೆ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಆದೇಶ ಹಿನ್ನೆಲೆ ಕಲಬುರಗಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಒಂದು ತಿಂಗಳೊಳಗೆ ಹೊಸದಾಗಿ ಚುನಾವಣೆ ನಡೆಸಲು ಸೂಚನೆ

ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರವಾಗಿ ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ನಾಳೆ (ಫೆಬ್ರವರಿ 5) ನಗರ ಪಾಲಿಕೆ ಮೇಯರ್ ಆಯ್ಕೆ ಚುನಾವಣೆ ನಡೆಯಲ್ಲ. ಹೈಕೋರ್ಟ್​ ಆದೇಶದಂತೆ ನಗರ ಪಾಲಿಕೆ ಚುನಾವಣೆ ಕ್ಯಾನ್ಸಲ್ ಆಗಿದೆ. ಒಂದು ತಿಂಗಳೊಳಗೆ ಹೊಸದಾಗಿ ಚುನಾವಣೆ ನಡೆಸಲು ಸೂಚನೆ ಕೊಡಲಾಗಿದೆ. ನವೆಂಬರ್​ನಲ್ಲಿ ಹೊರಡಿಸಿದ್ದ ಮತದಾರರ ಪಟ್ಟಿಯಂತೆ ಚುನಾವಣೆ ನಡೆಯಲಿದೆ. ಹೊಸ ದಿನಾಂಕ ನಿಗದಿ ಮಾಡಿ ಅಧಿಸೂಚನೆ ಹೊರಡಿಸುತ್ತೇವೆ ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಶವಸಂಸ್ಕಾರಕ್ಕೆ ಜಾಗವಿಲ್ಲದೆ ಕುಟುಂಬಸ್ಥರ ಪರದಾಟ; ಮನೆ ಮುಂದೆ ಶವ ಇಟ್ಟುಕೊಂಡು ಕುಳಿತುಕೊಳ್ಳಬೇಕಾದ ಸ್ಥಿತಿ

ಇದನ್ನೂ ಓದಿ: ಅನುಕಂಪದ ಆಧಾರದ ಮೇಲೆ ಎರಡೇ ದಿನದಲ್ಲಿ ಮಹಿಳೆಗೆ ನೌಕರಿ; ಮಾನವೀಯತೆ ಮೆರೆದ ಕಲಬುರಗಿ ಡಿಸಿಗೆ ಜನರ ಮೆಚ್ಚುಗೆ

Published On - 6:39 pm, Fri, 4 February 22