ಕಲಬುರಗಿ, ನವೆಂಬರ್ 07: ಕಲಬುರಗಿಯಲ್ಲಿ ನಡೆದ ಕೆಇಎ (KEA) ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್‌ಡಿ ಪಾಟೀಲ್ (RD Patil) ಪೊಲೀಸರು ದಾಳಿ ನಡೆಸುವ ವೇಳೆ ಕಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದಾನೆ. ಆರ್‌ಡಿ ಪಾಟೀಲ್ ಓಡಿ ಹೋಗುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಹೀಗೆ ತಪ್ಪಿಸಿಕೊಂಡಿರುವ ಆರ್‌ಡಿ ಪಾಟೀಲ್ಗೆ ಅಫಜಲಪುರ ಕ್ಷೇತ್ರದ ಶಾಸಕನಾಗುವ ಕನಸು ಕಂಡಿದ್ದ. 2022 ರಲ್ಲಿಯೇ ಸಾಮೂಹಿಕ ಮದುವೆ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದ. ಆದರೆ ಪಿಎಸ್ಐ ಅಕ್ರಮದಲ್ಲಿ ಬಂಧಿತನಾಗಿ ಜೈಲು ಸೇರಿದ್ದ.
ಇನ್ನು 2023 ಮಾರ್ಚ್ ತಿಂಗಳಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ನಂತರ ಸಮಾಜವಾದಿ ಪಕ್ಷ ಸೇರಿ, ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ. ಕಳೆದ ವಿಧಾನಸಭೆ ಚುನಾವಣೆ, 8683 ಮತಗಳನ್ನು ಸಹ ಪಡೆದಿದ್ದ.
ಇದನ್ನೂ ಓದಿ: ಪೊಲೀಸರ ನಿರ್ಲಕ್ಷ್ಯದಿಂದ ಆರ್‌ಡಿ ಪಾಟೀಲ್ ತಪ್ಪಿಸಿದ್ದರೆ ನಿರ್ದಾಕ್ಷಿಣ್ಯ ಕ್ರಮ: ಪರಮೇಶ್ವರ್, ಗೃಹಸಚಿವ
ಹಣ ಕೊಟ್ಟರೆ ಯಾವುದೇ ಪರೀಕ್ಷೆ ಪಾಸ್ ಮಾಡಿಸುತ್ತಿದ್ದ. 2016 ರಿಂದ ಇಲ್ಲಿವರಗೆ ಬಹುತೇಕ ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದ. ನೂರಾರು ಜನರಿಗೆ ಅಕ್ರಮವಾಗಿ ಸರ್ಕಾರಿ ನೌಕರಿ ಕೊಡಿಸುತ್ತಿದ್ದ ರುದ್ರಗೌಡ ಪಾಟೀಲ್, ಪರೀಕ್ಷೆ ಯಾವುದೇ ಇರಲಿ, ಆ ಪರೀಕ್ಷೆಯಲ್ಲಿ ಅಕ್ರಮ ಮಾಡುವ ಚಾತಿ ಬೆಳಸಿಕೊಂಡಿದ್ದ.
ಇದನ್ನೂ ಓದಿ: ಆರೋಪಿ ರುದ್ರಗೌಡ ಪಾಟೀಲ್ ಸಲೀಸಾಗಿ ಪರಾರಿಯಾಗುತ್ತಿರೋದನ್ನು ಗಮನಿದರೆ ಪೊಲೀಸರ ಚಲನವಲನಗಳ ಬಗ್ಗೆ ಸುಳಿವು ರವಾನೆಯಾಗುತ್ತಿದೆ!
ಎಸ್ಡಿಎನಿಂದ ಹಿಡಿದು ಪಿಎಸ್ಐ, ಇಂಜನೀಯರ್ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ಮಾಡುತ್ತಿದ್ದ. 5 ರಿಂದ 50 ಲಕ್ಷ ವರೆಗೆ ಡೀಲ್ ಮಾಡಿಕೊಂಡು ಅಕ್ರಮ ವೆಸಗುತ್ತಿದ್ದ. ಪ್ರತಿಯೊಂದು ಹುದ್ದೆಗೆ ಇಂತಿಷ್ಟು ಅಂತ ರೇಟ್ ಕಾರ್ಡ್ ಮಾಡಿದ್ದ. ಪಿಎಸ್ಐ ಕೇಸ್ಗೂ ಮುನ್ನ ಅನೇಕ ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದರು ತನ್ನ ಹೆಸರು ಬರದಂತೆ ನೋಡಿಕೊಂಡಿದ್ದ. ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿಹಾಕುತ್ತಿದ್ದ.
ಈ ಕುರಿತಾಗಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೋಡ್ಲಾಪುರ ಗ್ರಾಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ಸರಿಯಾಗಿ ಗಮನ ಕೊಡದೆ ಸಿಕ್ಕಿದವನನ್ನು ಬಿಡ್ತಾರೆ ಅಂದ್ರೆ, ಯಾವ ಮಟ್ಟಕ್ಕೆ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ ಎಂದು ಗೊತ್ತಾಗುತ್ತೆ. ಮೇಲ್ನೋಟಕ್ಕೆ ಕಾಂಗ್ರೆಸ್ನವರ ಕೈವಾಡ ಇದೆ ಎಂಬುದು ಕಾಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಪೊಲೀಸರು ಮನೆಗೆ ಬರುತ್ತಿರುವ ಮಾಹಿತಿ ತಿಳಿದು ಅಪಾರ್ಟ್‌ಮೆಂಟ್ ಕಾಂಪೌಂಡ್ ಹಾರಿ ಪರಾರಿಯಾಗಿರುವ ರುದ್ರಗೌಡ ಪಾಟೀಲ್ ಪರಾರಿ ಆಗಿದ್ದಾರೆ. R.D.ಪಾಟೀಲ್ ಬಂಧನದಲ್ಲಿ ಕಲಬುರಗಿ ಪೊಲೀಸರ ವೈಫಲ್ಯ ಆರೋಪ ಕೇಳಿಬಂದಿದೆ. ಆತ ಕಲಬುರಗಿಯಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಇದ್ರೂ ಕೂಡಲೇ ಕಾರ್ಯಾಚರಣೆಗೆ ಇಳಿದಿರಲಿಲ್ಲ. ಮಧ್ಯಾಹ್ನ 1ರ ಬಳಿಕ ಆತನ ಮನೆಗೆ ಹೋಗಲು ಪೊಲೀಸರು ಮುಂದಾಗಿದ್ದು, ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರುದ್ರಗೌಡ ಪಾಟೀಲ್ ಎಸ್ಕೇಪ್ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Tue, 7 November 23