ಕಲಬುರಗಿ: 2009ರಲ್ಲಿ ಸುಳ್ಳು ದಾಖಲಾತಿ ನೀಡಿ ಬ್ಯಾಂಕ್​ನಿಂದ 1.35 ಕೋಟಿ ರೂ. ಸಾಲ ಪಡೆದು ವಂಚನೆ; ಪ್ರಕರಣ ಬೆನ್ನತ್ತಿದ್ದ ಸಿಬಿಐ

| Updated By: preethi shettigar

Updated on: Dec 24, 2021 | 9:49 AM

ಬ್ಯಾಂಕ್ ನೋಟಿಸ್ ಬಂದಾಗಲೇ ಅನೇಕರಿಗೆ ತಮ್ಮ ಹೆಸರಲ್ಲಿ ಸಾಲ ಇರುವ ಬಗ್ಗೆ ಗೊತ್ತಾಗಿತ್ತು. ನಕಲಿ ದಾಖಲಾತಿ, ನಕಲಿ ಸಹಿ ಮಾಡಿ ಸಾಲ ಪಡೆದಿದ್ದ ಅಹ್ಮದ್, ಕಲಬುರಗಿ ನಗರದ ದರ್ಗಾ ಏರಿಯಾ ನಿವಾಸಿ. ಸದ್ಯ ಸಿಬಿಐ ವಶದಲ್ಲಿದ್ದಾನೆ.

ಕಲಬುರಗಿ: 2009ರಲ್ಲಿ ಸುಳ್ಳು ದಾಖಲಾತಿ ನೀಡಿ ಬ್ಯಾಂಕ್​ನಿಂದ 1.35 ಕೋಟಿ ರೂ. ಸಾಲ ಪಡೆದು ವಂಚನೆ; ಪ್ರಕರಣ ಬೆನ್ನತ್ತಿದ್ದ ಸಿಬಿಐ
ಆರೋಪಿ ಅಹ್ಮದ್
Follow us on

ಕಲಬುರಗಿ: ಬ್ಯಾಂಕ್​ಗೆ ಸುಳ್ಳು ದಾಖಲಾತಿ ನೀಡಿ 1.35 ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ ಘಟನೆ ಕಲಬುರಗಿ ನಗರದ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಕಲಬುರಗಿ ನಗರದ ಸಿಂಡಿಕೇಟ್ ಬ್ಯಾಂಕ್ (syndicate bank) ಶಾಖೆಯಲ್ಲಿ ದಶಕದ ಹಿಂದೆ ಅಂದರೆ 2009-10ರಲ್ಲಿ ಸುಳ್ಳು ದಾಖಲಾತಿ ನೀಡಿ ವಂಚನೆ ಮಾಡಲಾಗಿದೆ. ಸದ್ಯ ಪ್ರಕರಣದ ಬೆನ್ನತ್ತಿದ್ದ ಸಿಬಿಐ ತಂಡ, ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದೆ. ಈಗಾಗಲೇ ಬ್ಯಾಂಕ್​ಗೆ ವಂಚಿಸಿರುವ ಆರೋಪಿ ಅಹ್ಮದ್​ನನ್ನು ವಶಕ್ಕೆ ಪಡೆದ ಸಿಬಿಐ (CBI) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಅಹ್ಮದ್ ಬೀದಿ ಬದಿ ವರ್ತಕರು ಹಾಗೂ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವವರ ಹೆಸರಲ್ಲಿ ಸುಳ್ಳು ದಾಖಲೆ ಹುಟ್ಟು ಹಾಕಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದ. ಹೀಗಾಗಿ ಸಿಬಿಐ ತಂಡ ಸಾಲದ ಹಗರಣದಲ್ಲಿ ಯಾರಿದ್ದಾರೆ? ಎಲ್ಲೆಲ್ಲಿ ದಾಖಲೆ ಹುಟ್ಟು ಹಾಕಲಾಗಿದೆ? ರಿಜಿಸ್ಟ್ರಾರ್ ಕಚೇರಿಯಲ್ಲಿನ ದಲ್ಲಾಳಿಗಳು ಸೇರಿದಂತೆ ಹಲವರ ವಿಚಾರಣೆ ನಡೆಸುತ್ತಿದ್ದಾರೆ.

2009ರಲ್ಲಿ ವರ್ತಕರು, ಕೆಲಸಗಾರರ ಹೆಸರಲ್ಲಿ ಖೊಟ್ಟ ದಾಖಲೆ ಬಳಸಿ 1.35 ಕೋಟಿ ರೂಪಾಯಿಯಷ್ಟು ಸಾಲ ಪಡೆದಿದ್ದ ಅಹ್ಮದ್, ಯಾರ ಹೆಸರಲ್ಲಿ ಸಾಲ ಪಡೆದಿದ್ದನೋ ಅವರಿಗೆ ಹಣ ನೀಡಿರಲಿಲ್ಲ. ಬ್ಯಾಂಕ್ ನೋಟಿಸ್ ಬಂದಾಗಲೇ ಅನೇಕರಿಗೆ ತಮ್ಮ ಹೆಸರಲ್ಲಿ ಸಾಲ ಇರುವ ಬಗ್ಗೆ ಗೊತ್ತಾಗಿತ್ತು. ನಕಲಿ ದಾಖಲಾತಿ, ನಕಲಿ ಸಹಿ ಮಾಡಿ ಸಾಲ ಪಡೆದಿದ್ದ ಅಹ್ಮದ್, ಕಲಬುರಗಿ ನಗರದ ದರ್ಗಾ ಏರಿಯಾ ನಿವಾಸಿ. ಸದ್ಯ ಸಿಬಿಐ ವಶದಲ್ಲಿದ್ದಾನೆ.

ಬೆಂಗಳೂರು: ಕೋಟಿಗಟ್ಟಲೆ ಹವಾಲಾ ಹಣ ವರ್ಗಾವಣೆ ಪ್ರಕರಣ; ಸ್ಟೇಟ್​ಮೆಂಟ್ ಪಡೆದು ಪೊಲೀಸರಿಂದ ಪರಿಶೀಲನೆ
ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಹವಾಲ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫ್ರೀಜ್ ಆಗರಿರುವ 2886 ಖಾತೆಗಳ‌ ಸ್ಟೇಟ್​ಮೆಂಟ್ ಅನ್ನು ಪೊಲೀಸರು ಪಡೆಯುತ್ತಿದ್ದಾರೆ. ಈವರೆಗ ಸುಮಾರು 2 ಸಾವಿರಕ್ಕೂ ಹೆಚ್ಚು ಪುಟಗಳ ಸ್ಟೇಟ್​ಮೆಂಟ್ ಪಡೆದಿರುವ ಪೊಲೀಸರು, ಯಾವ ಯಾವ ಸಮಯದಲ್ಲಿ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ವಿವಿಧ 25 ಬ್ಯಾಂಕ್​ಗಳಿಂದ ಸ್ಟೇಟ್​ಮೆಂಟ್ ಪಡೆಯಲಾಗಿದೆ. ಸದ್ಯ ಕೋಟಿ ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಜನವರಿ 1 2019 ರಿಂದ 18 ನೇ ನವಂಬರ್ 2021 ಅವಧಿಯ ಸ್ಟೇಟ್​ಮೆಂಟ್ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:

ಹಣ ದ್ವಿಗುಣ ಆಮಿಷವೊಡ್ಡಿ ವಂಚನೆ: ಜೆಡಿಎಸ್ ನಗರಸಭೆ ಸದಸ್ಯ ಸೇರಿ 9 ಜನ ಅರೆಸ್ಟ್, ವಂಚನೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಶಾಮೀಲು

PT Usha: ಭಾರತದ ಗೋಲ್ಡನ್ ಗರ್ಲ್ ಪಿಟಿ ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಕೇರಳ ಪೊಲೀಸರು

Published On - 8:21 am, Fri, 24 December 21