ಕಸ ಎಸೆಯಲು ಬಂದ ವ್ಯಕ್ತಿ ಮೇಲೆ ಬಿದ್ದ ಕೊಂಬೆ, ಸ್ಥಳದಲ್ಲೇ ಸಾವು

ಕಲಬುರಗಿ: ಮೈಮೇಲೆ ಮರದ ಕೊಂಬೆ ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ತಾಲೂಕಿನ ಖಣದಾಳ ಬಳಿ ಇರುವ ಕೇಂದ್ರ ಕಾರಾಗೃಹದ ಕ್ವಾರ್ಟರ್ಸ್‌ನಲ್ಲಿ ನಡೆದಿದೆ. ಕಸ ಎಸೆಯಲು ಹೋಗಿದ್ದ ಗೋವಿಂದ(41) ಮೃತ ದುರ್ದೈವಿ. ಕಾರಾಗೃಹದ ಡಿ ಗ್ರೂಪ್ ಮಹಿಳಾ ಸಿಬ್ಬಂದಿ ಪಾರುಬಾಯಿ ಪತಿ ಗೋವಿಂದ ಚೌವಾಣ್ ಬೆಳಗ್ಗೆ 5.30ಕ್ಕೆ ಕಸ ಎಸೆಯಲು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಮರವೊಂದು ಬುಡ ಸಮೇತ ಧರೆಗೆ ಉರುಳಿದೆ. ದುರದೃಷ್ಟವಷಾತ್ ಏಕಾಏಕಿ ಮೈಮೇಲೆ ಮರದ ಕೊಂಬೆ ಬಿದ್ದಿದೆ. ಈ ಪರಿಣಾಮ […]

ಕಸ ಎಸೆಯಲು ಬಂದ ವ್ಯಕ್ತಿ ಮೇಲೆ ಬಿದ್ದ ಕೊಂಬೆ, ಸ್ಥಳದಲ್ಲೇ ಸಾವು
Follow us
ಆಯೇಷಾ ಬಾನು
|

Updated on:Jun 03, 2020 | 3:05 PM

ಕಲಬುರಗಿ: ಮೈಮೇಲೆ ಮರದ ಕೊಂಬೆ ಬಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ತಾಲೂಕಿನ ಖಣದಾಳ ಬಳಿ ಇರುವ ಕೇಂದ್ರ ಕಾರಾಗೃಹದ ಕ್ವಾರ್ಟರ್ಸ್‌ನಲ್ಲಿ ನಡೆದಿದೆ. ಕಸ ಎಸೆಯಲು ಹೋಗಿದ್ದ ಗೋವಿಂದ(41) ಮೃತ ದುರ್ದೈವಿ.

ಕಾರಾಗೃಹದ ಡಿ ಗ್ರೂಪ್ ಮಹಿಳಾ ಸಿಬ್ಬಂದಿ ಪಾರುಬಾಯಿ ಪತಿ ಗೋವಿಂದ ಚೌವಾಣ್ ಬೆಳಗ್ಗೆ 5.30ಕ್ಕೆ ಕಸ ಎಸೆಯಲು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಮರವೊಂದು ಬುಡ ಸಮೇತ ಧರೆಗೆ ಉರುಳಿದೆ. ದುರದೃಷ್ಟವಷಾತ್ ಏಕಾಏಕಿ ಮೈಮೇಲೆ ಮರದ ಕೊಂಬೆ ಬಿದ್ದಿದೆ. ಈ ಪರಿಣಾಮ ಗೋವಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 8:51 am, Wed, 3 June 20