ಹಾಸ್ಟೆಲ್ ಬಾತ್ ರೂಮ್​ನಲ್ಲಿ ಕ್ಯಾಮರಾ ಇಟ್ಟ ಕಿರಾತಕ; ಆರೋಪಿಯನ್ನ ಹಿಡಿದ ವಿದ್ಯಾರ್ಥಿನಿಯರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 20, 2023 | 3:28 PM

ಜೇವರ್ಗಿ(Jevargi) ತಾಲ್ಲೂಕಿನ ಜೇವರ್ಗಿ ಪಟ್ಟಣದ ಶಾಂತಾನಗರದಲ್ಲಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಹಾಸ್ಟೆಲ್(Girls Hostel) ಬಾತ್ ರೂಮ್​ನಲ್ಲಿ ಯುವಕನೊಬ್ಬ ಕ್ಯಾಮರಾ ಇಟ್ಟ ಘಟನೆ ನಡೆದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹಾಸ್ಟೆಲ್ ಬಾತ್ ರೂಮ್​ನಲ್ಲಿ ಕ್ಯಾಮರಾ ಇಟ್ಟ ಕಿರಾತಕ; ಆರೋಪಿಯನ್ನ ಹಿಡಿದ ವಿದ್ಯಾರ್ಥಿನಿಯರು
ಜೇವರ್ಗಿ
Follow us on

ಕಲಬುರಗಿ, ಡಿ.20: ಜಿಲ್ಲೆಯ ಜೇವರ್ಗಿ(Jevargi) ತಾಲ್ಲೂಕಿನ ಜೇವರ್ಗಿ ಪಟ್ಟಣದ ಶಾಂತಾನಗರದಲ್ಲಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಹಾಸ್ಟೆಲ್(Girls Hostel) ಬಾತ್ ರೂಮ್​ನಲ್ಲಿ ಯುವಕನೊಬ್ಬ ಕ್ಯಾಮರಾ ಇಟ್ಟ ಘಟನೆ ನಡೆದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹಾಸ್ಟೆಲ್​ಗೆ ಹೊಂದಿಕೊಂಡಂತಿರುವ ಮನೆಯಲ್ಲಿ ವಾಸವಾಗಿದ್ದ ಸಲೀಂ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ. ಇನ್ನು ಬಾತ್​ರೂಮ್​ಗೆ ಹೋದ ವಿದ್ಯಾರ್ಥಿನಿಯರು, ಕ್ಯಾಮೆರಾ ಇಟ್ಟಿರುವುದನ್ನು ಕಂಡ ಕೂಡಲೇ ಹೊರಬಂದು ಕಾಮುಕನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯರು, ಗಲಾಟೆಯನ್ನು ಬಿಡಿಸಿ ಆರೋಪಿ ಎಸ್ಕೇಪ್ ಆಗಲು ಸಹಕರಿಸಿದ್ದರು.

ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ

ಆರೋಪಿ ತಪ್ಪಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು, ತಹಶೀಲ್ದಾರ್ ಮತ್ತು ಜೇವರ್ಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮನೆಯವರನ್ನು ವಿಚಾರಣೆ ನಡೆಸಿದ್ದು, ಆ ಬಳಿಕ ಮನೆಯವರು ಆರೋಪಿಯನ್ನು ಕರೆಸಿದ್ದಾರೆ. ಕ್ಯಾಮರಾ ಇಟ್ಟ ಕಾಮುಕನನ್ನ ಜೇವರ್ಗಿ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:Hidden Camera: ಜೋಡಿಯಾಗಿ ಹೋಟೆಲ್ ರೂಮ್​ಗೆ ಹೋದಾಗ ಇವುಗಳ ಮೇಲೆ ನಿಗಾ ಇರಲಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ