ಹಾಳು ಕೆಲಸ: ಟ್ರ್ಯಾಕ್ಟರ್​ನಿಂದ ನೇಗಿಲು ಹೊಡೆದು ತಾಲೂಕು ಕ್ರೀಡಾಂಗಣ ಹಾಳು ಮಾಡಿದ ಕಿಡಿಗೇಡಿಗಳು

ದುಷ್ಕರ್ಮಿಗಳು ಟ್ರ್ಯಾಕ್ಟರ್ ನಿಂದ ನೇಗಿಲು ಹೊಡೆದು ಕ್ರೀಡಾಂಗಣವನ್ನು ಹಾಳು ಮಾಡಿದ್ದಾರೆ. ಕ್ರೀಡಾಂಗಣದಲ್ಲಿರೋ ಕ್ರಿಕೆಟ್ ಪಿಚ್ ಅನ್ನು ಕಿಡಿಕೇಡಿಗಳು ಹಾಳು ಮಾಡಿದ್ದಾರೆ. ಕ್ರೀಡಾಪಟುಗಳು ತಮ್ಮ ಸ್ವಂತ ಹಣದಿಂದ ಕ್ರಿಕೆಟ್ ಪಿಚ್ ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಳು ಕೆಲಸ: ಟ್ರ್ಯಾಕ್ಟರ್​ನಿಂದ ನೇಗಿಲು ಹೊಡೆದು ತಾಲೂಕು ಕ್ರೀಡಾಂಗಣ ಹಾಳು ಮಾಡಿದ ಕಿಡಿಗೇಡಿಗಳು
ಹಾಳು ಕೆಲಸ: ಟ್ರ್ಯಾಕ್ಟರ್​ನಿಂದ ನೇಗಿಲು ಹೊಡೆದು ತಾಲೂಕು ಕ್ರೀಡಾಂಗಣ ಹಾಳು ಮಾಡಿದ ಕಿಡಿಗೇಡಿಗಳು

ಕಲಬುರಗಿ: ಕಿಡಿಗೇಡಿಗಳು ಟ್ರ್ಯಾಕ್ಟರ್​ನಿಂದ ನೇಗಿಲು ಹೊಡೆದು ತಾಲೂಕು ಕ್ರೀಡಾಂಗಣವನ್ನು ಹಾಳು ಮಾಡಿರುವ ಹಾಳು ಕೆಲಸ ನಡೆದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿರೋ ಕ್ರೀಡಾಂಗಣಕ್ಕೆ ಈ ದುರದಗತಿ ಬಂದೊದಗಿದೆ. ದುಷ್ಕರ್ಮಿಗಳು ಟ್ರ್ಯಾಕ್ಟರ್ ನಿಂದ ನೇಗಿಲು ಹೊಡೆದು ಕ್ರೀಡಾಂಗಣವನ್ನು ಹಾಳು ಮಾಡಿದ್ದಾರೆ. ಕ್ರೀಡಾಂಗಣದಲ್ಲಿರೋ ಕ್ರಿಕೆಟ್ ಪಿಚ್ ಅನ್ನು ಕಿಡಿಕೇಡಿಗಳು ಹಾಳು ಮಾಡಿದ್ದಾರೆ. ಕ್ರೀಡಾಪಟುಗಳು ತಮ್ಮ ಸ್ವಂತ ಹಣದಿಂದ ಕ್ರಿಕೆಟ್ ಪಿಚ್ ನಿರ್ಮಿಸಿಕೊಂಡಿದ್ದರು. ಆದರೆ ದುಷ್ಕರ್ಮಿಗಳು ಕಳೆದ ರಾತ್ರಿ ಕ್ರೀಡಾಂಗಣಕ್ಕೆ (afzalpur taluk playground) ಟ್ರ್ಯಾಕ್ಟರ್​ ಸಮೇತ ಲಗ್ಗೆಯಿಟ್ಟು ಹಾಳು ಮಾಡಿದ್ದಾರೆ. ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಮಿಗಳು ಇಬ್ಬರೂ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದರು! ಮುಂದೇನಾದರು? ಮೈಸೂರು: ಇಬ್ಬರು ಯುವ ಪ್ರೇಮಿಗಳು ಜನುಮದ ಜೋಡಿಯಾಗಿ ಪರಸ್ಪರ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದ್ದಾರೆ. ಹಾಗೆ ಪ್ರೇಮಿಗಳು ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಬಳಿ ನಡೆದಿದೆ. ಕೊನೆಗೆ ತೆಪ್ಪ ನಡೆಸುವ ಅಂಬಿಗರಿಂದ ಪ್ರೇಮಿಗಳ ರಕ್ಷಣೆಯಾಗಿದೆ. ಅಭಿ (19) ಮತ್ತು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯಿಂದ ಆತ್ಮಹತ್ಯೆ ಯತ್ನ ನಡೆದಿದೆ. ಬಾಲಕಿಯು ಚಾಮರಾಜನಗರದ ಕಾಲೇಜು ವಿದ್ಯಾರ್ಥಿನಿಯಾಗಿದ್ದರೆ ಅಭಿ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಬಾಲಕಿಯ ಮನೆಯಲ್ಲಿ ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಹಿನ್ನೆಲೆ ಮುಡಿಕಟ್ಟೆ ಬಳಿ ಪ್ರೇಮಿಗಳು ಕಪಿಲಾ ನದಿಗೆ ಹಾರಿದ್ದಾರೆ. ಇಬ್ಬರಿಗೂ ಈಗ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2ನೇ ವಿವಾಹಕ್ಕೆ ಒಪ್ಪಿಗೆ ನೀಡದ ಹಿನ್ನೆಲೆ, ಪತ್ನಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಪತಿ ಗೋಪಾಲ 2ನೇ ವಿವಾಹ ಮಾಡಿಕೊಳ್ಳಲು ಪತ್ನಿ ಒಪ್ಪಿಗೆ ನೀಡದ ಹಿನ್ನೆಲೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ ಪತಿರಾಯ ತನ್ನ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪತ್ನಿ ಶೀಲಾ ಹರಿಜನ ಮೇಲೆ ಪತಿ ಗೋಪಾಲ ಹರಿಜನ ಹಲ್ಲೆ ಮಾಡಿದ್ದಾನೆ. ಪತ್ನಿ ಶೀಲಾ ಮುಖ, ಕತ್ತು, ಕೈಗೆ ಗಾಯಗಳಾಗಿವೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ ಗೋಪಾಲ ಪರಾರಿಯಾಗಿದ್ದಾನೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 8:32 am, Wed, 1 December 21

Click on your DTH Provider to Add TV9 Kannada