ಮುಖ್ಯಾಧಿಕಾರಿ ಸಹಿ ಮಾಡಿಲ್ಲ ಅಂತ ಬೆಂಬಲಿಗನ ಜೊತೆ ಬಂದು ಸದಸ್ಯನಿಂದ ಹಲ್ಲೆ

ಪುರಸಭೆಯ ಮುಖ್ಯಾಧಿಕಾರಿ ಅಭಯ್ ಮೇಲೆ ಚಿಂಚೋಳಿ ಪುರಸಭೆಯ ಸದಸ್ಯನಾಗಿರುವ ಆನಂದ್ ಟೈಗರ್, ತನ್ನ ಬೆಂಬಲಿಗ ಶಶಿಕುಮಾರ್ ಜತೆ ಆಗಮಿಸಿ ಹಲ್ಲೆ ಮಾಡಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುರಸಭೆಯ ಮುಖ್ಯಾಧಿಕಾರಿ ಅಭಯ್ ಮೇಲೆ ಚಿಂಚೋಳಿ ಪುರಸಭೆಯ ಸದಸ್ಯನಾಗಿರುವ ಆನಂದ್ ಟೈಗರ್, ತನ್ನ ಬೆಂಬಲಿಗ ಶಶಿಕುಮಾರ್ ಜತೆ ಆಗಮಿಸಿ ಹಲ್ಲೆ ಮಾಡಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಕಲಿ ಬಿಲ್‌ಗಳಿಗೆ ಸಹಿ ಮಾಡಿ ಚೆಕ್ ನೀಡಲು ಆನಂದ್ ಬೇಡಿಕೆ ಇಟ್ಟಿದ್ದ.

ಮುಖ್ಯಾಧಿಕಾರಿ ಸಹಿ ಮಾಡಿಲ್ಲ ಅಂತ ಬೆಂಬಲಿಗನ ಜೊತೆ ಬಂದು ಸದಸ್ಯನಿಂದ ಹಲ್ಲೆ
ಪುರಸಭೆ ಮುಖ್ಯಾಧಿಕಾರಿಯ ಮೇಲೆ ಸದಸ್ಯನಿಂದ ಹಲ್ಲೆ
ಆಯೇಷಾ ಬಾನು Edited By:

Updated on: Oct 16, 2026 | 10:56 PM

ಕಲಬುರಗಿ: ಪುರಸಭೆಯ ಮುಖ್ಯಾಧಿಕಾರಿ ಮೇಲೆ ಪುರಸಭೆ ಸದಸ್ಯ ಗುಂಡಾಗಿರಿ ಪ್ರದರ್ಶಿಸಿರುವ ಘಟನೆ ಜಿಲ್ಲೆಯ ಚಿಂಚೋಳಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಪುರಸಭೆ ಮುಖ್ಯಾಧಿಕಾರಿಯ ಮೇಲೆ ಸದಸ್ಯ ಹಲ್ಲೆ ನಡೆಸಿದ್ದಾನೆ.

ಪುರಸಭೆಯ ಮುಖ್ಯಾಧಿಕಾರಿ ಅಭಯ್ ಮೇಲೆ ಚಿಂಚೋಳಿ ಪುರಸಭೆಯ ಸದಸ್ಯನಾಗಿರುವ ಆನಂದ್ ಟೈಗರ್, ತನ್ನ ಬೆಂಬಲಿಗ ಶಶಿಕುಮಾರ್ ಜತೆ ಆಗಮಿಸಿ ಹಲ್ಲೆ ಮಾಡಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಕಲಿ ಬಿಲ್‌ಗಳಿಗೆ ಸಹಿ ಮಾಡಿ ಚೆಕ್ ನೀಡಲು ಆನಂದ್ ಬೇಡಿಕೆ ಇಟ್ಟಿದ್ದ.

ಮುಖ್ಯಾಧಿಕಾರಿ ಅಭಯ್ ಮೇಲೆ ಒತ್ತಡ ಹಾಕಿದ್ದ. ಇವನ ಮಾತಿಗೆ ಮಣಿಯದೆ ಸಹಿ ಮಾಡದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಸದಸ್ಯ ಆನಂದ್ ಮತ್ತು ಆತನ ಸಹಚರ ಶಶಿಕುಮಾರ್ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Published On - 9:01 am, Wed, 20 January 21

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us