ಶಕ್ತಿ ಯೋಜನೆಗಳಿಗೆ ಖಜಾನೆಯಿಂದ ಒಂದು ರೂಪಾಯಿ ಸಹ ನೀಡಿಲ್ಲ; SC, ST ಹಣ ಬಳಸಿಕೊಂಡಿದ್ದಾರೆ -ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ
ರಾಜ್ಯದಲ್ಲಿ ಶಾಸಕರು ನೂರು ದಿನದಲ್ಲಿ ನೂರು ಮೀಟರ್ ರಸ್ತೆ ಮಾಡಲು ಆಗಿಲ್ಲ. ವಿಧಾನಸೌಧಕ್ಕೆ ಮಂತ್ರಿಗಳು ಬರ್ತಿಲ್ಲ, ಜನರು ಬರ್ತಿಲ್ಲ. ಸರ್ಕಾರದ ಒಂದೇ ಒಂದು ಸಾಧನೆ ಅಂದ್ರೆ ಅದು ವರ್ಗಾವಣೆ ದಂಧೆ. ಸಂಘ ಪರಿವಾರ ಮತ್ತು ಬಿಜೆಪಿಯವರ ಮೇಲೆ ಹುಡುಕಿ ಹುಡುಕಿ ಕೇಸ್ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.
ಕಲಬುರಗಿ,ಸೆ.18: ಶಕ್ತಿ ಯೋಜನೆಗಳಿಗೆ ಖಜಾನೆಯಿಂದ ಒಂದು ರೂಪಾಯಿ ಸಹ ನೀಡಿಲ್ಲ. ಬದಲಾಗಿ SC, ST ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣ ನೀಡಿದ್ದಾರೆ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Srinivas Poojary) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ತೀವ್ರ ಬರವಿದೆ. ಆದರೆ ಸಿದ್ದರಾಮಯ್ಯನವರು ಬರ ಬರೋದಕ್ಕೂ ಕೇಂದ್ರ ಸರ್ಕಾರ ಕಾರಣ ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ಮಾತ್ರ ಬರ ಪರಿಹಾರ ಕೆಲಸ ಮಾಡುತ್ತೇವೆ ಅಂತಿದ್ದಾರೆ. ಸಿದ್ದರಾಮಯ್ಯ(Siddaramaiah) ಸರ್ಕಾರ ಕಾಗದ ಬರೆಯೋ ಸರ್ಕಾರ ಅಲ್ಲ ಅಂತ ಜನ ಅಂದುಕೊಂಡಿದ್ದರು. ಆದರೆ ಆ ಭರವಸೆಯನ್ನು ಸಿದ್ದರಾಮಯ್ಯ ಸುಳ್ಳು ಮಾಡಿದ್ದಾರೆ. ಶಕ್ತಿ ಯೋಜನೆಗಳಿಗೆ ಖಜಾನೆಯಿಂದ ಒಂದು ರೂಪಾಯಿ ಹಣ ನೀಡಿಲ್ಲ. ಬದಲಾಗಿ ಎಸ್ಸಿ ಎಸ್ಟಿ ಜನರಿಗೆ ಮೀಸಲಾಗಿದ್ದ ಹಣವನ್ನು ನೀಡಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಶಾಸಕರು ನೂರು ದಿನದಲ್ಲಿ ನೂರು ಮೀಟರ್ ರಸ್ತೆ ಮಾಡಲು ಆಗಿಲ್ಲ. ವಿಧಾನಸೌಧಕ್ಕೆ ಮಂತ್ರಿಗಳು ಬರ್ತಿಲ್ಲ, ಜನರು ಬರ್ತಿಲ್ಲ. ಸರ್ಕಾರದ ಒಂದೇ ಒಂದು ಸಾಧನೆ ಅಂದ್ರೆ ಅದು ವರ್ಗಾವಣೆ ದಂಧೆ. ಸಂಘ ಪರಿವಾರ ಮತ್ತು ಬಿಜೆಪಿಯವರ ಮೇಲೆ ಹುಡುಕಿ ಹುಡುಕಿ ಕೇಸ್ ಹಾಕುತ್ತಿದ್ದಾರೆ. ಲೋಕಸಭಾ ಚುನಾವಣೆ ವರಗೂ ಗ್ಯಾರಂಟಿ ಯೋಜನೆಗಳು ಮುಂದುವರಿಯೋ ವಿಶ್ವಾಸವಿಲ್ಲ. ಚೈತ್ರಾ ಕುಂದಾಪುರ ಪ್ರಕರಣ ಪ್ರಕರಣ ಬಗ್ಗೆ ಬಿಜೆಪಿಯವರು ಜಾರುವುದಿಲ್ಲ, ಹಾರುವುದಿಲ್ಲ. ಮೋಸಕ್ಕೆ ಒಳಗಾಗೋರು ಜಾಗೃತರಾಗಬೇಕು. ಹಣ ಕೊಟ್ಟವರು, ತಗೆದುಕೊಂಡವರ ಬಗ್ಗೆ ಕ್ರಮವಾಗಲಿ ಎಂದರು.
ಇದನ್ನೂ ಓದಿ: ಮೂವರನ್ನು ಡಿಸಿಎಂ ಮಾಡುವ ಕೆಎನ್ ರಾಜಣ್ಣ ಹೇಳಿಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಹೀಗಿದೆ
ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಗೆ ಸಮಯ ನೀಡ್ತಿಲ್ಲಾ ಎಂದು ಸಿಎಂ ಸಿದ್ದರಾಮಯ್ಯ ಆರೋಪ ವಿಚಾರ ಸಂಬಂಧ, ಸಿಎಂ ಕೇಳಿದ್ರೆ ಭೇಟಿಗೆ ಸಮಯ ಕೊಡದೆ ಇರುವ ಸಾಧ್ಯತೆ ಇಲ್ಲ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಮೋದಿ ಭೇಟಿ ಮಾಡಿ ಬಂದಿದ್ದಾರೆ. ವಿನಾಕಾರಣ ಅಪಪ್ರಚಾರ ಮಾಡೋದು ಸಿಎಂಗೆ ಶೋಭೆ ತರುವುದಿಲ್ಲ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ