ಮಲ್ಲಿಕಾರ್ಜುನ ಖರ್ಗೆ ಕೋಟೆಯಲ್ಲಿ ಮೋದಿ ರಣಕಹಳೆ; ಇಂದು ಕಲಬುರಗಿಯಲ್ಲಿ ಮೋದಿ ಮಿನಿ ರೋಡ್​ ಶೋ

| Updated By: ಆಯೇಷಾ ಬಾನು

Updated on: Mar 16, 2024 | 9:15 AM

ಲೋಕ ಸಭಾ ಚುನಾವಣೆಗೆ ಇಂದು ಮಧ್ಯಾಹ್ನ ಡೇಟ್ ಫಿಕ್ಸ್ ಆಗಲಿದೆ. ಮತ್ತೊಂದೆಡೆ ಇಂದು ಕಲಬುರಗಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ರಣಕಹಳೆ ಮೊಳಗಿಸಲಿದ್ದಾರೆ. ಇಂದು ಮೋದಿ ಕಲಬುರಗಿಗೆ ಭೇಟಿ ನೀಡಿ ರೋಡ್ ಶೋ ನಡೆಸಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೋಟೆಯಲ್ಲಿಂದು ನರೇಂದ್ರ ಮೋದಿ ಚುನಾವಣೆ ಪಾಂಚಜನ್ಯ ಮೊಳಗಿಸಲಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕೋಟೆಯಲ್ಲಿ ಮೋದಿ ರಣಕಹಳೆ; ಇಂದು ಕಲಬುರಗಿಯಲ್ಲಿ ಮೋದಿ ಮಿನಿ ರೋಡ್​ ಶೋ
ನರೇಂದ್ರ ಮೋದಿ
Follow us on

ಕಲಬುರಗಿ, ಮಾರ್ಚ್​.16: ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ತಾಪಮಾನದಷ್ಟೇ ಎಲೆಕ್ಷನ್ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಗ್ಯಾರಂಟಿ ಸಮಾವೇಶದ ನೆಪದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ರಣಕಹಳೆ ಮೊಳಗಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೋಟೆಯಲ್ಲಿಂದು ನರೇಂದ್ರ ಮೋದಿ (Narendra Modi)  ಚುನಾವಣೆ ಪಾಂಚಜನ್ಯ ಮೊಳಗಿಸಲಿದ್ದಾರೆ. ಲೋಕಸಭಾ ಚುನಾವಣೆಗೆ ಮೂಹೂರ್ತ ಫಿಕ್ಸ್ ಆಗೋ ಮುಂಚೆ ಕಲಬುರಗಿಯಲ್ಲಿ ನಮೋ ಬೃಹತ್ ಸಮಾವೇಶ ನಡೆಸುವುದರ ಜೊತೆಗೆ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಿದ್ದಾರೆ.

ಕಲಬುರಗಿಯಲ್ಲಿಂದು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ

2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಿಂದಲೇ ಪ್ರಚಾರ ಆರಂಭಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ 2024ರಲ್ಲೂ ಕಲಬುರಗಿಯಿಂದಲೇ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ. ಇಂದು ಮಧ್ಯಾಹ್ನ ಕಲಬುರಗಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು ನಗರದ ಎನ್‌ವಿ ಕಾಲೇಜು ಮೈದಾನದಲ್ಲಿ ಬೃಹತ್‌ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1 ಗಂಟೆಗೆ ತೆಲಂಗಾಣದಿಂದ ಕಲಬುರಗಿ ಹೆಲಿಪ್ಯಾಡ್ ಆಗಮಿಸಲಿರೋ ನಮೋ ನಗರದ ಡಿಎಆರ್ ಹೆಲಿಪ್ಯಾಡ್‌ ನಿಂದ 2:15ಕ್ಕೆ ವೇದಿಕೆಗೆ ಆಗಮಿಸಲಿದಾರೆ. ಮಧ್ಯಾಹ್ನ 2:15ಕ್ಕೆ ಬೃಹತ್‌ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ರಣಕಹಳೆ ಮೊಳಗಿಸಲಿದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಯದುವೀರ್ ಆ್ಯಕ್ಟಿವ್; ಇನ್ನೂ ಅಂತಿಮವಾಗದ ಕೈ ಅಭ್ಯರ್ಥಿ, ಯತೀಂದ್ರ ಸ್ಪರ್ಧೆಗೆ ಹೆಚ್ಚಿದ ಒತ್ತಡ

ಇನ್ನೂ ಪ್ರಧಾನಿ ಆಗಮನ ಹಿನ್ನಲೆಯಲ್ಲಿ ಎನ್‌ವಿ ಕಾಲೇಜು ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಗೂ ವೇದಿಕೆ ನಿರ್ಮಾಣವಾಗಿದ್ದು, ಬೀದರ್ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 2 ಲಕ್ಷ ಜನ ಭಾಗಿಯಾಗಲಿದಾರೆ. ಸಮಾವೇಶದಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕರು ಭಾಗಿಯಾಗಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕಲಬುರಗಿಯಲ್ಲಿ ಕೇಸರಿ ಬಾವುಟ ಹಾರಿಸಿ ರಾಜ್ಯದಲ್ಲಿ ಅತೀಹೆಚ್ಚು ಸೀಟ್‌ಗಳನ್ನ ಗೆಲ್ಲಲು ನಮೋ ರಣತಂತ್ರ ಹೆಣೆಯಲಿದ್ದಾರೆ. ಇತ್ತ ಮೋದಿ ಆಗಮನಿಂದಾಗಿ ಕಳೆಗುಂದಿರೊ ಕಲಬುರಗಿ ಜಿಲ್ಲಾ ಬಿಜೆಪಿಗೂ ಹೊಸ ಚೈತನ್ಯ ಬಂದಿದ್ದು‌‌. ಇಂದಿನ ಕಾರ್ಯಕ್ರಮದ ಮೂಲಕ ಮತ್ತಷ್ಟು ಹುರುಪು ಬರೋ ಸಾಧ್ಯತೆ ಇದೆ.

ರೋಡ್ ಶೋ ರೂಟ್ ಮ್ಯಾಪ್

2:05 ನಿಮಿಷಕ್ಕೆ ಮೋದಿ ಮಿನಿ ರೋಡ್ ಶೋ ಆರಂಭವಾಗಲಿದೆ. ಕಲಬುರಗಿ ಡಿ.ಆರ್ ಮೈದಾನದಿಂದ ಎಸ್​ಪಿ ಕಚೇರಿ ರಸ್ತೆ, ಅಲ್ಲಿಂದ ಆರ್ಚಿಡ್ ಮಾಲ್ ಬಳಿ ಬರಲಿದೆ. ಅಲ್ಲಿ ‌ನೆರೆಯೋ ಜನರತ್ತ‌ ಮೋದಿ ಕೈ ಬೀಸಲಿದ್ದು ಅಲ್ಲಿಂದ ಎಸ್.ಎಂ. ಪಂಡಿತ್ ರಂಗಮಂದಿರ ಕಡೆ ಪ್ರಯಾಣ ಬೆಳೆಸಲಿದ್ದಾರೆ. ರಂಗಮಂದಿರ ಕಾರ್ನರ್ ನಲ್ಲಿ ಸಾಕಷ್ಟು ಜನ ಜಮಾಯಿಸೋ ಸಾಧ್ಯತೆ ಇದೆ. ಅಲ್ಲಿಯೂ ಮೋದಿ ಜನರತ್ತ ಕೈ ಬೀಸಲಿದ್ದಾರೆ. ಬಳಿಕ ಸಾರ್ವಜನಿಕ ಉದ್ಯಾನವನ ಒಳಗಡೆ ರಸ್ತೆಯಿಂದ ರೋಟರಿ ಕ್ಲಬ್ ರಸ್ತೆ, ಅಲ್ಲಿಂದ ನೇರವಾಗಿ ಎನ್.ವಿ. ಮೈದಾನದ ಕಡೆಗೆ ಪ್ರಯಾಣ‌ ಬೆಳೆಸಲಿದ್ದಾರೆ. 2:15 ನಿಮಿಷಕ್ಕೆ ಮೋದಿಯವರು ವೇದಿಕೆಗೆ ಆಗಮಿಸಲಿದ್ದು 45 ನಿಮಿಷ ವೇದಿಕೆ ಕಾರ್ಯಕ್ರಮ ನಡೆಯಲಿದೆ. 3 ಗಂಟೆಗೆ ಕಾರ್ಯಕ್ರಮ‌ ಮುಕ್ತಾಯಗೊಳ್ಳಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ