ಈ ತುರ್ತು ಪರಿಸ್ಥಿತಿ ಆಟ ಜಾಸ್ತಿ ದಿನ ನಡೆಯಲ್ಲ: ಪ್ರಿಯಾಂಕ್ ಖರ್ಗೆಗೆ ಅಶೋಕ್ ಎಚ್ಚರಿಕೆ

ಸಚಿವ ಪ್ರಿಯಾಂಕ್ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಪೂರ್ವಭಾವಿಯಾಗಿ ಅಳವಡಿಸಿದ್ದ ಭಗವಾ ಧ್ವಜಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಇದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅನುಮತಿ ಇದ್ದರೂ ಧ್ವಜ ತೆರವುಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಈ ತುರ್ತು ಪರಿಸ್ಥಿತಿ ಆಟ ಜಾಸ್ತಿ ದಿನ ನಡೆಯಲ್ಲ: ಪ್ರಿಯಾಂಕ್ ಖರ್ಗೆಗೆ ಅಶೋಕ್ ಎಚ್ಚರಿಕೆ
ಸಚಿವ ಪ್ರಿಯಾಂಕ್ ಖರ್ಗೆ, ವಿಪಕ್ಷ ನಾಯಕ ಆರ್​​. ಅಶೋಕ್
Updated By: ಗಂಗಾಧರ​ ಬ. ಸಾಬೋಜಿ

Updated on: Oct 18, 2025 | 12:37 PM

ಕಲಬುರಗಿ, ಅಕ್ಟೋಬರ್​ 18: ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ಗೆ (RSS) ನಿರ್ಬಂಧ ವಿಚಾರ ಜೋರು ಮಾಡುತ್ತಿರುವ ಬೆನ್ನಲ್ಲೇ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಬ್ಯಾನರ್​ ತೆರವು ಮಾಡಲಾಗಿದೆ. ಭಗವಾ ದ್ವಜ ತೆರವು ಮಾಡಿದ್ದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರವಾಗಿ ಕಿಡಿಕಾರಿರುವ ವಿಪಕ್ಷ ನಾಯಕ ಆರ್​​. ಅಶೋಕ್​​ (R Ashoka), ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ? ಈ ತುರ್ತು ಪರಿಸ್ಥಿತಿ ಆಟ ಜಾಸ್ತಿ ದಿನ ನಡೆಯೋದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ತಾವೇನು ನಿಜಾಮರೋ ಅಥವಾ ರಜಾಕರ್​ರೋ? 

ಈ ಕುರಿತಾಗಿ ಟ್ವೀಟ್​ ಮಾಡಿರುವ ವಿಪಕ್ಷ ನಾಯಕ ಆರ್​​. ಅಶೋಕ್​​, ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ? ಆರ್​ಎಸ್ಎಸ್ ಪಥಸಂಚಲನಕ್ಕೆ ಪುರಸಭೆಯಿಂದ ಅನುಮತಿ ಪತ್ರ ಪಡೆಯಲಾಗಿದೆ. ಬ್ಯಾನರ್, ಧ್ವಜ ಕಟ್ಟಲು ಪುರಸಭೆಗೆ ಜಾಹೀರಾತು ತೆರಿಗೆ ಕಟ್ಟಿ ರಸೀದಿ ಪಡೆಯಲಾಗಿದೆ ಎಂದಿದ್ದಾರೆ.

ಆರ್​​. ಅಶೋಕ್ ಟ್ವೀಟ್

ಇಷ್ಟಾದರೂ ರಾತ್ರೋರಾತ್ರಿ ಕೇಸರಿ ಬ್ಯಾನರ್, ಧ್ವಜಗಳನ್ನು ತೆರವುಗೊಳಿಸಿದ್ದೀರಲ್ಲ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ತಾವೇನು ಚಿತ್ತಾಪುರದ ನಿಜಾಮ ಅಂದುಕೊಂಡಿದ್ದೀರೋ ಅಥವಾ ರಜಾಕರ್ ಅಂದುಕೊಂಡಿದ್ದೀರೋ? ಎಂದು ವಾಗ್ದಳಿ ಮಾಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಶಾಸಕರ ಒಡೆತನದ ಶಾಲೆಯಲ್ಲಿ ಆರ್​ಎಸ್​ಎಸ್ ಬೈಠಕ್, ಪಥಸಂಚಲನ!

ಆರ್​ಎಸ್ಎಸ್ ಬಗ್ಗೆ ವಿಷ ಕಾರಿದರೆ ನಕಲಿ ಗಾಂಧಿಗಳನ್ನು ಮೆಚ್ಚಿಸಿ ಏನೋ ಆಗಿಬಿಡಬಹುದು, ಚಿತ್ತಾಪುರ ರಿಪಬ್ಲಿಕ್ ಮಾಡಿಕೊಂಡುಬಿಡಬಹುದು ಎಂಬ ಕನಸು ಕಾಣಬೇಡಿ. ಈ “ತುರ್ತು ಪರಿಸ್ಥಿತಿ” ಆಟ ಜಾಸ್ತಿ ದಿನ ನಡೆಯೋದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: RSS ಚಟುವಟಿಕೆ ನಿಷೇಧಕ್ಕೆ ಮನವಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಬರೆದ ಪತ್ರದಲ್ಲೇನಿದೆ?

ನಾಳೆ ಕಲಬುರಗಿ ಜಿಲ್ಲೆಯ ಸಚಿವ ಪ್ರಿಯಾಂಕ್ ಕ್ಷೇತ್ರ ಚಿತ್ತಾಪುರದಲ್ಲಿ ನಾಳೆ ಆರ್​​ಎಸ್​​ಎಸ್​​ ಪಥಸಂಚಲನ ನಡೆಯಲಿದೆ. ಹೀಗಾಗಿ ಪಥಸಂಚಲನಕ್ಕೆ ಭಗವಾ ಧ್ವಜಗಳು, ಬ್ಯಾನರ್​ಗಳನ್ನು ಅಳವಡಿಸಲಾಗಿತ್ತು. ಆದರೆ ಪರವಾನಗಿ ಇಲ್ಲದೆ ಅಳವಡಿಸಲಾಗಿದೆ ಎಂದು ತಡರಾತ್ರಿ ಚಿತ್ತಾಪುರ ಪುರಸಭೆ ಅಧಿಕಾರಿಗಳಿಂದ ತೆರವು ಮಾಡಲಾಗಿದೆ. ಸದ್ಯ ಇದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:35 pm, Sat, 18 October 25